ಕುಷ್ಟಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜ ವತಿಯಿಂದ ಎನ್‌ಎಸ್‌ಎಸ್ ಶಿಬಿರ

ಜಾನಪದ_ಸಾಹಿತ್ಯ_ಮತ್ತು_ವ್ಯಕ್ತಿತ್ವ_ವಿಕಸನ

Get real time updates directly on you device, subscribe now.

ಸಮಷ್ಠಿ ಪ್ರಜ್ಞೆಯ ನೆಲೆಯಲ್ಲಿ ಹುಟ್ಟಿದ ಜನಪದ ಸಾಹಿತ್ಯವು ಸಮಾಜದ ಸಮಷ್ಠಿಯ ಜೊತೆಜೊತೆಗೆ ಸಮಾಜದ ಆದರ್ಶ ನಾಗರಿಕರನ್ನು ಸೃಜಿಸುವುದರ ಮೂಲಕ ಶ್ರೇಷ್ಠ ಸಮಾಜವನ್ನು ಕಟ್ಟುವುದರಲ್ಲಿ ಬಹುಮುಖಿ ಪಾತ್ರವನ್ನು ವಹಿಸಿದೆ. ನಮ್ಮ ಜಾನಪದ ಸಂಸ್ಕೃತಿಯು,ರಾಷ್ಟ್ರವನ್ನು ಕಟ್ಟುವಲ್ಲಿ ಸಂವಿಧಾನಿಕ ಆಶಯಗಳ ಅನುಪಾಲನೆಯ ಅಗತ್ಯತೆಯನ್ನು ಸಾರಿ ಹೇಳುವುದರ ಜೊತೆಗೆ ಮೂಲಭೂತ ಕರ್ತವ್ಯಗಳಂತೆ , ಜನಪದ ಸಾಹಿತ್ಯವು ಜನನುಡಿಯ ಮೂಲಕ ಜನರ ವ್ಯಕ್ತಿತ್ವ ವಿಕಾಸನಕ್ಕೆ ತನ್ನದೇ ಆದ ಜವಾಬ್ದಾರಿಯನ್ನು ನಿರ್ವಹಿಸಿದೆ, personality development ಅಂದರೆ ವ್ಯಕ್ತಿತ್ವ ವಿಕಾಸನವನ್ನು ಇಂದಿನ ಸಂದರ್ಭಗಳಲ್ಲಿ ಬಹಳಷ್ಟು ದುಡ್ಡನ್ನು ವ್ಯಹಿಸಿ ದೊಡ್ಡ ನಗರಗಳಲ್ಲಿ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಪಡೆದುಕೊಳ್ಳುವ ಬಗೆಯಂತಾಗಿದ್ದಿಲ್ಲ , ಬದಲಾಗಿ ಅಕ್ಷರದ ಅರಿವಿಲ್ಲದಿದ್ದರೂ ವಿವೇಕ ,ವಿವೇಚನಭರಿತವಾದ ನೀತಿಯುತ್ತ ಆದರ್ಶಗಳ ಮಾತುಗಳನ್ನು ಆಡುವುದರ ಮೂಲಕ ಹಾಡು, ಕಥೆ ,ಒಗಟು ಒಡಪಿನ ಮೂಲಕ ಜನರ ವರ್ತನೆಗಳನ್ನು ನಿಯಂತ್ರಿಸಿ ವ್ಯಕ್ತಿತ್ವವನ್ನು ರೂಪಿಸುವ ಬಹುದೊಡ್ಡ ಹೊಣೆಗಾರಿಕೆಯನ್ನು ಜನಪದ ಸಾಹಿತ್ಯ ನಿರ್ವಹಿಸಿದ್ದೇ ಬಹುದೊಡ್ಡ ಕೊಡುಗೆ ಎನ್ನಬಹುದು. ಆಡು ನುಡಿಯ ಮೂಲಕ ಆಡುವ ಮಕ್ಕಳನ್ನು ತಿದ್ದಿ ತೀಡಿ ಬದುಕಿನ ಪಾಠ ಹೇಳಿ ಕೊಟ್ಟಿದ್ದನ್ನು ಮರೆಯಲಾದಿತೆ.
