ಮಂಜುಳಾ ಕರಡಿ ಹೇಳಿಕೆ ಸರಿಯಲ್ಲ- ವೀರೇಶ ಮಹಾಂತಯ್ಯನಮಠ

Get real time updates directly on you device, subscribe now.

ಕೊಪ್ಪಳ:  ವಿಧಾನಸಭಾ ಕ್ಷೇತ್ರದಲ್ಲಿ ಕರಡಿ ಮತ್ತು ಹಿಟ್ನಾಳ್ ಕುಟುಂಬದ ಮಧ್ಯೆ ಮಾತ್ರ ರಾಜಕೀಯ ಸ್ಪರ್ಧೆಯಿದೆ. 
ಉಳಿದವರದ್ದು ಇಲ್ಲ ಎನ್ನುವ ಅರ್ಥದಲ್ಲಿ ಹೇಳಿಕೆ ನೀಡಿರುವ ಸಹೋದರಿ ಮಂಜುಳಾ ಕರಡಿಯವರ ಹೇಳಿಕೆ ಸರಿಯಲ್ಲ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ವೀರೇಶ ಮಹಾಂತಯ್ಯನಮಠ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಕೊಪ್ಪಳ ವಿಧಾನಸಭಾ ಕ್ಷೇತ್ರ ಯಾರಪ್ಪನ ಸ್ವತ್ತಲ್ಲ.
ಕರಡಿ ಮತ್ತು ಹಿಟ್ನಾಳ್ ಕುಟುಂಬಕ್ಕೆ ರಾಜಕೀಯ ಪುನರ್ಜನ್ಮ ನೀಡಿದ್ದು, ಜೆಡಿಎಸ್ ಪಕ್ಷ.
1999ರಲ್ಲಿ ಬಸವರಾಜ ಹಿಟ್ನಾಳ್ ಅವರು ಜೆಡಿಎಸ್‌ನಿಂದ ನಿಂತು 22ಸಾವಿರ ಮತ ಪಡೆದಿದ್ದಕ್ಕೆ 2004ರಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್ ಪಡೆದರು. ಅದಾದ ಬಳಿಕವೇ ಅವರು ಗೆದ್ದರು.
ಇನ್ನೂ ಸಂಸದ ಸಂಗಣ್ಣ ಕರಡಿಯವರು 2004ರಲ್ಲಿ ಬಿಜೆಪಿಯಿಂದ ನಿಂತು ಪರಾಭಾವಗೊಂಡಾಗ 2008ರಲ್ಲಿ ಅವರನ್ನು ಕೈ ಹಿಡಿದಿದ್ದು, ಇದೇ ಜೆಡಿಎಸ್ ಪಕ್ಷ.
ಸಂಸದರು ನಾಲ್ಕು ಬಾರಿ ಶಾಸಕರು, ಎರಡು ಬಾರಿ ಸಂಸದರಾಗಿದ್ದಾರೆ. ಜತೆಗೆ ಇತ್ತ ಹಿಟ್ನಾಳ್ ಕುಟಂಬದ ಬಸವರಾಜ ಹಿಟ್ನಾಳ್, ರಾಘವೇಂದ್ರ ಹಿಟ್ನಾಳ್ ಅವರು ಶಾಸಕರಾಗಿ ಹೊರಹೊಮ್ಮಿದ್ದಾರೆ.
ಆದರೆ, ಇವರಷ್ಟೆ ಕೊಪ್ಪಳ ಕ್ಷೇತ್ರದ ಅಧಿಪತಿಗಳು ಎನ್ನುವ ರೀತಿಯಲ್ಲಿ ಮಾತನಾಡುವುದು ಸರಿಯಲ್ಲ.
ರಾಜಕೀಯದಲ್ಲಿ ಟೀಕೆ, ಟಿಪ್ಪಣೆ ಸಹಜ. ಸಹೋದರ ಸಿ.ವಿ.ಚಂದ್ರಶೇಖರ್ ಅವರು, ಚುನಾವಣೆಯಲ್ಲಿ ತಮಗೆ ಆದ ಅನ್ಯಾಯವನ್ನು ಖಂಡಿಸಿ, ಸಂಸದ ಸಂಗಣ್ಣ ಕರಡಿಯವರ ವಿರುದ್ಧ ಮಾತನಾಡಿದ್ದಾರೆ.
ಆದರೆ, ಅದನ್ನು ವಿರೋಧಿಸುವ ಬರದಲ್ಲಿ ಕೊಪ್ಪಳ ಕ್ಷೇತ್ರ ಹಿಟ್ನಾಳ್ ಮತ್ತು ಕರಡಿ ಕುಟುಂಬದ ಸ್ವತ್ತು ಎನ್ನುವ ಅರ್ಥದಲ್ಲಿ ಹೇಳಿಕೆ ನೀಡಿರುವ ಸಹೋದರಿ ಮಂಜುಳಾ ಕರಡಿಯವರ ಹೇಳಿಕೆ ಆಕ್ಷೇಪಾರ್ಹ ಎಂದು ವೀರೇಶ ಮಹಾಂತಯ್ಯನಮಠ ಅವರು ಕಿಡಿಕಾರಿದ್ದಾರೆ.

Get real time updates directly on you device, subscribe now.

Comments are closed.

error: Content is protected !!