ಸಮಾಜ ಸುಂದರವಾಗಿ ಕಾಣಲು ಛಾಯಾಗ್ರಾಹಕರ ಪಾತ್ರ ಮುಖ್ಯ : ಗಣೇಶ್ ಹೊರತಟ್ನಾಳ್

ಕೊಪ್ಪಳ: ಸಮಾಜ ಸುಂದರವಾಗಿ ಕಾಣಲು ಛಾಯಾಗ್ರಾಹಕರ ಪಾತ್ರ ಮುಖ್ಯ ಎಂದು ಕೊಪ್ಪಳ ಜಿಲ್ಲಾ ಬಿಜೆಪಿ ಎಸ್ಸಿ ಮರ‍್ಚಾದ ಅಧ್ಯಕ್ಷ ಗಣೇಶ್ ಹೊರತಟ್ನಾಳ್ ಹೇಳಿದರು.
ಅವರು ಮಂಗಳವಾರದಂದು ನಗರದ ಶೋಭಾಸ್ ರೆಸ್ಟೋರೆಂಟ್ ನಲ್ಲಿ ನಡೆದ ೧೮೬ ನೇ ವಿಶ್ವ ಛಾಯಾಗ್ರಾಹಕರ ದಿನಾಚರಣೆಯ ಕರ‍್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು ಫೋಟೋಗ್ರಾಫಿ ಮತ್ತು ವಿಡಿಯೋ ಹಿಂದಿನ ತಾಂತ್ರಿಕ ಜಗತ್ತಿನ ವೈಜ್ಞಾನಿಕ ಬೆಳವಣಿಗೆಯಲ್ಲಿ , ಕಲೆ ಸಾಹಿತ್ಯ ಸಂಸ್ಕೃತಿ ಇತಿಹಾಸ ಉಳಿವಿಗೆ ಮತ್ತು ಬೆಳವಣಿಗೆಗೆ ಫೋಟೋಗ್ರಾಫಿ ಮತ್ತು ವಿಡಿಯೋ ಗ್ರಾಫಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ.
ಒಂದು ಭಾವಚಿತ್ರ ಒಂದು ಸಾವಿರ ಪದಗಳಿಗೆ ಸಮ ಎನ್ನುವಂತೆ ಪ್ರತಿಯೊಂದು ಕ್ಷೇತ್ರದಲ್ಲಿ ಭಾವಚಿತ್ರಗಳ ಪಾತ್ರ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸಿ ಸಮಾಜಕ್ಕೆ ಸಂದೇಶ ನೀಡುವಂತೆ ಕರ‍್ಯನರ‍್ವಹಿಸುತ್ತದೆ.
ಫೋಟೋಗ್ರಾಫಿ ಮತ್ತು ವಿಡಿಯೋ ಗ್ರಾಫಿ ವೃತ್ತಿಯನ್ನು ಮಾಡುವ ಕಾಯಕ ಶಿಲ್ಪಿಗಳು ತಮ್ಮ ಬದುಕನ್ನೇ ಬದಿಗೊತ್ತಿ ಸಾಮಾಜಿಕ ಕ್ಷೇತ್ರ ಬೆಳವಣಿಗೆಗೆ ನಿರಂತವಾಗಿ ಕೆಲಸ ಮಾಡುತ್ತಾರೆ.
ಫೋಟೋಗ್ರಾಫಿ ಮತ್ತು ವಿಡಿಯೋ ಗ್ರಾಫಿಯ ಮಾಡುವ ವೃತ್ತಿಯ ವ್ಯಕ್ತಿಗಳು ಅವರ ಬದುಕು ಎಷ್ಟೇ ಕಷ್ಟಕರವಾಗಿದ್ದರು ಮತ್ತೊಬ್ಬರನ್ನು ಸಂತೋಷಗೊಳಿಸಿ ಭಾವಚಿತ್ರಗಳನ್ನು ತೆಗೆಯುತ್ತಾರೆ ಮತ್ತು ಫೋಟೋಗ್ರಾಫಿ ಕೆಲಸ ನರ‍್ವಹಿಸುವವರ ಬದುಕು ದೇವರಿಗೆ ಬೆಳಗುವ ಊದುಬತ್ತಿ ಇದ್ದ ಹಾಗೆ ಊದುಬತ್ತಿ ಹೇಗೆ ತನ್ನನ್ನು ತಾನು ಸುಟ್ಟುಕೊಂಡು ಇತರರಿಗೆ ಸುವಾಸನೆಯನ್ನು ನೀಡುತ್ತದೆಯೋ ಹಾಗೆ ಛಾಯಾಗ್ರಾಹಕನ ಬದುಕು ಸಮಾಜದ ಸುಂದರತೆಯನ್ನು ಸದಾ ನೋಡುವಂತ ಏಕೈಕ ವ್ಯಕ್ತಿ ಛಾಯಾಗ್ರಹಕ ಎಂದು ಹೇಳಬಹುದು,ಹಾಗಾಗಿ ಫೋಟೋಗ್ರಾಫಿ ಮತ್ತು ಛಾಯಾಗ್ರಾಹಕನ ಸೇವೆ ಸಮಾಜದಲ್ಲಿ ಅಗಾಧವಾಗಿದೆ ಅವರನ್ನು ಯಾವಾಗಲೂ ನಾವು ಗೌರವಿಸಬೇಕು ಪ್ರೀತಿಸಬೇಕು ಸದಾ ನಾವು ಅವರಿಗೆ ಋಣಿಯಾಗಿರಬೇಕು ಎಂದರು.
ಈ ಸಂರ‍್ಭದಲ್ಲಿ ಖ್ಯಾತ ನ್ಯಾಯವಾದಿಗಳಾದ ವಿಜಯ ಅಮೃತರಾಜ್, ಮಲ್ಲಿಕರ‍್ಜುನ್ ಪೂಜಾರಿ, ಅಶೋಕ್ ಹುಣಿಸಿಮರದ, ಬಸವರಾಜ್ ಕಂಪ್ಲಿ, ಗವಿಸಿದ್ದಪ್ಪ ರ‍್ಕಿಹಳ್ಳಿ, ಉಮೇಶ್ ಪೂಜಾರ್, ಪ್ರಕಾಶ್ ಕಂದಕೂರ್, ಪ್ರಾಣೇಶ್ ಕಂಪ್ಲಿ, ಗವಿಸಿದ್ದಯ್ಯ ಹಿರೇಮಠ, ಯಲ್ಲಪ್ಪ ಪೂಜಾರ್ ಕೊಪ್ಪಳ, ಶ್ರೀಶೈಲ್ ಗಾಳಿ, ರುದ್ರೇಶ್ ವಕ್ರಾಣಿ, ರಾಜು ಕುರುಗೋಡ, ಮಹೇಶ್ ಶಹಪುರ್, ಬಸವರಾಜ್ ಕುಂಬಾರ್, ಮಂಜುನಾಥ್ ಕುರುಗೋಡು ಸೇರಿದಂತೆ ಇತರರು ಇದ್ದರು.
Comments are closed.