ಕೊಪ್ಪಳ ಜಿಲ್ಲಾ ಖಜಾನಾಧಿಕಾರಿಯಾಗಿ ಸುರೇಶ್ ಕೆ ಅಧಿಕಾರ ಸ್ವೀಕಾರ
: ಕೊಪ್ಪಳ ಜಿಲ್ಲಾ ನೂತನ ಖಜಾನಾಧಿಕಾರಿಯಾಗಿ ಸುರೇಶ್ ಕೆ ಅವರು ಇತ್ತೀಚೆಗೆ ಅಧಿಕಾರ ವಹಿಸಿಕೊಂಡರು.
ಕೊಪ್ಪಳ ಖಜಾನೆ ಇಲಾಖೆ ಅಧಿಕಾರಿಯಾಗಿದ್ದ ಮೆಹಬೂಬಿ ಅವರು ವರ್ಗಾವಣೆಗೊಂಡಿದ್ದು, ಈ ಸ್ಥಾನಕ್ಕೆ 2008ರ ಕೆಎಎಸ್ ಬ್ಯಾಚಿನ ಸುರೇಶ್ ಕೆ ಅವರನ್ನು ಸರ್ಕಾರ ನೇಮಿಸಿದೆ.
ಸುರೇಶ್ ಕೆ ಅವರು ಈ ಹಿಂದೆ ಗಂಗಾವತಿ ಉಪ ಖಜಾನೆಯ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು. ಪ್ರಸ್ತುತ ಮುಂಬಡ್ತಿ ಹೊಂದಿದ್ದು, ಕೊಪ್ಪಳ ಜಿಲ್ಲಾ ಖಜಾನೆ ಇಲಾಖೆಯ ಉಪನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ
Comments are closed.