ಪ್ಯಾರ ಓಲಂಪಿಕ್ ಕ್ರೀಡಾಕೂಟದಲ್ಲಿ ದಿವ್ಯಾಂಗರ ಕ್ರಿಕೆಟ್ ಸೇರ್ಪಡೆಗೊಳ್ಳಲಿ : ಶಿವರಾಮ್ ಗೌಡ

Get real time updates directly on you device, subscribe now.

ವಿಕಲಚೇತನರ ರಾಜ್ಯ ಮಟ್ಟದ ಕ್ರಿಕೆಟ್: ಬೆಂಗಳೂರು ವಾರಿರ‍್ಸ್ ಪ್ರಥಮ ಸ್ಥಾನ

ಗಂಗಾವತಿ: ವಿಕಲ ಚೇತರಿಗೆ ವಿವಿಧ ಸೌಲಭ್ಯ ಒದಗಿಸಿಕೊಡಲು ಸರಕಾರಗಳು ಮುಂದಾಗಬೇಕಿದ್ದು, ಪ್ಯಾರಾ ಒಲಂಪಿಕ್ ಕ್ರೀಡಾ ಕೂಟದಲ್ಲಿ ವಿಕಲಚೇತನರಿಗು ಕ್ರಿಕೆಟ್ ಆಡುವ ಅವಕಾಶ ಕಲ್ಪಿಸಬೇಕು ಎಂದು ಮಾಜಿ ಸಂಸದ ಶಿವರಾಮಗೌಡ ಹೇಳಿದರು.
ಅವರು ನಗರದ ತಾಲೂಕು ಕ್ರೀಡಾಂಗಣದಲ್ಲಿ ಕಿಷ್ಕಿಂದಾ ಕಿಂಗ್ ದಿವ್ಯಾಂಗ ಸ್ಪೋರ್ಟ್ಸ್ ಅಕಾಡೆಮಿಯಿಂದ ಡಾ.ಅಶೋಕ ಡಂಬರ ನೇತೃತ್ವದಲ್ಲಿ ಜರುಗಿದ ಕಿಷ್ಕಿಂದಾ ಕಪ್ ೨೦೨೫ ವಿಕಲಚೇತನರ ರಾಜ್ಯಮಟ್ಟದ ಕ್ರೀಡಾಕೂಟ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಸೂಕ್ತ ಅವಕಾಶ ಕಲ್ಪಿಸಿದರೆ ವಿಕಲಚೇತನರು ಅಮೋಘ ಸಾಧನೆ ಮಾಡುವ ಸಾಮರ್ಥ್ಯ ಹೊಂದಿದ್ದಾರೆ ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗಂಗಾವತಿ ತಾಲೂಕು ಘಟಕದ ಅಧ್ಯಕ್ಷ, ಸಿಜಿಕೆ ನಾಗರಾಜ್ ಇಂಗಳಗಿ ಮಾತನಾಡಿ, ರಾಜ್ಯಮಟ್ಟದ ವಿಕಲಚೇತನರ ಕ್ರೀಡಾ ಕೂಟ ಗಂಗಾವತಿಯಲ್ಲಿ ಆಯೋಜಿಸುವ ಮೂಲಕ ವಿಕಲಚೇತನರು ಅವಕಾಶ ಸೃಷ್ಟಿಸಿಕೊಳ್ಳುವ ಪ್ರೌಢಿಮೆ ಹೊಂದಿದ್ದಾರೆ ಎಂದು ಸಾಬೀತು ಪಡಿಸಿದ್ದಾರೆ. ಕೊಪ್ಪಳ ಜಿಲ್ಲೆಯ ಕಾರ್ಖಾನೆಗಳ ಆರ್ಥಿಕ ಸಹಕಾರದಿಂದ ದಿವ್ಯಾಂಗರ ಕ್ರೀಡೆಗೆ ಅಗತ್ಯ ಸೌಕರ್ಯ ಒದಗಿಸಲು ಕೊಪ್ಪಳ ಕ್ರೀಡಾ ಇಲಾಖೆ ಮುಂದಾಗಬೇಕೆAದು ಕಿವಿಮಾತು ಹೇಳಿದರು. ಕ್ರಿಕೆಟ್‌ನಲ್ಲಿ ವಿಜೇತ ತಂಡಗಳಾದ ಬೆಂಗಳೂರು ವಾರಿರ‍್ಸ್ (ಪ್ರಥಮ), ಕೊಪ್ಪಳ ಟೈರ‍್ಸ್ (ದ್ವಿತೀಯ), ಸ್ಥಾನ ಬೆಳಗಾವಿ ಸೂಪರ್ ಸ್ಟೆçöÊಕರ್ (ತೃತೀಯ) ಬಹುಮಾನ ವಿತರಿಸಲಾಯಿತು.
ಇನ್ನುಳಿದಂತೆ ಅಭಿಷೇಕ್ ಸ್ವಾಮಿ ಕಲಬುರ್ಗಿ ಬೆಸ್ಟ್ ಮ್ಯಾನ ಆಫ್ ಸಿರೀಸ್, ಸಂತೋಷ್ ಮದಾನಿ ಬೆಸ್ಟ್ ಬೌಲರ್, ಶಶಿಕುಮಾರ್ ಎಮರ್‌ಜೆನ್ಸಿ ಪ್ಲೆಯರ್ ಬಹುಮಾನ ವಿತರಿಸಲಾಯಿತು. ವಿಕಲಚೇತನರ ಅಂತಾರಾಷ್ಟಿçÃಯ ಮಟ್ಟದ ಆಟಗಾರ ಸಾಗರ್ ಲಮಾಣಿ ಬಿಜಾಪುರ, ಶಶಿಕುಮಾರ್, ಹರೀಷ್ ಕುಮಾರ್, ಪ್ರವೀಣ್ ಕಳ್ಳಾ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ವೇದಿಕೆಯಲ್ಲಿ ವಿಕಲಚೇತನರ ಕಲ್ಯಾಣಾಧಿಕಾರಿ ವೆಂಕಟೇಶ್ ದೇಶಪಾಂಡೆ, ಮಹಾನ್ ಕಿಡ್ಸ್ ಅಧ್ಯಕ್ಷ ನೇತ್ರಾಜ್ ಗುರುವಿನಮಠ, ಅಕಾಡೆಮಿಯ ಅಧ್ಯಕ್ಷ ಡಾ.ಅಶೋಕ ಡಂಬರ, ಯುವ ಉದ್ಯಮಿಗಳಾದ ಸೈಯ್ಯದ್ ಮೀರಾ, ಕನ್ನಡ ಜಾಗೃತಿ ವೇದಿಕೆ ಸೈಯ್ಯದ್ ಅಸ್ಲಾಂ, ಬಿಬಿಸಿ ಕಾಲೇಜು ಪ್ರಾಂಶುಪಾಲರಾದ ಜಾರ್ಜ್ ಹೊನ್ನಳ್ಳಿ, ಕೊಪ್ಪಳ ಯುವ ಸಬಲೀಕರಣ ಹಾಗು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ಬಾಬುಗೌಡ್ರು, ತಾ.ಪಂ.ವ್ಯವಸ್ಥಾಪಕ ನಿಜಾಮುದ್ದೀನ್ ವಿಕಲಚೇತನರ ಹಕ್ಕುಗಳ ಹೋರಾಟಗಾರರಾದ ಮಂಜುನಾಥ ಹೊಸಕೇರಾ ಇತರರಿದ್ದರು.

Get real time updates directly on you device, subscribe now.

Comments are closed.

error: Content is protected !!