*ಕಣ್ಣಾಮುಚ್ಚೆ ಕಾಡೆ ಗೂಡೆ
ಉದ್ದಿನ ಮೂಟೆ ಉರುಳೆ ಹೋಯಿತು
ನಮ್ಮಯ ಹಕ್ಕಿ ಬಿಟ್ಟೆ ಬಿಟ್ಟೆ
ನಿಮ್ಮಯ ಹಕ್ಕಿ ಜೋಕೆ ಜೋಕೆ*
ಜನಪದ ಕವಿಯು ಅಂದು ಕಟ್ಟಿದ ಕವಿತೆ ಮನುಷ್ಯನ ಬದುಕಿಗೆ ನೀಡಿದ ಸಂದೇಶವಿದು ಬದುಕಿನ ಸಾರ್ಥಕತೆ ಮತ್ತು ಬಾಳುವ ರೀತಿ ಹೇಗಿರಬೇಕು ಎಂಬುದನ್ನು ಸೂಚ್ಯವಾಗಿ ಹೇಳುವಂತಿದೆ ಮನುಷ್ಯನ ಬದುಕು ಜೀವ ಇರುವ ತನಕ ಮಾತ್ರ ಈ ದೇಹದೊಳಗಿರುವ ಜೀವ ಹೊರಟು ಹೋದ ಮೇಲೆ ಈ ದೇಹಕ್ಕೆ ಕಾಡೆಗೂಡು ಅಂದರೆ ಸುಡುಗಾಡು ,ಸ್ಮಶಾನವೇ ದಿಕ್ಕು ಎಲ್ಲಾ ಧಾನ್ಯಗಳಲ್ಲಿ ಗಟ್ಟಿಯಾಗಿರುವ ಧಾನ್ಯ ಉದ್ದು, ಉದ್ದಿನಂತ ಗಟ್ಟಿಯಾಗಿರುವ ಮನುಷ್ಯನ ದೇಹ ಇದ್ದಕ್ಕಿದ್ದಂತೆ ಉರುಳಿ ಹೊರಟಾಗ ಈ ದೇಹಕ್ಕೆ ದಿಕ್ಕು ಸುಡಗಾಡು, ಹೋದವರೆಲ್ಲ ಒಳ್ಳೆಯವರು ಹರಸುವ ಹಿರಿಯರು ಎನ್ನುವ ಮಾತಿನಂತೆ ಹೊರಟು ಹೋಗುವ ಜೀವ, ಬದುಕಿ ಬಾಳುವ ಜೀವಗಳಿಗೆ ಸಂದೇಶವಿಕ್ಕಿ ನಿಮ್ಮ ಜೀವಗಳನ್ನು ಜೋಪಾನವಾಗಿಟ್ಟುಕೊಳ್ಳಿ , ಇನ್ನೊಬ್ಬರಿಗೆ ಪರೋಪಕಾರ ರೀತಿಯಲ್ಲಿ ಬದುಕಿ ಎನ್ನುವ ಜೀವಪರ ಸಂದೇಶವನ್ನು ನೀಡಿಹೋಗುವ ಕ್ಷಣಗಳನ್ನು ಜನಪದ ಕವಿ ತನ್ನ ಆಡು ನುಡಿಯ ಮೂಲಕ ಆದರ್ಶ ನೀತಿಯನ್ನ ಬಿಟ್ಟು ಹೋಗಿದ್ದಾನೆ.
