ಕೊಪ್ಪಳದಲ್ಲಿ ಯತ್ನಾಳ ವಿರುದ್ಧ ದೂರು ದಾಖಲು
ಕೊಪ್ಪಳ : ಮಾದ್ಯಮದ ಮುಂದೆ ಬಹಿರಂಗವಾಗಿ ದಲಿತ ಮಹಿಳೆಯರನ್ನು ನಿಂದಿಸಿ ಅವಮಾನ ಮಾಡಿದ ಆರೋಪದ ಮೇಲೆ ಬಿಜಾಪುರ ನಗರ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ ವಿರುದ್ಧ ಪ್ರಕರಣ ದಾಖಲಾಗಿದೆ
ದಲಿತ ವಿಮೋಚನೆಯ ಮಾನವ ಹಕ್ಕುಗಳ ವೇದಿಕೆ-ಕರ್ನಾಟಕ ದ ಜಿಲ್ಲಾ ಸಂಚಾಲಕ ಮಲ್ಲು ಪೂಜಾರ ಈ ಕುರಿತು ದೂರು ನೀಡಿದ್ದು
ದಲಿತರ ಮೇಲೆ ಅವಹೇಳನ ಮಾಡಿದ ವಿಡಿಯೋ ಖಾಸಗಿ ವಾಹಿನಿಯ ಮುಖಾಂತರ ಪ್ರಸಾರವಾಗಿತ್ತು.ಅದರಲ್ಲಿ ಬಸನಗೌಡ ಆರ್ ಪಾಟೀಲ್ ಯತ್ನಾಳ ಮೈಸೂರಿನ ಚಾಮುಂಡೇಶ್ವರಿ ಬೆಟ್ಟದಲ್ಲಿ ಹಿಂದುಗಳ ನಾಡಹಬ್ಬ ಮೈಸೂರು ದಸರಾ ಉದ್ಘಾಟನೆಯನ್ನು ಮಾಡುತ್ತಿರುವವರ ವಿರುದ್ದ ಹೇಳಿಕೆ ನೀಡುವ ಬರದಲ್ಲಿ ಅಥವಾ ಪ್ರಚಾರದ ಗೀಳು ಪಡೆದುಕೊಳ್ಳುವ ಬರದಲ್ಲಿ ಸನಾತನ ಧರ್ಮದವರು ಮಾತ್ರ ದಸರಾಹಬ್ಬದಲ್ಲಿ ನಾಡಿನ ಚಾಮುಂಡಿ ದೇವಿಗೆ ಹೂ ಮುಡಿಸಬೇಕು ಹೊರತು ಒಬ್ಬ ಸಾಮಾನ್ಯ ದಲಿತ ಮಹಿಳೆಗೆ ಕೂಡ ಅವಕಾಶ ಇಲ್ಲಾ ಎಂದು ಸಾರ್ವಜನಿಕವಾಗಿ,ಬಹಿರಂಗವಾಗಿ ದಲಿತ ಹೆಣ್ಣುಮಕ್ಕಳಿಗೆ ಹಾಗೂ ಇಡಿ ದಲಿತ ಸಮುದಾಯಕ್ಕೆ ಅವಮಾನ ಮಾಡಿದ್ದು ಅಲ್ಲದೆ ತನ್ನ ವಿಕೃತ ಮನಸ್ಥಿತಿಯಯನ್ನು ಮೆರೆದಿದ್ದಾನೆ.ಹಿಂದುಗಳ ದರ್ಮದಲ್ಲಿಯೇ ಬರುವ ದಲಿತ ಹೆಣ್ಣುಮಕ್ಕಳನ್ನು ಅತ್ಯಂತ ಕೀಳುಮಟ್ಟದಲ್ಲಿ ಸಾರ್ವಜನಿಕವಾಗಿ ನಿಂದಿಸುವುದು, ಅವಮಾನ ಮಾಡುವುದು ಎಷ್ಟು ಸರಿ, ?
ಹಾಗಾಗಿ ಇಂತಹ ಕೊಳಕು ಮನಸ್ಥಿತಿಯ ಮತ್ತು ದಿನಾಲು ಕೂಡ ಕರ್ನಾಟಕದ ಮೂಲೆಮೂಲೆಗಳಲ್ಲಿ ರಾಜ್ಯದಲ್ಲಿ ಕೋಮು ಸಂಘರ್ಷದ ಹೇಳಿಕೆ, ಪ್ರಚೋದನಕಾರಿ ಹೇಳಿಕೆ,ಯುವಕರನ್ನು ದಾರಿ ತಪ್ಪಿಸುವ ಕೆಲಸ, ದಲಿತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು ಇವರ ದಿನನಿತ್ಯದ ಅಭ್ಯಾಸವಾಗಿದ್ದು ಕೂಡಲೇ ಈ ಹೇಳಿಕೆ ನೀಡಿದ ವಿಡಿಯೋ ಆಧಾರದಲ್ಲಿ ಇವರ ಮೇಲೆ ಎಸ್‌ಸಿ.ಎಸ್‌ಟಿ.ದೌರ್ಜನ್ಯ ಕಾಯ್ದೆಯ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರು ನೀಡಿದ್ದಾರೆ.

Comments are closed.