Sign in
Sign in
Recover your password.
A password will be e-mailed to you.
ಕೊಪ್ಪಳ: ತಾಲೂಕಿನ ಅಳವಂಡಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಅಕಾಲಿಕ ಮಳೆಯಿಂದಾಗಿ ರೈತರ ಬೆಳೆಗಳೆಲ್ಲಾ ಹಾನಿಯಾಗಿದ್ದು ಮತ್ತು ಈ ಹಿಂದೆ ಸರಿಯಾದ ಸಮಯಕ್ಕೆ ಮಳೆಯಾಗದೆ ಬೆಳೆಗಳೆಲ್ಲಾ ಒಣಗಿರುವ ಕುರಿತು ರೈತರ ಹಾಗೂ ಜೆಡಿಎಸ್ ಕಾರ್ಯಕರ್ತರ ನೋವನ್ನು ರೈತರ ಸಂಕಷ್ಟವನ್ನು ಅರಿತು ನಾಶವಾಗಿರುವ ಬೆಳೆಗಳ ವೀಕ್ಷಣೆ ಮಾಡಿದ ಜೆಡಿಎಸ್ ರಾಜ್ಯ ಕೋರ್ ಕಮಿಟಿಯ ಸದಸ್ಯ ಸಿ.ವಿ ಚಂದ್ರಶೇಖರ ಸರ್ಕಾರದ ಹಾಗೂ ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ತರುವ ಕೆಲಸವನ್ನು ಮಾಡುತ್ತೇನೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಕೇವಲ ಗ್ಯಾರಂಟಿ ಗಳ ಹಿಂದೆ ಬಿದ್ದು ಅಭಿವೃದ್ಧಿಯನ್ನು ಮರೆತಿದೆ, ಇದೊಂದು ರೈತ ವಿರೋಧಿ ಸರ್ಕಾರವಾಗಿದ್ದು ಕಾಂಗ್ರೆಸ್ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ತಮ್ಮ ಪಕ್ಷದ ಆಂತರಿಕ ಕಿಚ್ಚಾಟದಲ್ಲಿ ರಾಜ್ಯದ ಜನತೆಯನ್ನು ಸಂಕಷ್ಟಕ್ಕೆ ದೂಡುತ್ತಿದೆ ಈ ಕೂಡಲೇ ರಾಜ್ಯ ಸರ್ಕಾರ ಎಚ್ಛೆತ್ತುಕೊಂಡು ಸೂಕ್ತ ಪರಿಹಾರವನ್ನು ಘೋಷಿಸಬೇಕು ಇಲ್ಲವಾದರೆ ಮುಂಬರುವ ದಿನಗಳಲ್ಲಿ ರಾಜ್ಯದಾದ್ಯಂತ ಉಗ್ರ ಹೋರಾಟವನ್ನು ಕೈಗೊಳ್ಳಗುವುದು ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಜೆಡಿಎಸ್ ಕೊಪ್ಪಳ ಜಿಲ್ಲಾಧ್ಯಕ್ಷ ವೀರೇಶ ಮಹಾಂತಯ್ಯನಮಠ, ತಾಲೂಕ ಅಧ್ಯಕ್ಷ ಚೆನ್ನಪ್ಲ ಮುತ್ತಾಳ, ಅಳವಂಡಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಶಂಕ್ರಮ್ಮ ಹನುಮಪ್ಪ ಜೋಗಿ, ಮಾಜಿ ಅಧ್ಯಕ್ಷರು ಭಾರತಿ ಮಲ್ಲಪ್ಪ ಬೆಣಕಲ್ ಹಾಗೂ ಪಕ್ಷದ ಮುಖಂಡರಾದ ದೇವಪ್ಪ ಕಟ್ಟಿಮನಿ, ಭೀಮರಡ್ದೆಪ್ಪ ಗದ್ದಿಕೇರಿ, ಚಂದಪ್ಪ ಜಂತ್ಲಿ, ಗಾಳಿರೆಡ್ಡಿ, ಶರಣಪ್ಪ ಜಡಿ, ಮಂಜುನಾಥ ಬೆದವಟ್ಟಿ, ವಸಂತರೆಡ್ಡಿ, ಖಾಜಾಸಾಬ ನದಾಫ್, ಗೊನೆಪ್ಪ ಉಪ್ಪಾರ, ಹನುಮಂತ ಜೋಗಿನ್, ರಾಮಣ್ಣ ವಡ್ಡರ, ವಿರೂಪಾಕ್ಷಪ್ಪ ಜೋಳದ, ಬಾಳಪ್ಪ ವಾಲಿಕಾರ, ಸತೀಶ ಜಾನಗರ, ಉಮೇಶ ಗೌಡ, ಮಾರುತಿ, ವಿಜಯ ದೊತರಗಾವಿ, ಅಶೋಕ ಮುತ್ತಾಳ, ಪರಶುರಾಮ ಭಜಂತ್ರಿ, ನಾಗರಾಜ, ಸಂತೋಷ ಮೈನಳ್ಳಿ, ರವಿ ಭಜಂತ್ರಿ, ಸುಭಾಸರೆಡ್ಡಿ, ಆನಂದ, ರಾಮಕೃಷ್ಣ ಬೆಳಗಿ, ಗೋಣೆಶ ಗೋಣಿಸ್ವಾಮಿ ಸೇರಿದಂತೆ ರೈತರು ಗ್ರಾಮಸ್ಥರು ಉಪಸ್ಥಿತರಿದ್ದರು
Get real time updates directly on you device, subscribe now.
Comments are closed.