ಯಲಬುರ್ಗಾ ತಾಲೂಕಿನ ಕೂಸಿನ ಮನೆಗಳಿಗೆ ಮೊಬೈಲ್ ಕ್ರೆಚ್ಛಸ್ ಸಂಸ್ಥೆ ಬೆಂಗಳೂರು ತಂಡ ಭೇಟಿ: ಪರಿಶೀಲನೆ

Get real time updates directly on you device, subscribe now.

: ಇಂದು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮುಧೋಳ, ಕರಮೂಡಿ, ಹಿರೇಮ್ಯಾಗೇರಿ, ಸಂಕನೂರ ಗ್ರಾಮ ಪಂಚಾಯತಿಗಳ ಕೂಸಿನ ಮನೆಗೆ ಮೊಬೈಲ್ ಕ್ರಚ್ಛಸ್ ಸಂಸ್ಥೆ ಬೆಂಗಳೂರು ತಂಡದ ಶಶಿಧರ್ ಅವರು ಭೇಟಿ ನೀಡಿ ಪರಿಶೀಲಿಸಿದರು.

ಕೂಸಿನ ಮನೆಯಲ್ಲಿ ಮಕ್ಕಳ ಹಾಜರಾತಿ, ಗುಣಮಟ್ಟದ ಆಹಾರ, ಸ್ವಚ್ಛತೆ, ಮಕ್ಕಳಿಗೆ ಸ್ವಚ್ಛತೆ ಬಗ್ಗೆ ಮಾಹಿತಿ, ಹಾಡು, ನೃತ್ಯ, ಆರೋಗ್ಯ ತಪಾಸಣೆ ಮುಂತಾದವುಗಳ ಬಗ್ಗೆ ಕೂಸಿನ ಮನೆಯಲ್ಲಿ ಕೆಲಸ ಮಾಡುತ್ತಿರುವ ಕೇರ್ ಟೆಕರ್ ಗಳಿಂದ ಮಾಹಿತಿ ಪಡೆದರು.
ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬರುವಂತೆ ಕೆರ್ ಟೇಕರ್ ಅವರು ಮನೆ ಮನೆ ಭೇಟಿ ನೀಡಿ ಕರೆದುಕೊಂಡು ಬರಬೇಕು. ಜಿಲ್ಲಾ ಪಂಚಾಯತಿಯಲ್ಲಿ ನಿರ್ಧರಿಸಿದಂತೆ ಆಹಾರ ವಿತರಣೆಯಾಗಬೇಕು. ಪ್ರತಿ ತಿಂಗಳು ಆರೋಗ್ಯ ತಪಾಸಣೆ ಮಾಡಿಸಬೇಕು ಎಂದು ಶಶಿಧರ್ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕರಾದ ಫಕೀರಪ್ಪ ಕಟ್ಟಿಮನಿ, ಆರ್ ಜಿಪಿಆರ್ ಫೆಲೋ ನವೀನ್ K, ಐಇಸಿ ಸಂಯೋಜಕರಾದ ಶರಣಪ್ಪ ಹಾಳಕೇರಿ, ಪಿಡಿಒರಾದ ವೀರಭದ್ರಗೌಡ ಮೂಲಿಮನಿ, ಕಾರ್ಯದರ್ಶಿಗಳಾದ ಮಹಾಂತೇಶ ಬಾಳಿಕಾಯಿ, ಎಸ್ ಡಿಎ ಮಹಿಬುಬ್, ಕರವಸೂಲಿಗಾರರು, ಕೇರ್ ಟೇಕರ್ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!