ವ್ಯಕ್ತಿತ್ವವನ್ನು ಕಟ್ಟಿಕೊಡುವಲ್ಲಿ ತಾಯಿಯ ಪಾತ್ರ ಬಹುದೊಡ್ಡದು, ಮನೆಯೇ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರು ಎನ್ನುವಂತೆ ತಾಯಿಯಾದವಳು ತನ್ನ ಮಕ್ಕಳು ಉತ್ತಮ ನಾಗರಿಕರಾಗಿ ಸಮಾಜದಲ್ಲಿ ಗೌರವ ಆಧಾರಗಳಿಂದ ಬದುಕಿ ಬೆಳೆಯಬೇಕು ಎನ್ನುವ ತಾಯಿಯ ಮಹದಾಸಿಯು . ಹಾಡಿನ ಝರಿಯಾಗಿ ಹರಿದಿದ್ದು ಬಹಳ ವೈಶಿಷ್ಟ ಪೂರ್ಣವಾಗಿದೆ.
ಒಳ್ಳೆವರ ಗೆಳೆತನ ಕಲ್ಲು ಸಕ್ಕರೆ ಹಾಂಗ
ಕುಲ್ಲರ ಗೆಳೆತನ ಮಾಡಿದರೆ
ನನಕಂದ
ಸಲ್ಲದ ಮಾತು ಬರುತಾವ
ಆಚಾರಕರಸಾಗು ನೀತಿಗೆ ಪ್ರಭುವಾಗು
ಮಾತಿನೋಳ ಚೂಡಾಮಣಿ ಯಾಗು
ನನ್ನ ಕಂದ
ಜ್ಯೋತಿಯಾಗು ಜಗಕೆಲ್ಲಾ
ಪ್ರತಿಯೊಬ್ಬ ತಾಯಿಯು ತನ್ನ ಮಗ ಹೀಗೆ ಬೆಳೆಯಬೇಕು ಎನ್ನುವ ಕನಸು ಆಕಿಯದು, ಒಳ್ಳೆಯ ನಡೆ, ನುಡಿ ಆಚಾರ ವಿಚಾರ ರೂಡಿಸ್ಕೊಂಡು ಸಮಾಜದಲ್ಲಿ ಹಿರಿಯರನ್ನು ಗೌರವಿಸುತ್ತಾ ಸಾಮಾಜಿಕ ಇಚ್ಛೆ ಗಳಿಗೆ ಅನುಗುಣವಾಗಿ ಒಳ್ಳೆಯವನಾಗಿ ಬದುಕಬೇಕು ಎನ್ನುವ ಆಸೆ ತಾಯಿಯದು. ಹಿರಿಯರನ್ನು ಕಂಡಾಗ ಗೌರವದಿಂದ ನಡೆದುಕೊಳ್ಳುವ, ತನಗಿಂತ ಕಿರಿಯರನ್ನು ಕಂಡಾಗ ಪ್ರೀತಿಯಿಂದ ವರ್ತಿಸುವ, ಗುರುಹಿರಿಯರ ಮಾತಿಗೆ ತಲೆಬಾಗಿ ನಡೆಯುವ ಆದರ್ಶವಂತ ಮಗ ನೀನಾಗು ಎನ್ನುವುದು ತಾಯಿಯ ಬಯಕೆ ಎಂಬುವುದು ಜನಪದ ತ್ರಿಪದಿಗಳಲ್ಲಿ ಅಭಿವ್ಯಕ್ತಿಗೊಂಡಿದೆ.
