ಜಿನೇವಾ ಒಪ್ಪಂಧದಿಂದ ವಿಶ್ವದಾದ್ಯಂತ ಪಸರಿಸಿದ ಮಾನವೀಯತೆ – ನಾಗರಾಜ

ಕೊಪ್ಪಳ
ಜಿನೇವಾ ಒಪ್ಪಂಧದಿಂದ ವಿಶ್ವದಾದ್ಯಂತ ಮಾನವೀಯತೆ ಪಸರುವಂತೆ ಮಾಡಿದೆ ಎಂದು ಉಪನ್ಯಾಸಕ ನಾಗರಾಜ ದಂಡೋತಿ ಹೇಳಿದ್ದಾರೆ.
ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಶ್ರೀ ಗವಿಸಿದ್ಧೇಶ್ವರ ಶಿಕ್ಷಣ ಮಹಾವಿದ್ಯಾಲಯದ ಜಂಟಿಯಾಗಿ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿನೇವಾ ಒಪ್ಪಂಧ ದಿನಾಚರಣೆ, ರಕ್ತದಾನ ಶಿಬಿರ, ಯುವ ರೆಡ್ ಕ್ರಾಸ್ ಘಟಕ ಉದ್ಘಾಟನಾ ಸಮಾರಂಭದಲ್ಲಿ ಜಿನೇವಾ ಒಪ್ಪಂಧದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಎರಡನೇ ಮಹಾಯುದ್ಧದ ನಂತರ 1945 ರಿಂದ 49 ರಲ್ಲಿ ನಡೆದ ಜಿನೇವಾ ಸಮ್ಮೇಳನದಲ್ಲಿ 1949 ಆ. 12 ರಂದು ಜಿನೇವಾ ಒಪ್ಪಂಧ ಮಾಡಲಾಯಿತು. ಇದಕ್ಕೆ ಜಗತ್ತಿನ 176 ರಾಷ್ಟ್ರಗಳು ಸಹಿ ಹಾಕುವ ಮೂಲಕ ಯುದ್ಧ ಪೀಡಿತ ಪ್ರದೇಶದಲ್ಲಿನ ಆಗುವ ತೊಂದರೆಯನ್ನು ನಿವಾರಿಸಲು ಬಹುದೊಡ್ಡ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು. ಒಪ್ಪಂಧದ ಮೂಲಕ ಯುದ್ಧ ಕೈದಿಯನ್ನು ಸಂರಕ್ಷಣೆ ಮಾಡಬೇಕು ಮತ್ತು ಯುದ್ಧದಿಂದ ಗಾಯಗೊಂಡವರನ್ನು ಸಂರಕ್ಷಣೆ ಮಾಡುವುದು ಸೇರಿದಂತೆ ಹಲವಾರು ಮಾವೀಯ ಕಳಕಳಿಯುಳ್ಳ ನಿರ್ಣಯಗನ್ನು ಕೈಗೊಳ್ಳಲಾಯಿತು ಎಂದರು.
ಈಗಲೂ ಆ ನಿರ್ಣಯಗಳ ಆಧಾರದಲ್ಲಿಯೇ ರೆಡ್ ಕ್ರಾಸ್ ಸಂಸ್ಥೆ ಯುದ್ಧಪೀಡಿತ ಪ್ರದೇಶದಲ್ಲಿ ಬಹುದೊಡ್ಡ ಮಾನವೀಯ ಸೇವೆ ಮಾಡುತ್ತಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಛೇರಮನ್ ಸೋಮರಡ್ಡಿ ಅಳವಂಡಿ ಅವರು ಮಾತನಾಡಿ, ಯುದ್ಧಭೂಮಿಯಲ್ಲಿಯೂ ಗಾಯಾಳುಗಳನ್ನು ರೆಡ್ ಕ್ರಾಸ್ ಸಂಸ್ಥೆ ಉಪಚಾರ ಮಾಡುವ ಮಹಾನ್ ಕಾರ್ಯ ಮಾಡುತ್ತದೆ. ಯುದ್ಧದಿಂದ ಸೆರೆ ಸಿಕ್ಕ ಕೈದಿಗಳನ್ನು ಬಿಡುಸುವಲ್ಲಿ ನೇತೃತ್ವ ವಹಿಸುತ್ತದೆ ಎಂದರು.
ರೆಡ್ ಕ್ರಾಸ್ ಸಂಸ್ಥೆಯ ನಿರ್ದೇಶಕ ಡಾ. ಮಂಜುನಾಥ ಹಾಗೂ ರಾಜೇಶ ಯಾವಗಲ್ ಅವರು ರಕ್ತದಾನದ ಮಹತ್ವ ಮತ್ತು ಯುವ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯವೈಖರಿಯನ್ನು ವಿವರಿಸಿದರು.
ಶ್ರೀ ಗವಿಸಿದ್ದೇಶ್ವರ ಶಿಕ್ಷಣ ಮಹಾವಿದ್ಯಾಲಯದ ಸಂಯೋಜಕರಾದ ಡಾ. ಕವಿತಾ ಕೆ. ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಂಶುಪಾಲರಾದ ಡಾ. ಎಸ್.ಬಿ.ಕುಂಬಾರ ಅವರು ಅಧ್ಯಕ್ಷತೆ ವಹಿಸಿದ್ದರು. ಪ್ರೋಪೆಸರ್ ಎಚ್. ಬಿ. ಆನಂದಹಳ್ಳಿರವರು ಉಪಸ್ಥಿತರಿದ್ದರು. ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿ ಸುಭಾಷಿಣಿ ಕಾರ‍್ಯಕ್ರಮವನ್ನು ನಿರೂಪಿಸಿದರು. ಈ ಕಾರ‍್ಯಕ್ರಮ ನಂತರ ಸ್ವಯಂ ಪ್ರೇರಿತ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಲಾಯಿತು. ನಂತರ ಮಹಾವಿದ್ಯಾಲಯದ ರೆಡ್ ಕ್ರಾಸ್ ಸಂಯೋಜಕ ಶ್ರೀಧರ ಪೂಜಾರ ರವರು ಕಾರ‍್ಯಕ್ರಮದ ಕೊನೆಯಲ್ಲಿ ವಂದಿಸಿದರು.
redcross koppal
Comments are closed.