ಬಲ್ಡೋಟಾ ಹೋರಾಟಗಾರರಿಗೆ ಬೇಲ್ ಗ್ರ್ಯಾಂಟೆಡ್; ಮುಂದಿನ ನಡೆ ಏನು?

Get real time updates directly on you device, subscribe now.

ಕೊಪ್ಪಳ: ಜಿಲ್ಲೆಯಲ್ಲಿ ದಿನೇ ದಿನೇ ಕಾವು ಪಡೆಯುತ್ತಿರುವ ಬಲ್ಡೋಟಾ ಬಿಎಸ್‌ಪಿಎಲ್ ಹೋರಾಟದಲ್ಲಿ ಪಾಲ್ಗೊಂಡು ಕಂಪನಿಯವರಿಂದ ಕೇಸ್ ಹಾಕಿಸಿಕೊಂಡಿದ್ದರು, ಇಂದು ಎರಡು ಕೇಸಿನಲ್ಲಿ ಅವರಿಗೆ ಬೇಲ್ (ಜಾಮೀನು) ದೊರಕಿದೆ.

ಕಳೆದ ೧೮ ವರ್ಷದಿಂದ ಹೋರಾಟ, ಸಂಘರ್ಷ ಇದ್ದರೂ ಇತ್ತೀಚೆಗೆ ಅದು ತೀವ್ರ ಸ್ವರೂಪ ಪಡೆದುಕೊಂಡಿದ್ದು, ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಮತ್ತು ಪರಿಸರ ಹಿತರಕ್ಷಣಾ ವೇದಿಕೆ ಸೇರಿ ಜಂಟಿ ಕ್ರಿಯಾ ವೇದಿಕೆ ರೂಪಿಸಿಕೊಂಡು ಹೋರಾಟಕ್ಕೆ ಧುಮುಕಿದ್ದು, ಈಚೆಗೆ ಜನಜಾನುವಾರು ಹೋರಾಟ ಹಮ್ಮಿಕೊಂಡ ಮೇಲೆ ಜನರ ಚಿತ್ತ ಅತ್ತ ಸರಿದಿದ್ದು, ಕಂಪನಿ ಮತ್ತು ಹೋರಾಟಗಾರರು ಪರಸ್ಪರ ಕೇಸ್ ಹಾಕಿದ್ದಾರೆ. ಕಂಪನಿ ಹಾಕಿದ ಎರಡು ಕೇಸಲ್ಲಿ ತಲಾ ಏಳು ಜನರಿಗೆ ಜಾಮೀನು ಮಂಜೂರು ಮಾಡಲಾಗಿದೆ.

ಅದರಲ್ಲಿ ಕೇಸ್ ನಂ. ೧೩೧/೨೦೨೫ ರಲ್ಲಿ ಅಲ್ಲಮಪ್ರಭು ಬೆಟ್ಟದೂರು, ಮಂಗಳೇಶ ರಾಠೋಡ, ಮುದಕಪ್ಪ ಹೊಸಮನಿ, ಕೆ. ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಭೀಮಸೇನ ಕಲಕೇರಿ ಮತ್ತು ಎಸ್. ಎ. ಗಫಾರ್ ಹಾಗೂ ಕೇಸ್ ನಂ. ೮೧/೨೦೨೫ ರಲ್ಲಿ ಮೂಕಪ್ಪ ಮೇಸ್ತ್ರೀ ಬಸಾಪೂರ, ಯಮನೂರಪ್ಪ ಹಾಲಳ್ಳಿ ಬಸಾಪೂರ, ಭೀಮಸೇನ ಕಲಕೇರಿ, ಯಗ್ಗಪ್ಪ ಲಿಂಗದಳ್ಳಿ ಬಸಾಪೂರ, ಕೆ. ಬಿ. ಗೋನಾಳ, ಮಂಗಳೇಶ ರಾಠೋಡ ಗಿಣಗೇರಿ ಮತ್ತು ಅಲ್ಲಮಪ್ರಭು ಬೆಟ್ಟದೂರುರಿಗೆ ಜಿಲ್ಲಾ ನ್ಯಾಯಾಲಯ ಬೇಲ್ ಮಂಜೂರು ಮಾಡಿದ್ದು, ಹೋರಾಟಗಾರರ ಪರವಾಗಿ ವಕೀಲರಾದ ಡಿ.ಹೆಚ್. ಪೂಜಾರ ಅವರು ವಾದ ಮಾಡಿದ್ದಾರೆ.

 

ಈ ಬೆಳವಣಿಗೆ ಮಧ್ಯೆ ನಿರಂತರ ಧರಣಿ ಸತ್ಯಾಗ್ರಹ ರೂಪಿಸಲು ಆಗಷ್ಟ್ ೩ ರಂದು ಸಭೆ ಮಾಡುವ ಬಗ್ಗೆ ಪುರ ಪ್ರಮುಖರ ಅಭಿಪ್ರಾಯ ಸಂಗ್ರಹಿಸಲಾಗುತ್ತಿದ್ದು, ಕಾರ್ಖಾನೆ ತೊಲಗುವವರೆಗೆ ಧರಣಿ ಕೂಡುವ ಕುರಿತು ಯೋಚನೆ ಮಾಡುತ್ತಿದ್ದಾರೆ –

ಮಂಜುನಾಥ ಜಿ. ಗೊಂಡಬಾಳ,

manjunath gondabal
baldota protest

Get real time updates directly on you device, subscribe now.

Comments are closed.

error: Content is protected !!