ಸಂಸ್ಕಾರದಿಂದ ಜೀವನ ಪಾವನ – ಶ್ರೀ ಸಿದ್ದೇಶ್ವರ ಶಿವಾಚಾರ್ಯರು

Get real time updates directly on you device, subscribe now.


ಕೊಪ್ಪಳ,: ಜಂಗಮರು ಪೂರ್ವಜರ ಆಚಾರ ವಿಚಾರಗಳನ್ನು ಅರಿತು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಧರ್ಮರಕ್ಷಣೆಗೆ ಮುಂದಾಗಬೇಕು.
ಪ್ರತಿಯೊಬ್ಬ ಮನುಷ್ಯ ಧರ್ಮ ಸಂಸ್ಕಾರಗಳ ಅರಿವು ಹೊಂದುವುದು ಅವಶ್ಯ. ಜತೆಗೆ ಅದನ್ನು ಪಾಲಿಸಿದರೆ ಜೀವನ ಪಾವನವಾಗುವುದು ಎಂದು ಮೈನಳ್ಳಿ-ಬಿಕನಳ್ಳಿ ಷ.ಬ್ರ.108 ಶ್ರೀ ಸಿದ್ದೇಶ್ವರ ಶಿವಾಚಾರ್ಯ
ಮಹಾಸ್ವಾಮಿಗಳು ಹೇಳಿದರು.
ನಗರದ ಶ್ರೀ ರೇಣುಕಾಚಾರ್ಯ ಮಂದಿರದಲ್ಲಿ ಶ್ರೀ ವೀರಮಹೇಶ್ವರ ಕ್ಷೇಮಾಭಿವೃದ್ಧಿ ಸಂಘ, ಪತ್ತಿನ ಸಹಕಾರ ಸಂಘ ಇವುಗಳ ವಾರ್ಷಿಕ ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರದ ಪ್ರಯುಕ್ತ ಭಾನುವಾರ ಆಯೋಜಿಸಿದ್ದ ಜಂಗಮ ವಟುಗಳಿಗೆ ಅಯ್ಯಾಚಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. 8 ವರ್ಷ ವಯಸ್ಸಿನ ಎಲ್ಲ ಜಂಗಮರು ಸಂಪ್ರದಾಯದಂತೆ ಅಯ್ಯಾಚಾರ ದೀಕ್ಷೆ ಪಡೆಯಬೇಕು. ಇಂದು ಶಿವದೀಕ್ಷಾ ಪಡೆದ ವಟುಗಳು ತಮ್ಮ ಜೀವನದುದ್ದಕ್ಕೂ ನಿತ್ಯ ಸ್ನಾನದ ನಂತರ ಶಿವಪೂಜೆ ನೆರವೇರಿಸಬೇಕು ಇದರಿಂದ ನಿಮ್ಮ ಭವಿಷ್ಯಕ್ಕೆ ಭದ್ರ ಬುನಾದಿ ದೊರೆಯುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು. ವೀರಶೈವ ಧರ್ಮ ಪರಂಪರೆಯಲ್ಲಿ ಬರುವ 16 ಸಂಸ್ಕಾರಗಳಲ್ಲಿ ಅತ್ಯಂತ ಶ್ರೇಷ್ಠವಾದ ಸಂಸ್ಕಾರವೇ ದೀಕ್ಷಾ ಸಂಸ್ಕಾರ. ಭಗವಂತನನ್ನು ಸಾಕ್ಷಾತ್ಕಾರ ಮಾಡಿಕೊಳ್ಳುವ ಮಾರ್ಗವೇ ದೀಕ್ಷೆಯಾಗಿದೆ. ಈ ಪರಂಪರೆಯಲ್ಲಿ ಅನಾದಿ ಕಾಲದಿಂದಲೂ ಲಿಂಗದೀಕ್ಷೆಗೆ ತನ್ನದೇ ಆದ ಮಹತ್ವ ನೀಡಿದೆ. ದೀಕ್ಷೆ ಎಂಬ ಪದಕ್ಕೆ ತನ್ನದೆ ಆದ ಮಹತ್ವವಿದೆ. ದೀ ಎಂದರೇ ದಿಯತೇ ಶಿವಜ್ಞಾನಂ ಕ್ಷೀಯತೆ ಪಾಶ ಬಂಧನಂ ಶಿವಜ್ಞಾನ ಲಭಿಸಿ ಪಾಪಕರ್ಮಗಳನ್ನು ನಾಶ ಮಾಡುವ ಶಕ್ತಿ ದೀಕ್ಷೆಗಿಯಿದೆ ಎಂದರು. ಬ್ರಾಹ್ಮಿ ಮುಹೂರ್ತದಲ್ಲಿ ಬೆಳಗ್ಗೆ 15ಕ್ಕೂ ಹೆಚ್ಚು ಜಂಗಮ ವಟುಗಳಿಗೆ ಅಯ್ಯಾಚಾರ ದೀಕ್ಷೆ ಶ್ರೀಗಳು ನೀಡಿದರು. ಇದಕ್ಕೂ ಮುನ್ನ ಶ್ರೀ ರೇಣುಕಾಚಾರ್ಯರ ಮೂರ್ತಿಗೆ ರುದ್ರಾಭಿಷೇಕ, ವಿಶೇಷ ಹೂವಿನ ಅಲಂಕಾರ, ಮಹಾಪೂಜೆ ಜರುಗಿತು. ಕೊಪ್ಪಳ ನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜಂಗಮ ಸಮಾಜದ ಬಾಂದವರು ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!