ಬಾನಾಸುಗೆ ಸಿನಿಮಾ ಪ್ರಶಸ್ತಿ ಕೆಯುಡಬ್ಲ್ಯೂಜೆ ಅಭಿನಂದನೆ

Get real time updates directly on you device, subscribe now.

ಬೆಂಗಳೂರು:
ಕೇಂದ್ರ ಸರ್ಕರದ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಘೋಷಣೆಯಾಗಿದ್ದು, ಅತ್ಯುತ್ತಮ ಸಿನಿಮಾ ವಿಮರ್ಶಕ ಪ್ರಶಸ್ತಿ ಕನ್ನಡದ ಹಿರಿಯ ಸಿನಿಮಾ ಪತ್ರಕರ್ತ ಬಾ ನಾ ಸುಬ್ರಹ್ಮಣ್ಯ ಅವರಿಗೆ ಲಭ್ಯವಾಗಿದೆ.‌ ಪ್ರಶಸ್ತಿಗೆ‌ ಭಾಜನರಾಗಿರುವ ಸುಬ್ರಹ್ಮಣ್ಯ ಅವರನ್ನು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಅಭಿನಂದಿಸಿದೆ.

ಬಾನಾಸು ಎಂದೇ ಪ್ರೀತಿಯಿಂದ ಕರೆಯಲ್ಪಡುವ ಸುಬ್ರಹ್ಮಣ್ಯ ಅವರು ಈ ವಿಶೇಷ ಪ್ರಶಸ್ತಿಗೆ‌ ಭಾಜನರಾಗಿರುವುದು ಸುದ್ದಿಮನೆಗೆ ಅಭಿಮಾನದ‌ ಸಂಗತಿ ಎಂದು ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಪ್ರತಿಕ್ರಯಿಸಿದ್ದು, ಅಭಿನಂದನೆಗಳನ್ನು ಸಲ್ಲಿದ್ದಾರೆ.

ಹಲವು ದಶಕಗಳಿಂದ ಸಿನೆಮಾ ಪತ್ರಕರ್ತರಾಗಿ ಸಲ್ಲಿಸಿರುವ‌ ಬಾನಾಸು ಸೇವೆಗೆ ಸಂದ ಅರ್ಹ ಗೌರವ ಇದಾಗಿದೆ ಎಂದು ಕೆಯುಡಬ್ಲ್ಯೂಜೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!