ತನ್ನ ಪಡಿಯುಚ್ಚಿನಂತೆ ,ನೆರಳಿನಂತೆ ಬೆಳೆಯುವ ಮಗಳು ತಂದೆ ತಾಯಿ ತವರೂರ ಹೆಸರನ್ನು ತರಬೇಕು ಎನ್ನುವುದು ಆಕೆಯ ಮಹಾದಾಸೆ ಜನಪದ ತ್ರಿಪದಿ ಹಾಡುಗಳಲ್ಲಿ ಹೆಣ್ಣು ಮಗಳಿಗೆ ತಾಯಿಯ ಬುದ್ಧಿವಾದ ಹೇಳುವ ಜನಪದ ತ್ರಿಪದಿಗಳನ್ನು ಯಥೇಚ್ಛವಾಗಿ ಕಾಣಲು ಸಾಧ್ಯವಾಗುವುದಾದರೂ, ಗಂಡುಮಕ್ಕಳಿಗೆ ತಾಯಿ ಮತ್ತು ತಂದೆ ಬುದ್ಧಿವಾದ ಹೇಳುವ ಅವರ ವ್ಯಕ್ತಿತ್ವವನ್ನು ತಿದ್ದಿ ನೀಡುವ ಸಾಹಿತ್ಯ ಬಹಳಷ್ಟು ಪ್ರಕಟಗೊಳ್ಳದೆ ಇರುವುದು ಒಂದು ರೀತಿಯ ತಾರತಮ್ಯವೆ ಎಂಬಂತೆ ಬಿಂಬಿಸಲ್ಪಟ್ಟಿದೆ.
ಹೆಣ್ಣು ಮಕ್ಕಳ ಮೇಲೆ ಕಟ್ಟುಪಾಡುಗಳನ್ನು ಹೇರಿ ಅವರ ನಡವಳಿಕೆಗಳನ್ನು ,ವರ್ತನೆಗಳನ್ನು ನಿಯಂತ್ರಿಸುವ ಪ್ರಮಾಣ ಹೆಜ್ಜೆ ಎನ್ನಬಹುದಾದರೂ ಈ ತರದ ಪ್ರಯೋಗ ಗಂಡು ಮಕ್ಕಳ ನಡವಳಿಕೆ ವರ್ತನೆಯನ್ನ ತಿದ್ದಿ ತಿಳುವಲ್ಲಿ ಅಷ್ಟು ಯಥೇಚ್ಛವಾದ ಸಾಹಿತ್ಯ ರಚನೆಯಾಗದಿರುವುದು ಶೋಚನೀಯ ಸಂಗತಿಯಾಗಿದೆ.
ಲಿಂಗ ಅಸಮಾನತೆಯನ್ನು ಮಹಿಳಾ ಶೋಷಣೆಯನ್ನು ಪೋಷಿಸಿಕೊಂಡ ಬಂದ ಅನೇಕ ಮಾಧ್ಯಮಗಳಲ್ಲಿ ಜನಪದಕ್ಕೂ ಒಂದಿಷ್ಟು ಪಾಲಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಹಾಗಂತ ಜನಪದರು ವೈಚಾರಿಕ ನೆಲೆಗಟ್ಟಿನಲ್ಲಿ ಸಾಹಿತ್ಯವನ್ನು ಸೃಷ್ಟಿಸಿಲ್ಲ ವೆಂದಲ್ಲಾ ತೀರಾ ಕಡಿಮೆ ಎನ್ನಬಹುದು,
ಅತ್ತೆಯ ಮನಿಯಾಗ ಮುತ್ತಾಗಿ ಬಾಳವ್ವ
ಹೊತ್ತಾಗಿ ನೀಡಿದರ ಉಣಬೇಕು ನನ ಮಗಳೆ
ತವರಿನ ಹೆಸರು ತರಬೇಕಾ
ಕರಿಸೀರೆ ಉಡಬೇಡಾ ಕಡಿವಾಣ ಹಾಕಬೇಡಾ
ನಡುಬೀದ್ಯಾಗ ನಿಂತು ನಗಬೇಡಾ ನನ್ನ ಮಗಳು ತುಂಬಿದ ಮನೆಯಾ ಓಡಿಬೇಡಾ
ಮಹಿಳೆಯರಿಗೆ ಬಟ್ಟೆ ಹಾಕಿಕೊಳ್ಳುವ, ಮುಕ್ತವಾಗಿ ಮಾತನಾಡುವ ಸಾಂರ್ಭಿಕವಾಗಿ ನಗುವ ಸ್ವಾತಂತ್ರ್ಯವು ಆ ಸಂದರ್ಭದಲ್ಲಿ ಹರಣ ಆಗಿತ್ತು ಎನ್ನುವುದಕ್ಕೆ ಈ ಹಾಡಿನಲ್ಲಿರು ಸಾಹಿತ್ಯವೇ ಸಾಕ್ಷಿ. ಜೀವವಿರೋಧಿ ನೆಲೆಗಟ್ಟಿನಲ್ಲಿ ಜನಪದ ಸಾಹಿತ್ಯ ಕಟ್ಟಲ್ಪಟ್ಟಿರುವುದು ಪ್ರಶ್ನೆರ್ಹಾವೇ ಸರಿ.
