ಕೊಪ್ಪಳ  ವಿಧಾನಸಭಾ ಕ್ಷೇತ್ರ ಜೆಡಿಎಸ್ ಪಕ್ಷಕ್ಕೆ: ಸಿವಿಸಿ ಭರವಸೆ

Get real time updates directly on you device, subscribe now.

ಕೊಪ್ಪಳ: ದಿನದಿಂದ ದಿನಕ್ಕೆ ಜೆಡಿ (ಎಸ್) ಪಕ್ಷದ ಶಕ್ತಿ ವೃದ್ಧಿಯಾಗುತ್ತಿದ್ದು ಮುಂದಿನ ಚುನಾವಣೆಗಳಲ್ಲಿ ಪಕ್ಷ ಕೊಪ್ಪಳ ವಿಧಾನಸಭಾ  ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲಿದೆ ಎಂದು ಜೆಡಿ (ಎಸ್) ರಾಜ್ಯ ಕೋರ್ ಕಮಿಟಿ ಸದಸ್ಯರಾದ ಸಿ ವಿ ಚಂದ್ರಶೇಖರ್ ಹೇಳಿದರು.
‘ಜನರೊಂದಿಗೆ ಜನತಾದಳ ಹಾಗೂ ಬೆಸ್ಟ್ ಕಾಲ್ ಸದಸ್ಯತ್ವ ನೋಂದಣಿ’ ಅಭಿಯಾನದ ಅಂಗವಾಗಿ ಕೊಪ್ಪಳದ ವಾರ್ಡ್ 14ರಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆಂತರಿಕ ಕಲಹ, ಭ್ರಷ್ಟಾಚಾರ ಹಾಗೂ ಸೃಜನ ಪಕ್ಷಪಾತದಿಂದ ಕಾಂಗ್ರೆಸ್ ಸರಕಾರ ಹಳಿ ತಪ್ಪಿದೆ. ಮೂಲಭೂತ ಸೌಕರ್ಯ ಹಾಗೂ ಅಭಿವೃದ್ಧಿಗೆ ಕುಂದುಂಟಾಗಿ ಮತದಾರರು ಸರಕಾರದ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ.
ಹೀಗಾಗಿ ಮೈತ್ರಿ ಪಕ್ಷಗಳತ್ತ ಜನರ ಒಲವು ಹೆಚ್ಚಾಗಿದೆ ಎಂದು ಹೇಳಿದರು.
ಹೆಚ್ ಡಿ ಕುಮಾರಸ್ವಾಮಿಯವರು ಮುಖ್ಯಮಂತ್ರಿ ಆಗಿದ್ದಾಗ ರೈತರ ಸಾಲ ಮನ್ನಾ ಮಾಡಿದರು. ಅತಿ ಹೆಚ್ಚು ಪ್ರಯೋಜನ ಪಡೆದದ್ದು ಕೊಪ್ಪಳ ಜಿಲ್ಲೆಯ ರೈತರು. ಜನತಾದಳ ಸರಕಾರದ ಅವಧಿಯಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳನ್ನು ಜನ ಎಂದಿಗೂ ಮರೆತಿಲ್ಲ. ಹೀಗಾಗಿ ನಮ್ಮ ಪಕ್ಷದ ಕಡೆಗೆ ಒಲವು ಹೆಚ್ಚಾಗಿದೆ ಎಂದರು.
ನಮ್ಮ ನಾಯಕರು ಪಕ್ಷವನ್ನು ತಳಮಟ್ಟದಲ್ಲಿ ಕಟ್ಟಲು ನಿರ್ಧರಿಸಿದ್ದಾರೆ. ಅದಕ್ಕಾಗಿ ಸದಸ್ಯತ್ವ ಅಭಿಯಾನ ನೋಂದಣಿ ಮತ್ತು ಮಿಸ್ಡ್ ಕಾಲ್ ಅಭಿಯಾನ ಜೋರಾಗಿ ನಡೆಯುತ್ತಿದೆ. ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಇದಕ್ಕೆ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ. ಅಗಸ್ಟ್ 2ನೇ ವಾರದಲ್ಲಿ ಯುವ ನಾಯಕ ನಿಖಿಲ್ ಕುಮಾರ್ ಸ್ವಾಮಿ ಅವರು ಕೊಪ್ಪಳಕ್ಕೆ ಅಭಿಯಾನದ ಅಂಗವಾಗಿ ಭೇಟಿ ನೀಡಲಿದ್ದಾರೆ ಎಂದರು.
ವಾರ್ಡ್ 14ರ ವಿವಿಧ ಪ್ರದೇಶಗಳಿಗೆ ಭೇಟಿ ಕೊಟ್ಟು ನೂತನ ಸದಸ್ಯರ ನೋಂದಣಿ ಮಾಡಲಾಯಿತು. ಅಂಗಡಿ ಮುಗ್ಗಟ್ಟುಗಳಿಗೆ ಆಗುವ ಮನೆಗಳಿಗೆ ಭೇಟಿ ನೀಡಲಾಯಿತು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ಜೆ.ಡಿ, ಮಾಹಿತಿ ತಂತ್ರಜ್ಞಾನ ಜಿಲ್ಲಾಧ್ಯಕ್ಷರಾದ ಶ್ರೀ ಪ್ರವೀಣ್ ಕುಮಾರ, ನಗರ ಅಧ್ಯಕ್ಷರಾದ ಶ್ರೀ ಸೋಮನಗೌಡ ಹೊಗರನಾಳ, ಹಿರಿಯ ಮುಖಂಡರಾದ ಶ್ರೀ ಶ್ರೀನಿವಾಸ್ ಗಿಣಗೇರಿ, ಶ್ರೀ ರವಿಕುಮಾರ ಮೇದಾರ್, 4ನೇ ವಾರ್ಡಿನ ಭೋವಿ ಸಮಾಜದ ಗುರು ಹಿರಿಯರಾದ ರಾಮಣ್ಣ ಅಳವಂಡಿ ಭರಮಜ್ಜ ಪೂಜಾರಿ ಅಮಾಜಪ್ಪ ಪೂಜಾರಿ, ಗಿರೀಶ್ ಪೂಜಾರಿ, ಲಕ್ಷ್ಮಣ್ ಪೂಜಾರಿ, ಅರುಣ್ ಕುಮಾರ್ ರಾಘು ಕುಣಿಕೇರಿ ವೆಂಕಟೇಶ್ ಪೂಜಾರಿ, ರಂಗಪ್ಪ ಭೋವಿ, ರಾಮು ಪೂಜಾರಿ, ವೆಂಕಟೇಶ್ ಪೂಜಾರಿ, ರಾಮಣ್ಣ, ವೆಂಕಟೇಶ್ ಸೂಡಿ, ರಮೇಶ್ ಸೂಡಿ, ಲಕ್ಷ್ಮಣ ಅಳವಂಡಿ, ಹುಲಗಪ್ಪ ಹಿರೇಮನಿ ಹಾಗೂ ಎಲ್ಲಾ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!