ವಿದ್ಯಾಭ್ಯಾಸ ಮೊಟಕುಗೊಳಿಸದಿರಿ, ಸ್ತ್ರೀ ಜ್ಞಾನದ ಶಕ್ತಿ: ಟಿ ಲಿಂಗರಾಜು

Get real time updates directly on you device, subscribe now.

ವಿದ್ಯಾಭ್ಯಾಸ ಮೊಟಕುಗೊಳಿಸದಿರಿ, ಸ್ತ್ರೀ ಜ್ಞಾನದ ಶಕ್ತಿ: ಟಿ ಲಿಂಗರಾಜು

ಕೊಪ್ಪಳ

ಹೆಣ್ಣೊಂದು ಕಲಿತರೆ ಊರುಗೆಲ್ಲ ಕಲಿಸುತ್ತಾರೆ, ಸ್ತ್ರೀ ಎಂದರೆ ಜ್ಞಾನದ ಶಕ್ತಿ, ನಿಮ್ಮ ವಿದ್ಯಾಭ್ಯಾಸವನ್ನು ಮೊಟಕುಗೊಳಿಸದಿರಿ ಎಂದು ಡಿಹೆಚ್ಓ ಟಿ.ಲಿಂಗರಾಜ ಹೇಳಿದರು

ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಜರುಗಿದ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತ್ನಾಡಿದರು, ಹೆಣ್ಣೊಂದು ಕಲಿತರೆ ಈ ಸಮಾಜದಲ್ಲಿ ಕಲಿಕೆಯ ವಾತಾವರಣ ಸೃಷ್ಟಿಯಾಗುತ್ತದೆ. ನಿಮ್ಮ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸದೇ, ಉನ್ನತ ಶಿಕ್ಷಣವನ್ನು ಪಡೆದು, ಈ ಸಮಾಜದಲ್ಲಿ ಜವಾಬ್ದಾರಿಯುತ ಪ್ರಜೆಗಳಾಗಿ ಸೇವೆ ಮಾಡಬೇಕಾಗಿದೆ. ಕಾರಣ
ನಮ್ಮ ಸರ್ಕಾರದ ಜಾಗೃತಿ ಕಾರ್ಯಕ್ರಮಗಳಿಗೆ ಇಂದು ಮಹಿಳೆಯರೇ ಹೆಚ್ಚಾಗಿ ಕಾರ್ಯನಿರ್ವಹಿಸುತ್ತಾರೆ. ಸ್ತ್ರೀ ಎಂದರೆ ಅದು ಶಕ್ತಿ ಎಂದರು.

ನಾನು ಇಂದು ಶಕ್ತಿಕೇಂದ್ರದಲ್ಲಿ ಮಾತ್ನಾಡುತ್ತಿರುವೆ, ಕಾರಣ ಮಹಿಳೆಯರೆಂದ್ರೆ ಶಕ್ತಿ ಇದು ನನಗೆ ಸಿಕ್ಕಸದಾವಕಾಶ. ಪರೀಕ್ಷೆಗಳನ್ನು ಚೆನ್ನಾಗಿ ಬರೆದು ಮುಂದಿನ ವಿದ್ಯಾಭ್ಯಾಸ ಮೊಟಕುಗೊಳಿಸದೆ,
ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಿ ಉತ್ತಮ ಪ್ರಜೆಳಾಗಿ ಈ ದೇಶ ಕಟ್ಟುವ ಕೆಲಸ ಮಾಡೋಣ ಎಂದರು

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮಾತ್ನಾಡಿದ ಹಿರಿಯ ಸಾಹಿತಿ ಅಲ್ಲಪ್ರಭು ಬೆಟದೂರು ಮಾತ್ನಾಡಿ, ಈ ದೇಶದಲ್ಲಿ ಮಹಿಳೆಯರ ಶಿಕ್ಷಣಕ್ಕೆ ಹೆಚ್ಚಿನ ಒತ್ತುಕೊಡಬೇಕಾಗಿದೆ. ಸಾವಿತ್ರಿಬಾಯಿ ಫುಲೆ ಈ ದೇಶದಲ್ಲಿ ಶಿಕ್ಷಣ ಕ್ರಾಂತಿ ಮಾಡಿದವರು, ಅಂದು ಅವರ ಮೇಲೆ ಸಗಣಿ ಎಸೆಯುತ್ತಾರೆ ಆದ್ರೂ ಎದೆಗುಂದದೆ ಅಪಮಾನಗಳನ್ನು ಎದುರಿಸಿ ಶಿಕ್ಷಣ ಕ್ರಾಂತಿ ಮಾಡಿದರು. ಶಿಕ್ಷಣ ಎನ್ನುವುದು ಅಷ್ಟು ಸುಲಭವಾಗಿ ಸಕ್ಕಿದ್ದಲ್ಲ. ಅದೇ ರೀತಿ ಕೊಪ್ಪಳದಲಿ ಈ ಮಹಿಳಾ ಕಾಲೇಜು ಅಷ್ಟು ಸುಲಭವಾಗಿ ಸಿಕ್ಕಿಲ್ಲ, ನಿಮ್ಮ ಹಿರಿಯ ವಿದ್ಯಾರ್ಥಿನಿಯರು ಪಟ್ಟ ಶ್ರಮ ಇಂದು ಬೃಹತ್ ಕಟ್ಟಡವಾಗಿ ನಿಂತಿದೆ. ಜ್ಯೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆ, ಅಂಬೇಡ್ಕರ್ ಅವರ ಆದರ್ಶಗಳನ್ನು ರೂಢಿಸಿಕೊಳ್ಳಿ, ಮೊಬೈಲ್ ಗಳಿಂದ ದೂರ ಇರೀ ವಿದ್ಯಾಭ್ಯಾಸದಲ್ಲಿ ತೊಡಗಿಕೊಳ್ಳಿ ಎಂದರು.

ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲ ಬಿ.ಜಿ ಕರಿಗಾರ ಮಾತ್ನಾಡಿ, ವಿದ್ಯಾರ್ಥಿಗಳಿಗೆ ಇಂದು ಓದುವುದಕ್ಕೆ ಸಾಕಷ್ಟು ಅವಕಾಶಗಳಿವೆ. ಸಾರಿಗೆ ಸೌಕರ್ಯಗಳಿವೆ. ಮಹಿಳೆಯರು ಉತ್ತಮ ಶಿಕ್ಷಣ ಪಡೆದು, ಉತ್ತಮ ಪ್ರಜೆಗಳಾಗಿ, ಈ ಕಾಲೇಜು ಬೆಳವಣಿಗೆಗೆ ಶ್ರಮಿಸಿ ಎಂದರು.

ವಾಣಿಜ್ಯಶಾಸ್ತ್ರ ಪ್ರಾಧ್ಯಾಪಕ ವಿಠೋಬ ಮಾತ್ನಾಡಿದರು, ಕಾಲೇಜಿನ ಪ್ರಾಂಶುಪಾಲ ಡಾ. ಗಣಪತಿ ಕೆ ಲಮಾಣಿ ಅಧ್ಯಕ್ಷತೆಯನ್ನು ವಹಿಸಿದ್ದರು, ಕನ್ನಡ ಪ್ರಾಧ್ಯಾಪಕರಾದ ಹುಲಿಗೆಮ್ಮ ಪ್ರಾಸ್ತಾವಿಕ ನುಡಿದರು, ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!