ದುಡ್ಡು ಕೊಟ್ಟರೆ ಈ ಜಗತ್ತಿನಲ್ಲಿ ಎಲ್ಲಾ ಸಿಗುತ್ತೆ ಆದರೆ ಜನ್ಮನಿಡಿದ ತಾಯವ್ವ ಮತ್ತೆಂದು ಮರಳಿ ಸಾಗುವುದಿಲ್ಲ ಆ ಕಾರಣಕ್ಕೆ ತಂದೆ ತಾಯಿಗಳನ್ನು ಚೆನ್ನಾಗಿ ನೋಡಿಕೊಳ್ಳಿ,ಅವರ ಪ್ರೀತಿಯನ್ನು ಗಳಿಸಿ ಆ ಮೂಲಕ ತಂದೆತಾಯಿಯ ತ್ಯಾಗ,ಅವರ ಪರಿಶ್ರಮ ವ್ಯರ್ಥವಾಗಲು ಬಿಡದೆ ಸಾರ್ಥಕ ಬದುಕನ್ನು ಬಾಳಿ ಎಂಬ ಸಂದೇಶ ರವಾನಿಸಿತ್ತೆ.
ತಿಳಿಗೇಡಿ ನನ ತಮ್ಮ ತಾಯವ್ವನ ಬೈಬ್ಯಾಡ
ಬಾಳದಿನದ್ಯಾಕೆ ಹಡೆದೆವ್ವ ಬೈದರೆ
ಬಾಳ ಮರುಗ್ಯಾಳ ಮನದಾಗ
ತಂದೆಯ ನೆನೆದರೆ ತಂಗಳು ಬಿಸಿಯ್ಯಾತು
ಗಂಗಾದೇವಿ ನನ್ನ ಹಡೆದವನ ನೆನೆದರೆ
ಮಾಸಿದ ತಲೆಯು ಮಡಿಯಾತು
ಮನುಷ್ಯನ ಜೀವ ಜಗತ್ತಿನ ಅರ್ನಘ್ಯ ರತ್ನ ಅವರೇ ತಂದೆತಾಯಿ ಮಾತ್ರ ಅವರನ್ನು ನೊಯಿಸದೆ ಬಾಳಿ, ಸಂಕಷ್ಟದಲ್ಲಿ ತಾಯಿ ನೆನೆದರೆ ಬಂದ ಸಂಕಷ್ಟ ದೂರಾಗುತ್ತದೆ ಎಂಬ ದಿವ್ಯ ಸಂದೇಶದ ಮೂಲಕ ಜನಪದ ಸಾಹಿತ್ಯ ಮಗುವಿನ ವ್ಯಕ್ತಿತ್ವ ವಿಕಸನ ಪ್ರಕ್ರಿಯೆಯಲ್ಲಿ ತನ್ನ ಪಾಲು ಪಡೆದಿದೆ.
ಗಟ್ಟಿಮನಸ್ಸು ಮಾಡಿ ಗುಟ್ಟೋಂದು ಹೇಳುವೇನು
ಪಟ್ಟಿಂಗರ ಸಹವಾಸ ಮಾಡಬಾರದು …..
