ಅಂಗನವಾಡಿಗಳಲ್ಲಿ ಶಾಲಾ ಪೂರ್ವ ಶಿಕ್ಷಣ ಬಲವರ್ಧನೆಯ ‘ಪೋಷಕರ ನಡೆ-ಅಂಗನವಾಡಿ ಕಡೆ’ ಕಾರ್ಯಕ್ರಮ

Get real time updates directly on you device, subscribe now.

ವು ಕೊಪ್ಪಳ ತಾಲೂಕಿನ ಕೋಳೂರ ಗ್ರಾಮದಲ್ಲಿ ಆಗಸ್ಟ್ 25ರಂದು ವಿಶಿಷ್ಟವಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ಎಂದಿನ ತಮ್ಮ ಕಾರ್ಯದೊತ್ತಡದ ಮಧ್ಯೆಯೂ ಮಕ್ಕಳು ಮತ್ತು ಪೋಷಕರೊಂದಿಗೆ ಆತ್ಮೀಯವಾಗಿ ಬೆರೆತು ಅವರಿಗೆ ಪ್ರೋತ್ಸಾಹ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ, ಕಲಿಕೆ ಟಾಟಾ ಟ್ರಸ್ಟ್ ಹಾಗೂ ಶಿಶು ಅಭಿವೃದ್ಧಿ ಯೋಜನೆ ಕೊಪ್ಪಳ ಇವರ ಸಂಯುಕ್ತಾಶ್ರದಲ್ಲಿ ನಡೆದ ಕಾರ್ಯಕ್ರಮಕ್ಕೆ ತೆರಳಿದ ಜಿಲ್ಲಾಧಿಕಾರಿಗಳಿಗೆ ಅಂಗನವಾಡಿಯ ಬಾಲ ಮಕ್ಕಳು ಅಧಿಕಾರಿಗಳು ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ಹೂಗುಚ್ಛ ನೀಡಿ ಕಾರ್ಯಕ್ರಮಕ್ಕೆ ಬರಮಾಡಿಕೊಂಡದ್ದು ವಿಶೇಷವಾಗಿತ್ತು.
ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕೊಪ್ಪಳ ತಾಲೂಕಿನ ಕೋಳೂರ ಗ್ರಾಮದ 1 ಮತ್ತು 2ನೇ ಅಂಗನವಾಡಿ ಕೇಂದ್ರಗಳಿಗೆ ತೆರಳಿದ ವೇಳೆ ಜಿಲ್ಲಾಧಿಕಾರಿಗಳು, ಕಾರ್ಯಕ್ರಮದ ಕೇಂದ್ರ ಬಿಂದುಗಳಾಗಿದ್ದ ಪೋಷಕರು ಮತ್ತು ಮುದ್ದು ಮಕ್ಕಳೊಂದಿಗೆ ಮಾತನಾಡುತ್ತ ಕೆಲ ಸಮಯ ಕಳೆದರು. ಅಂಗನವಾಡಿಯ ಬಾಲ ಮಕ್ಕಳೊಂದಿಗೆ ಕುಳಿತು ಆ ಮಕ್ಕಳ ಓದು, ಬರಹ, ವಿವಿಧ ಶಾಲಾ ಚಟುವಟಿಕೆಗಳನ್ನು ತನ್ಮಯದಿಂದ ವೀಕ್ಷಿಸಿದರು. ಪೋಷಕರ ಕ್ರೀಯಾತ್ಮಕ ಚಟುವಟಿಕೆಗಳನ್ನು ಕಂಡು ಸಂತಸ ವ್ಯಕ್ತಪಡಿಸಿದರು. ಇದೆ ವೇಳೆ ಮಕ್ಕಳೊಂದಿಗೆ ಆಟವಾಡಿ ಅವರಿಗೆ ಸ್ಫೂರ್ತಿ ತುಂಬಿದರು. ಕೆಲವು ಮಕ್ಕಳು ಆಟವಾಡುವುದನ್ನು ಹಾಗೂ ಹಾಡುವುದನ್ನು ಮೊಬೈಲನಲ್ಲಿ ಸೆರೆ ಹಿಡಿದು ಸಂತಸ ವ್ಯಕ್ತಪಡಿಸಿದರು. ಅಂಗನವಾಡಿಯಲ್ಲಿ ಮಕ್ಕಳು ಗೊಂಬೆಮನೆಯಲ್ಲಿ ಆಟವಾಡುತ್ತ ಮಾಡಿಕೊಟ್ಟ ಚಹಾವನ್ನು ಜಿಲ್ಲಾಧಿಕಾರಿಗಳು ಸವಿದರು.
