ವೃತ್ತಿಯ ಒತ್ತಡ ನಿವಾರಣೆಗೆ ಕ್ರೀಡೆಯಿಂದ ನೆಮ್ಮದಿ-ಸಿಪಿಐ ಡಿ.ಸುರೇಶ

Get real time updates directly on you device, subscribe now.

Sports can help relieve professional stress – CPI D. Suresh

ಕೊಪ್ಪಳ : ಪೊಲೀಸರು ಮತ್ತು ಪತ್ರಕರ್ತರು ದಿನದ ೨೪ ಗಂಟೆಯಲ್ಲೂ ಕಾರ್ಯನಿರತರಾಗಿರುತ್ತಾರೆ. ಈ ಎರಡು ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಒತ್ತಡ ಹೆಚ್ಚು. ವೃತ್ತಿಯ ಒತ್ತಡ ನಿವಾರಣೆಗೆ ವರ್ಷಕ್ಕೊಮ್ಮೆ ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು. ಕ್ರೀಡೆಯಿಂದ ಮಾನಸಿಕ ನೆಮ್ಮದಿ ದೊರೆಯುತ್ತದೆ ಎಂದು ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ವೃತ್ತದ ಸಿಪಿಐ ಡಿ.ಸುರೇಶ ಹೇಳಿದರು. .
ಅವರು
ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘ ಕಳೆದ ಆಗಷ್ಟ ತಿಂಗಳಲ್ಲಿ ಪತ್ರಕರ್ತರಿಗಾಗಿ ಹಮ್ಮಿಕೊಂಡಿದ್ದ ಕ್ರಿಕೇಟ್, ರನ್ನಿಂಗ್ ಮತ್ತಿತರ ಕ್ರೀಡಾಕೂಟ ಹಮ್ಮಿಕೊಂಡಿದ್ದರು. ಈ ಕ್ರೀಡಾಕೂಟದಲ್ಲಿ ವಿಜೇತರಾದ ಸಂಘದ ಸದಸ್ಯ ಪತ್ರಕರ್ತರಿಗೆ ಶುಕ್ರವಾರ ನಗರದ ಪತ್ರಿಕಾ ಭವನದಲ್ಲಿ ಬಹುಮಾನ ವಿತರಣೆ ಮಾಡಿ ಅವರು ಮಾತನಾಡಿದರು. ದೈಹಿಕವಾಗಿ ಸದೃಢರಾಗಿದ್ದರೆ ಮಾತ್ರ ಮಾನಸಿ ಮತ್ತು ಬೌದ್ಧಿಕ ವಿಕಾಸವಾಗುತ್ತದೆ. ಹೀಗಾಗಿ ಕ್ರೀಡೆ ಪ್ರತಿಯೊಬ್ಬರಿಗೂ ಅತ್ಯವಶ್ಯವಾಗಿದೆ. ಪತ್ರಕರ್ತರು ನಿತ್ಯ ತಮ್ಮ ವೃತ್ತಿ ಬದುಕಿನ ಒತ್ತಡದಲ್ಲೂ ಎಲ್ಲರು ಸೇರಿ ಕ್ರೀಡಾಕೂಟ ನಡೆಸಿ ಪ್ರತಿಯೊಬ್ಬರನ್ನು ಪಾಲ್ಗೊಳ್ಳುವಂತೆ ಮಾಡಿರುವುದು ಸಂತಸದ ಸಂಗತಿಯಾಗಿದೆ ಎಂದರು.
ಕಾರ್ಯನಿರ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಹನುಮಂತಪ್ಪ ಹಳ್ಳಿಕೇರಿ ಅಧ್ಯಕ್ಷತೆಯಲ್ಲಿ ನಡೆದ ಬಹುಮಾನ ವಿತರಣೆಯ ಸರಳ ಕಾರ್ಯಕ್ರಮದಲ್ಲಿ ಸಂಘದ ರಾಜ್ಯ ಸಮಿತಿ ಸದಸ್ಯ ಎಂ.ಸಾಧಿಕ್ ಅಲಿ,ಹೆಚ್.ಎಸ್.ಹರೀಶ, ರಾಷ್ಟ್ರೀಯ ಸಮಿತಿ ಸದಸ್ಯ ಜಿ.ಎಸ್ ಗೋನಾಳ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜ್. ವೈ,ಜಿಲ್ಲಾ ಖಜಾಂಚಿ, ರಾಜು ಬಿ.ಆರ್, ಜಿಲ್ಲಾ ಉಪಾಧ್ಯಕ್ಷಾದ ರುದ್ರಗೌಡ ಪಾಟೀಲ್, ಜಿಲ್ಲಾ ಕಾರ್ಯದರ್ಶಿ ವೀರಣ್ಣ ಕಳ್ಳಿಮನಿ, ಪತ್ರಿಕಾ ಭವನದ ಕಟ್ಟಡ ಸಮಿತಿ ಅಧ್ಯಕ್ಷರಾದ ನಿಂಗಪ್ಪ ದೊಡ್ಡಮನಿ, ಸದಸ್ಯರಾದ ಮಂಜುನಾಥ ಗೊಂಡಬಾಳ, ಸಿದ್ದು ಹಿರೇಮಠ,ಅಮೀತ್ ಕಂಪ್ಲಿಕಲ್, ಫಕೀರಪ್ಪ ಗೊಟೂರು, ಹರೀಶ್ ಕುಲಕರ್ಣಿ, ಎಂ.ಎಂ ಕುಂದುಗೋಳ, ಉಮೇಶ ಪೂಜಾರ್,ಸೇರಿದಂತೆ ಮತ್ತಿತರರುಇದ್ದರು.

Get real time updates directly on you device, subscribe now.

Comments are closed.

error: Content is protected !!