ಸಕ್ಕರೆ ಕಾರ್ಖಾನೆ ಸ್ಥಾಪನೆ ವಿರೋಧಿಸಿ ಡಿಎಸ್‌ಗೆ ಮನವಿ -ಗ್ರಾಮ ಸಭೆ ಕರೆಯುವಂತೆ ಗ್ರಾಮಸ್ಥರ ಒತ್ತಾಯ

Get real time updates directly on you device, subscribe now.

 

ಕೊಪ್ಪಳ: ತಾಲೂಕು ಗೊಂಡಬಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುದ್ದಾಬಳ್ಳಿ-ಗೊಂಡಬಾಳ ಸೀಮಾ ವ್ಯಾಪ್ತಿಯಲ್ಲಿನ ೬೪ ಎಕರೆ ಜಮೀನಿನಲ್ಲಿ ಯುಕೆಇಎಂ ಸಕ್ಕರೆ ಕಾರ್ಖಾನೆ ಸ್ಥಾಪನೆ ವಿರೋಧಿಸಿ ಮುದ್ದಾಬಳ್ಳಿ ಗ್ರಾಮಸ್ಥರು ಮಂಗಳವಾರ ಗ್ರಾಪಂ ಕಾರ್ಯದರ್ಶಿ, ತಾಪಂ ಇಒ ಹಾಗೂ ಡಿಸಿ ಕಚೇರಿಗೆ ತೆರಳಿ ಜಿಪಂ ಉಪ ಕಾರ್ಯದರ್ಶಿ ಅವರಿಗೆ ಮನವಿ ಸಲ್ಲಿಸಿದರು.
ಯುಕೆಇಎಂ ಕಂಪನಿಯು ಸಕ್ಕರೆ ಕಾರ್ಖಾನೆ ಸ್ಥಾಪನೆಗಾಗಿ ಸಿದ್ದತೆ ನಡೆಸಿದೆ. ಆದರೆ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ನಮ್ಮ ಪ್ರಭಲ ವಿರೋಧವಿದೆ. ಈ ಹಿಂದೆ ಕೊಪ್ಪಳ ಪರಿಸರ ಇಲಾಖೆಯು ನಡೆಸಿದ ಅಹಲವಾಲು ಸಭೆಯಲ್ಲಿ ನಾವು ಕಾರ್ಖಾನೆ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿದ್ದು, ಆಗಲೂ ತಕರಾರು ಅರ್ಜಿ ಸಲ್ಲಿಸಿದ್ದೇವೆ. ಈ ಮಧ್ಯೆ ಕಂಪನಿಯು ಸರ್ಕಾರದ ವಿವಿಧ ಇಲಾಖೆಯಿಂದ ಅನುಮತಿ ಪಡೆದುಕೊಂಡಿದೆ. ಅಂತಿಮವಾಗಿ ಗೊಂಡಬಾಳ ಗ್ರಾಪಂಗೆ ಎನ್‌ಒಸಿ ಪಡೆಯಲು ಅರ್ಜಿ ಸಲ್ಲಿಸಿದೆ. ಅದಕ್ಕೂ ಸಹಿತ ಮೂರು ಗ್ರಾಮಗಳ ಜನರು ತಕರಾರು ವ್ಯಕ್ತಪಡಿಸಿ ಸರಿ ಸುಮಾರು ೪೦೦ಕ್ಕೂ ಹೆಚ್ಚು ಆಕ್ಷೇಪಣಾ/ತಕರಾರು ಅರ್ಜಿಗಳನ್ನ ಗ್ರಾಮ ಪಂಚಾಯಿತಿಗೆ ಸಲ್ಲಿಸಿದ್ದೇವೆ.
ಎನ್‌ಒಸಿ ಕೊಡುವ ಮೊದಲು ಗ್ರಾಮಸಭೆ ನಡೆಸಿ ಜನರ ಅಭಿಪ್ರಾಯ ಪಡೆಯುವಂತೆಯೂ ಪಿಡಿಒ ಅವರಿಗೆ ಮನವಿ ಮಾಡಿದ್ದೇವೆ. ಆದರೆ ಕಾರ್ಖಾನೆ ಸಂಬAಧ ಈ ವರೆಗೂ ಗ್ರಾಪಂನಿAದ ಸಾರ್ವಜನಿಕ ಗ್ರಾಮ ಸಭೆ ಕರೆದಿಲ್ಲ. ಏಕಾಏಕಿಯಾಗಿ ಗ್ರಾಪಂ ಸದಸ್ಯರ ಸಭೆ ನಡೆಸಿದ್ದಾರೆ. ಆ ಸಭೆಯಲ್ಲಿ ಸದಸ್ಯ ಪಂಪಾಪತಿ ಹಳ್ಳಿಗುಡಿ ಅವರು ಕಾರ್ಖಾನೆ ಬೇಡ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ ಉಳಿದ ಸದಸ್ಯರು ಎನ್‌ಒಸಿ ಕೊಡಲು ಪಿಡಿಒಗೆ ಸೂಚಿಸಿದ್ದಾರೆ. ಇಲ್ಲಿ ಸಾರ್ವಜನಿಕರ ಅಹವಾಲಿಗೆ ಬೆಲೆಯೇ ಇಲ್ಲದಂತಾಗಿದೆ. ಸಾರ್ವಜನಿಕರ ಆಕ್ಷೇಪಣೆಗಳಿಗೆ ಯಾವುದೇ ಮಾನ್ಯತೆ ಇಲ್ಲದಂತಾಗಿದೆ. ಗ್ರಾಮ ಸಭೆ ಕರೆಯಿರಿ ಎಂದು ಮನವಿ ಮಾಡಿದರೂ ಪಿಡಿಒ/ಅಧ್ಯಕ್ಷರು ಯಾವುದೇ ಗ್ರಾಮ ಸಭೆ ಕರೆಯದಿಲ್ಲ ಎಂದು ತಾಪಂ ಇಒ ಮುಂದೆ ಗ್ರಾಮಸ್ಥರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಪಂಗೆ ಗ್ರಾಮಸ್ಥರ ಹಿತ ಕಾಪಾಡುವುದು ಮುಖ್ಯವಾಗಿದೆ. ಅವರ ಅಹವಾಲು ಆಲಿಸುವುದು ಬಹು ಮುಖ್ಯವಾಗಿದೆ. ಆದರೆ ಅದ್ಯಾವುದು ಇಲ್ಲಿ ಕಾಣಿಸಿಲ್ಲ. ಯಾವುದೇ ಕಾರಣಕ್ಕೂ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಎನ್‌ಒಸಿ ಕೊಡಬಾರದು, ನಮ್ಮಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆ ಮಾಡಬಾರದು. ಪಿಡಿಒ ಅವರು ಗ್ರಾಮ ಪಂಚಾಯಿತಿ ಸಭೆಯಲ್ಲಿ ಆಗಿರುವ ಚರ್ಚೆಗಳನ್ನು ಮೇಲಾಧಿಕಾರಿಗೆ ಪತ್ರ ವ್ಯವಹಾರ ನಡೆಸಿದ್ದಾರೆ. ಈ ಕೂಡಲೇ ಜಿಲ್ಲಾ ಮಟ್ಟದ ಅಧಿಕಾರಿಗಳು ಜನಪರ ನಿಲುವು ತಾಳಬೇಕು. ಒಂದು ವೇಳೆ ಎನ್‌ಒಸಿ ಕೊಟ್ಟಿದ್ದೇ ಆದರೆ ನಾವು ಕಾನೂನಾತ್ಮಕ ಹೋರಾಟಕ್ಕೂ ಸಿದ್ದರಿದ್ದೇವೆ ಎಂದು ಮುದ್ದಾಬಳ್ಳಿ ಗ್ರಾಮಸ್ಥರು ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಜಿಪಂ ಉಪ ಕಾರ್ಯದರ್ಶಿ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿತು.
ಮನವಿ ಸಲ್ಲಿಸುವ ವೇಳೆ ಗ್ರಾಮದ ಸುರೇಂದ್ರಗೌಡ ಪಾಟೀಲ್, ವಸಂತರಡ್ಡಿ ಮಾದಿನೂರು, ರಾಜೀವರಡ್ಡಿ ಮಾದಿನೂರು, ಗ್ರಾಪಂ ಸದಸ್ಯ ಪಂಪಾಪತಿ ಹಳ್ಳಿಗುಡಿ, ಪ್ರಕಾಶ ಹಾಲವರ್ತಿ, ರಾಕೇಶಗೌಡ ಪಾಟೀಲ್, ಗವಿಸಿದ್ದನಗೌಡ ಪಾಟೀಲ್, ರಾಜಣ್ಣ ಪಾಟೀಲ್, ಪ್ರಪುಲ್ ಕುಮಾರ, ವಿರುಪಾಕ್ಷಪ್ಪ ಕುಂಬಾರ, ಬಸವರಾಜ ಹಾಲವರ್ತಿ, ತಿಮ್ಮರಡ್ಡಿ ಬಿಸರಳ್ಳಿ, ಸಣ್ಣಸೈಯದ್ ಸಾಬ್ ಮುಲ್ಲಾ, ಯಂಕಪ್ಪ ಚುಕ್ಕನಕಲ್, ಶರಣಪ್ಪ ಮಾಳೆಕೊಪ್ಪ, ಹನುಮಂತ ಹಟ್ಟಿ, ಮಹೇಶ ಹಿರೇಮಠ, ಯಂಕಪ್ಪ ತಳವಾರ, ಮಲ್ಲಪ್ಪ ಕುಕನೂರು,
ಶರಣಪ್ಪ ತಿಮ್ಮಾಪೂರ, ಮಂಜುನಾಥ ಮುದ್ದಿ, ಸದ್ದಾಂ ಹುಸೇನ, ಮಹೇಶ ಹೊಸೂರು, ವಿಶ್ವನಾಥ
ಹಳ್ಳಿಗುಡಿ, ಮಹಾಂತೇಶ ಹಡಪದ, ಶಿವಯ್ಯ ಹಿರೇಮಠ, ಗೌಸ್, ಮಾರುತಿ ತಳವಾರ, ಮೈಲಾರಪ್ಪ ಗೊಂಡಬಾಳ, ಮಂಜುನಾಥ ತಳವಾರ, ಮಲ್ಲಪ್ಪ ಕುಕನೂರು, ಬಸಯ್ಯ ಹಿರೇಮಠ, ಮಹೇಶ ಗೋಡಿಕಾರ, ಮಹೇಶ ಚಕ್ರಸಾಲಿ, ಮಂಜುನಾಥ ಡಂಬ್ರಳ್ಳಿ, ಬಸವರಾಜ ತೋಟ್ರ, ಶ್ರೀಕಾಂತ ಮುದ್ದಿ, ಮಲ್ಲಿಕಾರ್ಜುನ ಕಮ್ಮಾರ, ಗುಡುದಪ್ಪ ಹಾಲವರ್ತಿ, ವೀರಣ್ಣ ಗೋಡಿಕಾರ, ಬಸವರಾಜ ತಳವಾರ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!