ಆಶಾ ಕಾರ್ಯಕರ್ತೆಯರಿಗೆ ಕೆಲಸ ತಕ್ಕಂತೆ ವೇತನ ನಿಗಧಿ ಮಾಡಬೇಕು-ಕಾಮ್ರೇಡ್ ಡಿ. ನಾಗಲಕ್ಷ್ಮಿ
ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ (ರಿ )ಎಐಯುಟಿಯುಸಿ ಯಿಂದ ಕುಷ್ಟಗಿ ನಗರದ ಬಸವ ಭವನದಲ್ಲಿ ಕುಷ್ಟಗಿ ತಾಲೂಕ ಆಶಾ ಕಾರ್ಯಕರ್ತೆಯರ ಸಮಾವೇಶ ಆಯೋಜಿಸಲಾಗಿತ್ತು.
ಈ ಸಮಾವೇಶವನ್ನು ಉದ್ದೇಶಿಸಿ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಕಾಮ್ರೇಡ್ ಡಿ. ನಾಗಲಕ್ಷ್ಮಿ ಅವರು ಮಾತನಾಡುತ್ತ ಆಶಾ ಕಾರ್ಯಕರ್ತೆಯರಿಗೆ ಕೆಲಸ ತಕ್ಕಂತೆ ವೇತನ ನಿಗಧಿ ಮಾಡಬೇಕು.
ಇತ್ತೀಚ್ಚಿಗೆ ರಾಜ್ಯ ಮಟ್ಟದಲ್ಲಿ ಅನಿರ್ಧಷ್ಟವದಿ ಹೋರಾಟಕ್ಕೆ ಸರ್ಕಾರ ಏಪ್ರಿಲ್ ನಿಂದ ಹತ್ತು ಸಾವಿರ ಮತ್ತು ಇನ್ಸೆಂಟಿವ್
ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ರಾಜ್ಯದ 42 ಸಾವಿರ ಆಶಾ ಕಾರ್ಯಕರ್ತೆಯರಿಗೆ ಭರವಸೆ ನೀಡಿದ್ದರು. ಈ ಹೋರಾಟದ ಯಶಸ್ಸನ್ನು ರಾಜ್ಯ ಜನ ಬೆಂಬಲಿಸಿ ಆಶಾ ಹೋರಾಟಕ್ಕೆ ಬೆಂಬಲಿಸಿದ್ದರು.
ಆದರೆ ಮಾನ್ಯ ಮುಖ್ಯಮಂತ್ರಿಗಳು ಕೊಟ್ಟ ಭರವಸೆ ಕಳೆದ ಐದಾರು ತಿಂಗಳಾದರು ಈಡೇರದಿದ್ದ ಕಾರಣ ಆಗಸ್ಟ್ ತಿಂಗಳಲ್ಲಿ ಮೂರು ದಿನಗಳ ಕಾಲ ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ಅವೋರಾತ್ರಿ ಧರಣಿ ಮಾಡಲಾಯಿತು.ಆದರೂ ಸರ್ಕಾರ ಕೊಟ್ಟ ಭರವಸೆ ಈಡೇರಿಲ್ಲ ಮುಂದಿನ ಹಂತದ ಹೋರಾಟಕ್ಕೆ ಆಶಾ ಕಾರ್ಯಕರ್ತೆಯರು ಸಿದ್ದವಾಗಿದ್ದರೆ.