ಪಾಲಕರ ಪಾತ್ರ ಮಹತ್ವದ್ದು: ‘ಪೋಷಕರ ನಡೆ-ಅಂಗನವಾಡಿ ಕಡೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು, ಶಾಲಾ ಪೂರ್ವ ಶಿಕ್ಷಣ ಹಂತದಲ್ಲಿ ಓದುವ 3 ವರ್ಷದಿಂದ 6 ವರ್ಷದೊಳಗಿನ ಮಕ್ಕಳ ಬೆಳವಣಿಗೆಯಲ್ಲಿ ತಂದೆ ತಾಯಿ ಪೋಷಕರ ಪಾತ್ರ ಮಹತ್ವದಾಗಿರುತ್ತದೆ. ಶಾಲಾ ಪೂರ್ವ ಶಿಕ್ಷಣ ಪಡೆಯುವ ಮಕ್ಕಳ ಬೌದ್ಧಿಕ ಮತ್ತು ದೈಹಿಕ ಬೆಳವಣಿಗೆಗೆ ಬೇಕಾದ ವ್ಯವಸ್ಥೆಯನ್ನು ಅಂಗನವಾಡಿಗಳಲ್ಲಿ ಕಲ್ಪಿಸಲಾಗಿದೆ. ಹೀಗಾಗಿ ಪೋಷಕರು ತಮ್ಮ ಮಕ್ಕಳನ್ನು ಪ್ರತಿ ದಿನ ಅಂಗನವಾಡಿಗೆ ಕಳುಹಿಸಬೇಕು ಎಂದು ಮನವಿ ಮಾಡಿದರು. ಅಂಗನವಾಡಿಗಳಲ್ಲಿ ಸಿಗುವ ಸಾಮಾನ್ಯ ಜ್ಞಾನದಿಂದಾಗಿ ಮಕ್ಕಳ ಬೌದ್ಧಿಕ ಸಾಮರ್ಥ್ಯವು ವೃದ್ಧಿಯಾಗಲಿದೆ ಎಂದು ತಿಳಿಸಿದರು.
ಗೊಂಬೆಮನೆ ಚಟುವಟಿಕೆಗೆ ಮೆಚ್ಚುಗೆ: ಇದೆ ವೇಳೆ ಅಂಗನವಾಡಿಗಳಲ್ಲಿ ಸುಂದರವಾಗಿ ನಿರ್ಮಿಸಿದ್ದ ಗೊಂಬೆಮನೆಯ ಕಾರ್ಯ ಚಟುವಟಿಕೆಗಳ ಬಗ್ಗೆ ಸಹ ಜಿಲ್ಲಾಧಿಕಾರಿಗಳು ಕೇಳಿದರು. ಗೊಂಬೆಮನೆಯಲ್ಲಿ ಆಹಾರಧಾನ್ಯ, ತರಕಾರಿ, ಹಣ್ಣು ಸೇರಿದಂತೆ ವಿವಿಧ ಗೊಂಬೆಗಳನ್ನು ನಿರ್ಮಾಣ ಮಾಡಿ ಅದರ ಬಗ್ಗೆ ಮಕ್ಕಳಿಗೆ ಕೇಳಿ ಅವರಿಂದ ಗೊಂಬೆಗಳನ್ನು ಗುರುತಿಸಿ ಮಕ್ಕಳಿಗೆ ಮನರಂಜನೆ ಜತೆಗೆ ಅಕ್ಷರ ಜ್ಞಾನ ನೀಡಲಾಗುತ್ತದೆ ಎಂದು ಅಂಗನವಾಡಿ ಕಾರ್ಯಕರ್ತೆಯರು ಮಾಹಿತಿ ನೀಡಿದರು.
ಕಾರ್ಯಕ್ರಮದ ಬಳಿಕ ಪೋಷಕರು ಮತ್ತು ಮಕ್ಕಳು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯು ಜಿಲ್ಲಾಧಿಕಾರಿಗಳೊಂದಿಗೆ ಗ್ರೂಪ್ ಫೋಟೊ ತೆಗೆಯಿಸಿಕೊಂಡರು.
ಶಾಲಾ ಪೂರ್ವ ಕಾರ್ಯಕ್ರಮದ ಅನುಷ್ಠಾನ, ಪಾಲಕರ ಹಾಗೂ ಪೋಷಕರ ಸಹಭಾಗಿತ್ವ ಮತ್ತು ಅಂಗನವಾಡಿ ಸೇವೆಗಳ ಬಗ್ಗೆ ಇದೆ ವೇಳೆ ಜಿಲ್ಲಾಧಿಕಾರಿಗಳು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಗಂಗಪ್ಪ ಅವರೊಂದಿಗೆ ಚರ್ಚಿಸಿ ಇಲಾಖೆ ಸಿಬ್ಬಂದಿಗೆ ಪ್ರೋತ್ಸಾಹಿಸಿದರು.
ಸಮಾರಂಭದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜಯಶ್ರೀ ಆರ್., ಕಲಿಕಾ ಟಾಟಾ ಟ್ರಸ್ಟ್ನ ಜಿಲ್ಲಾ ವ್ಯವಸ್ಥಾಪಕ ಅಶೋಕ್, ಜಿಲ್ಲಾ ಸಂಯೋಜಕ ಸಿದ್ದಪ್ಪ ಕುರಿ, ವಲಯದ ಮೇಲ್ವಿಚಾರಕಿಯರಾದ ಪ್ರೀತಿ ಕೋರೆ, ಗಾಯತ್ರಿ, ಸುಮಂಗಲಾ ಸಜ್ಜನ್, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು, ಆಶಾ ಕಾರ್ಯಕರ್ತೆಯರು, ಇತರೆ ಸದಸ್ಯರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: