ಹಣಕಾಸಿನ ತೊಂದರೆಗೆ ಪತ್ತಿನ ಸಹಕಾರಿ ಸಂಘಗಳು ಪರಿಹಾರ;ರಾಜಶೇಖರ ಪಾಟೀಲ

Get real time updates directly on you device, subscribe now.

ಕೊಪ್ಪಳ, ಆ,೨೮;- ಸರಕಾರಿ ನೌಕರರ ಹಣಕಾಸಿನ ತೊಂದರೆಗೆ ಪತ್ತಿನ ಸಹಕಾರ ಸಂಘಗಳೇ ಆಶ್ರಯ ಎಂದು ಹಿರಿಯ ಪ್ರಾಚಾರ್ಯರಾದ ರಾಜಶೇಖರ ಪಾಟೀಲರವರು ನುಡಿದರು. ಅವರು ಕೊಪ್ಪಳ ತಾಲ್ಲೂಕು ಸರಕಾರಿ ಪದವಿ ಪೂರ್ವ ಕಾಲೇಜುಗಳ ನೌಕರರ ಪತ್ತಿನ ಸಹಕಾರ ಸಂಘದ ೧೫ನೇ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.ಮುಂದುವರೆದು ಸಂಘಕ್ಕೆ ಸದಸ್ಯರೇ ಜೀವಾಳವಿದ್ದಂತೆ. ಸದಸ್ಯರು ಸಾಲವನ್ನು ಪಡೆಯಬೇಕು ಮತ್ತು ಸಕಾಲಕ್ಕೆ ಮರುಪಾವತಿ ಮಾಡಿದರೆ ಮಾತ್ರ ಸಂಘಗಳು ಉಳಿಯುತ್ತವೆ, ಸಂಘ ನಿಂತ ನೀರಾಗಬಾರು, ಅದು ಚಲನೆಯಲ್ಲಿದ್ದಾಗ ಸಂಘ ಹೆಚ್ಚೆಚ್ಚು ಬೆಳೆಯುತ್ತವೆ ಎಂದರು. ನಿವೃತ್ತ ಉಪನ್ಯಾಸಕರಾದ ಸೋಮನಗೌಡ ಪಾಟೀಲ ಮಾತನಾಡಿ ನೌಕರರಿಗೆ ಹಣಕಾಸಿನ ಅನೇಕ ತೊಂದರೆಗಳು ಎದುರಾಗುತ್ತವೆ. ಅತ್ಯಂತ ಸರಳವಾಗಿ ಸಾಲ ಸಿಗುವ ಕೇಂದ್ರಗಳೆAದರೆ ಪತ್ತಿನ ಸಹಕಾರಿ ಸಂಘಗಳು. ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಲಹೆ ನೀಡಿದರು. ಆರಂಭದಲ್ಲಿ ಅಧ್ಯಕ್ಷರಾದ ವಿದ್ಯಾಧರ ಮೇಘರಾಜ ವಾರ್ಷಿಕ ವರದಿ ಓದಿದರು. ನಿವೃತ್ತ ಪ್ರಾಚಾರ್ಯರಾದ ಸಿ.ವಿ.ಜಡಿ, ನಿವೃತ್ತ ಉಪನ್ಯಾಸಕರಾದ ಎ.ವಿ.ಉಪದ್ಯಾಯ, ಪ್ರಾಚಾರ್ಯರಾದ ಎಚ್.ಎಸ್.ದೇವರಮನಿ, ಗವಿಸಿದ್ಧಪ್ಪ ದೊಡ್ಡಮನಿ, ಕಾರ್ಯದರ್ಶಿ ರಾಚಪ್ಪ ಕೇಸರಬಾವಿ ಮುಂತಾದವರು ಉಪಸ್ಥಿತರಿದ್ದರು. ಕು||ಶ್ರೇಯಾ ಅಂಗಡಿಯವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಈ ಕಾರ್ಯಕ್ರಮಕ್ಕೆ ಡಾ.ಸಿದ್ಧಲಿಂಗಪ್ಪ ಕೊಟ್ನೆಕಲ್ ಸ್ವಾಗತಿಸಿದರೆ, ಮಹಾನಂದಿ ಹುಣಿಸೇಮರದ ಕಾರ್ಯಕ್ರಮ ನೆರೆವೇರಿಸಿದರು. ಈ ಸಂರ್ಭದಲ್ಲಿ ನಿವೃತ್ತ ಉಪನ್ಯಾಸಕರಾದ ಚಂದ್ರಶೇಖರ ಮಂಗಳೂರು, ಬಸವರಾಜ ಸವಡಿ, ಎಚ್.ಎಸ್.ಬಾರಕೇರ, ಶ್ರೀಮತಿ ಸರೋಜ, ಟಿ.ಆರ್.ಶೇಖರಪ್ಪ ಇವರನ್ನು ಸನ್ಮಾನಿಸಲಾಯಿತು. ಸಂಘದ ಸದಸ್ಯರಾದ ಕೊಟ್ರಪ್ಪ ಇವರ ಸುಪುತ್ರ ಕು||ಮಲ್ಲಿಕಾರ್ಜುನ ಅತಿ ಹೆಚ್ಚು ಅಂಕ ಪಡೆದದ್ದಕ್ಕಾಗಿ ಸನ್ಮಾನಿಸಲಾಯಿತು.

Get real time updates directly on you device, subscribe now.

Comments are closed.

error: Content is protected !!