ಸರ್ಕಾರ ಕೊಟ್ಟ ಭರವಸೆ ಈಡೇರಿಸದೆ ಸರ್ವೇಗಳನ್ನು ಇತ್ಯಾದಿ ಸಮೀಕ್ಷೆಗಳನ್ನು ಹೆಚ್ಚುವರಿ ಕೆಲಸ ಒತ್ತಡ ಹೇರಲಾಗುತ್ತಿದೆ. ಕೆಳಹಂತದಲ್ಲಿ ಜನರಿಗೆ ಆರೋಗ್ಯ ಸೇವೆಯನ್ನು ಒದಗಿಸುತ್ತಿರುವ ಹಾಗೂ ತಾಯಿ ಮಕ್ಕಳ ಆರೈಕೆ, ವಿವಿಧ ರೀತಿಯ ಸಾಂಕ್ರಾಮಿಕ ಕಾಯಿಲೆಗಳ ಬಗ್ಗೆ ನಿರಂತರ ಜಾಗೃತಿ ಮೂಡಿಸುತ್ತಿರುವ ಆರೋಗ್ಯ ಕಾರ್ಯಕರ್ತೆಯರು ಆಶಾಗಳಾಗಿದ್ದಾರೆ. ಕರೋನ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರ ಸೇವೆಯನ್ನು ಮರೆಯಲು ಸಾಧ್ಯವಿಲ್ಲ. ಆಶಾ ಕಾರ್ಯಕರ್ತೆಯರಿಗೆ ಮುಂಚೂಣಿ ವಾರಿಯಾರ್ಸ್, ಜಾಗತಿಕ ಆರೋಗ್ಯ ನಾಯಕರು ಎಂಬ ಬಿರುದು ಸಿಕ್ಕಿತು. ಆದರೆ ಅವರ ದುಡಿತಕ್ಕೆ ತಕ್ಕಂತೆ ವೇತನ ನೀಡುತ್ತಿಲ್ಲ ಕೂಡಲೇ ಸರ್ಕಾರ ಆಶಾ ಕಾರ್ಯಕರ್ತೆಯರ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಶರಣು ಗಡ್ಡಿ, ಜಿಲ್ಲಾ ಕಾರ್ಯದರ್ಶಿ ಕೌಶಲ್ಯ ದೊಡ್ಡಗೌಡರ,ಯಲಬುರ್ಗಾ ತಾಲೂಕ ಕಾರ್ಯದರ್ಶಿಳಾದ ಶಿವಮ್ಮ ಮುಖಾಂಡರಾದ ಅನ್ನಪೂರ್ಣ ಉಪಸ್ಥಿತರಿದ್ದರು.
ಕುಷ್ಟಗಿ ತಾಲೂಕಿನ ಹೊಸ ಸಮಿತಿ ರಚಿಸಲಾಯಿತು ತಾಲೂಕ ಅಧ್ಯಕ್ಷರಾಗಿ ಗಾಯತ್ರಿ ಬಳಿಗೇರಿ, ಉಪಾಧ್ಯಕ್ಷಗಳಾಗಿ ಅಕ್ಕಮ್ಮ -ಹಿರೇಗೊಣ್ಣನಗರ ರೇಣುಕಾ ಹನುಮಸಾಗರ ಅಂಬ್ರಮ್ಮ ಕುಷ್ಟಗಿ ಹರ್ಬನ್ ಕುಷ್ಟಗಿ ತಾಲೂಕ ಕಾರ್ಯದರ್ಶಿ ಗಳಾಗಿ ಚಂಪಾ ಸಹ ಕಾರ್ಯದರ್ಶಿ ಮಂಡಳಿ ಸದಸ್ಯರಾಗಿ ಮಲ್ಲಮ್ಮ ಜುಲಕಟ್ಟಿ, ಸಾವಿತ್ರಿ ತಾವರಗೇರಾ,ಪಾರ್ವತಿ ಹಿರೇಮನ್ನಾಪುರ,ಮಹಾಲಕ್ಷ್ಮಿ ಗೊಲ್ಲರ,ಗಂಗೂಬಾಯಿ ಹಿರೇಮನ್ನಾಪುರ,ಕಾಳಮ್ಮ ಹಿರೇ ಗೋಣ್ಣನಗರ, ಮಂಜುಳಾ ಜಕ್ಕಲಿ 15 ಜನ ಮುಖಂಡರ ಹೊಸ ಸಮಿತಿ ರಚಿಸಲಾಯಿತು.
Comments are closed.