ಜನಪ್ರಿಯ ಜನಪದ ಗೀತೆ ನಾವು ರೊಡಿಸಿಕೊಳ್ಳಬೇಕಾದ ಗುಣಗಳು ಮತ್ತು ಆ ಮೂಲಕ ಗಳಿಸಿಕೊಳ್ಳಬೇಕಾದ ಅಗತ್ಯ ವ್ಯಕ್ತಿತ್ವದ ಕುರಿತು ಹೇಳುತ್ತಾ ಸಿಂದಿ ಸಾರಾಯಿ ಕುಡಿತ ನಮ್ಮ ವ್ಯಕ್ತಿತ್ವ, ಆರೋಗ್ಯ ,ಹಣ ಎಲ್ಲವನ್ನೂ ಹಾಳು ಮಾಡುವುದರ ಜೊತೆಗೆ ಸಮಾಜದಲ್ಲಿ ಅನುಪಯುಕ್ತ ರೋಗಗ್ರಸ್ತ ನಾಗರಿಕನಾಗಿ ಬಾಳುತ್ತಾನೆಂದ ಎಚ್ಚರಿಕೆ ನೀಡಿದೆ. ಪರಿಸರ ಸಂರಕ್ಷಣೆ, ಕೌಟುಂಬಿಕ ಮೌಲ್ಯಗಳು, ರಾಷ್ಟ್ರೀಯ ಸ್ವಾತಂತ್ರ್ಯ ಹೋರಾಟಗಾರ ಆದರ್ಶಗಳನ್ನು ಮೈಗೂಡಿಸಿಕೊಳ್ಳುವುದರ ಜೊತೆಗೆ ಸಮಾಜದಲ್ಲಿ ಪರಸ್ಪರ ಸಹಕಾರ,ಕೊಡಿಬಾಳುವ, ಬೆಳೆಯುವ, ಸೌಹಾರ್ದತೆ, ಭಾವೈಕ್ಯತೆಯಿಂದ ಬದುಕು ಕಟ್ಟಿಕೊಳ್ಳಲು ಅನೇಕ ಪ್ರೇರಣೆಗಳನ್ನು ಮನುಷ್ಯನ ಬದುಕಿಗೆ ನೀಡಿದೆ.
ಕಲ್ಲುಕೊಟ್ಟವಳಿಗೆ ಎಲ್ಲಾ ಭಾಗ್ಯವ ಬರಲಿ ಪಲ್ಲಕ್ಕಿ ಮೇಲೆ ಮಗಬರಲಿ ಈ ಮನೆಗೆ ಮಲ್ಲಿಗೆ ಮುಡಿಯುವ ಸೊಸೆ ಬರಲಿ ಎಂದು ಹಾರೈಸುವ ವೈಶಿಷ್ಟ್ಯತೆ ಜಾನಪದರು ಮೈಗೂಡಿಸಿಕೊಂಡು ಬಂದಿದ್ದೆ. ಕೃತಜ್ಞತಾ ಭಾವ ಪಸರಿಸಿದ ಬಗೆ ಹೀಗೆಯೇ. ಈ ಸಂದರ್ಭದಲ್ಲಿ ಪ್ರಾಚಾರ್ಯರಾದ ಡಾ. ಎಸ್ ವಿ ಧಾಣಿ, ಪ್ರಾಧ್ಯಾಪಕರಾದ   ರವಿ ಹಾದಿಮನಿ  ಅಶೋಕ ಕೆಂಚ ರೆಡ್ಡಿ ಶ್ರೀಮತಿ ರತ್ನ ಪಡಿ,    ಭೋಜರಾಜ್ ಏನ್ ಎಸ್ ಎಸ್ ಶಿಬಿರಾಧಿಕಾರಿ ಮತ್ತು ವಿದ್ಯಾರ್ಥಿಗಳು ಜೊತೆಗಿದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: