ಬೈಕ್ ನ ಹಿಂಬದಿಗೆ ಸಾರಿಗೆ ಬಸ್ ಡಿಕ್ಕಿ : ಬೈಕ್ ಸವಾರ ಮೃತ

Get real time updates directly on you device, subscribe now.

ಕುಷ್ಟಗಿ
ಸಮೀಪದ ಗುಮಗೇರಾ ಗ್ರಾಮದ ಹತ್ತಿರ ಬೈಕ್ ನ ಹಿಂಬದಿಗೆ ಸಾರಿಗೆ ಬಸ್ ಡಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟಿರಯವ ಘಟನೆ ಸೋಮವಾರ ಜರುಗಿದೆ.

ಮೃತ ಬೈಕ್ ಸವಾರ ಮದಲಗಟ್ಟಿ ಗ್ರಾಮದವರು ಹಾಲಿ ವಸ್ತಿ ಕುಷ್ಟಗಿ ಪರಶುರಾಮ ತಂದೆ ಭೀಮಪ್ಪ‌ ಮೋಡಿಕಾರ (ವಯಸ್ಸು45) ಎಂದು ಗುರುತಿಸಲಾಗಿದೆ. ಬೈಕ್ ಸವಾರ ಪರಶುರಾಮ ತನ್ನ ಬೈಕ್ ಮೇಲೆ ತಾವರಗೇರಾ ಕಡೆ ಕೆಲಸಕ್ಕೆ ಹೋಗುವಾಗ ಮಾರ್ಗಮಧ್ಯದ ಗುಮಗೇರಿ ಗ್ರಾಮದ ಬಳಿ ಚಲುಸುತ್ತಿದ್ದ ಬೈಕ್ ಗೆ ಕುಷ್ಟಗಿ ‌ಸಾರಿಗೆ ಘಟಕಕ್ಕೆ ಸೇರಿದ ಬಸ್ ಹಿಂಬದಿಯಿಂದ ಡಿಕ್ಕಿಯಾದ ಪರಿಣಾಮ‌ ಬೈಕ್ ಸವಾರ ಸ್ಥಳದಲ್ಲಿ ಮೃತಪಟ್ಟಿದ್ದಾನೆ. ಬಸ್ ನಲ್ಲಿ ಹಲವು ಪ್ರಯಾಣಿಕರಿದ್ದು, ಬಸ್ ನ್ನು ನಿಯಂತ್ರಿಸುವಲ್ಲಿ ಚಾಲಕ ಹರಸಾಹಸ ಪಟ್ಟು ನಿಲ್ಲಿಸಿದ್ದಾರೆ. ಇಲ್ಲದಿದ್ದರೆ ಬಾರಿ ಅನಾಹುತ ಆಗುವ ಸಂಭವವಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಸಿಪಿಐ ಯಶವಂತ ಬಿಸನಹಳ್ಳಿ, ಪಿಎಸ್ ಐ ಹನಮಂತಪ್ಪ ತಳವಾರ ಭೇಟಿ ನೀಡಿದರು.
ಈ‌ ಕುರಿತು ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Get real time updates directly on you device, subscribe now.

Comments are closed.

error: Content is protected !!