ಬಿಜೆಪಿ ಎಂಎಲ್‌ಸಿ ರವಿಕುಮಾರ ಒಬ್ಬ ನಾಲಾಯಕ್ : ಗೊಂಡಬಾಳ ಬೇಸರ

0

Get real time updates directly on you device, subscribe now.

ಕೊಪ್ಪಳ: ಬಿಜೆಪಿ ನಾಯಕರು ಪಾಕಿಸ್ತಾನದ ಪ್ರಿಯರು ಎಂಬುದು ಕಲಬುರಗಿಯ ಜಿಲ್ಲಾಧಿಕಾರಿ ಬಗೆಗಿನ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಹೇಳಿಕೆ ಗೊತ್ತು ಮಾಡಿತ್ತು ಈಗ ಅದೇ ನಾಲಾಯಕ್ ಎಂಎಲ್‌ಸಿ ಮತ್ತೋರ್ವ ಹಿರಿಯ ಐಎಎಸ್ ಅಧಿಕಾರಿ ಶಾಲಿನಿ ರಜನೀಶ್ ಕುರಿತು ಆಡಿದ ಮಾತು ಮಹಿಳೆ ಕುರಿತು ಅವರ ಮನುವ್ಯಾದಿತನ ತೋರಿಸುತ್ತದೆ ಎಂದು ಕಾಂಗ್ರೆಸ್ ನಾಯಕಿ, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯೆ ಜ್ಯೋತಿ ಎಂ. ಗೊಂಡಬಾಳ ಹೇಳಿಕೆ ನೀಡಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಬಿಜೆಪಿಗರು ಇಷ್ಟು ದಿನ ರಾಜಕೀಯ ನಾಯಕರ ವಿರುದ್ಧ ಮಾತನಾಡುತ್ತಿದ್ದರು, ಈಗ ಅವರ ನಾಲಿಗೆ ಇನ್ನೂ ಉದ್ದವಾಗಿ ಅಧಿಕಾರಿಗಳನ್ನೂ ಅತ್ಯಂತ ಕೀಳುಮಟ್ಟದಲ್ಲಿ ಬಿಂಬಿಸುವ ಮೂಲಕ ಏನನ್ನೋ ಹೇಳಲು ಹೊರಟಂತಿದೆ. ನ್ಯಾಯಾಲಯವೇ ರವಿಕುಮಾರಗೆ ಛೀಮಾರಿ ಹಾಕಿದ್ದರೂ ಬುದ್ಧಿ ಕಲಿತುಕೊಳ್ಳದ ವ್ಯಕ್ತಿ ಮತ್ತೊಮ್ಮೆ ಅದನ್ನೇ ಇನ್ನೋರ್ವ ಹಿರಿಯ ಐಎಎಸ್ ಅಧಿಕಾರಿ ಶಾಲಿನಿ ರಜನೀಶ್ ಮೇಲೆ ಸಲ್ಲದ ಭಾಷೆಯ ಮೂಲಕ ಆಪಾದನೆ ಮಡಿದ್ದು ಅತ್ಯಂತ ಹೇಸಿಗೆ ತರಿಸುತ್ತಿದೆ, ಕೂಡಲೇ ಬಿಜೆಪಿ ಅವರನ್ನು ಅಮಾನತ್ತು ಮಾಡಬೇಕು, ರಾಜ್ಯಪಾಲರು ಈತನ ಪರಿಷತ್ ಸದಸ್ಯತ್ವ ರದ್ದುಗೊಳಿಸಲು ವಿಧಾನ ಪರಿಷತ್ ಸಭಾಧ್ಯಕ್ಷರಿಗೆ ಶಿಫಾರಸ್ಸು ಮಾಡಬೇಕು ಎಂದು ಜ್ಯೋತಿ ಒತ್ತಾಯಿಸಿದ್ದಾರೆ.
ಇದು ನಿಜಕ್ಕೂ ದುರಾದೃಷ್ಟಕರ ಸಂಗತಿ, ಬಿಜೆಪಿಗರು ಸೇನಾಧಿಕಾರಿಗೆ ಭಯೋತ್ಪಾದಕರ ಸಹೋದರಿ ಎಂದರು, ಸೈನಿಕರ ಪತ್ನಿಯರ ಶೀಲದ ಬಗ್ಗೆ ಸಂಶಯದಿAದ ಮಾತನಾಡಿದರು, ಅಲ್ಲಿ ಜಿಲ್ಲಾಧಿಕಾರಿ ಪಾಕಿಸ್ತಾನದಿಂದ ಬಂದವರು ಎಂದರು ಈಗ ಐಎಎಸ್ ಅಧಿಕಾರಿಯ ಮಾನ ಹೋಗುವ ರೀತಿ ಮಾತುಗಳನ್ನು ಆಡಿದ್ದಾರೆ. ಹೆಣ್ಣುಮಕ್ಕಳಬನ್ನು ಕೀಳಾಗಿ ನೋಡುವ ಬಿಜೆಪಿಗೆ ತಕ್ಕ ಶಾಸ್ತಿ ಆಗುತ್ತದೆ, ರಾಜ್ಯ ದೇಶದ ಮಹಿಳೆಯರಿಗೆ ಅದು ಖಂಡಿತ ಅರ್ಥವಾಗುತ್ತದೆ.
ಅಧಿಕಾರಿಗಳ ನೈತಿಕ ಸ್ಥೆöÊರ್ಯ ಕಸಿಯುವ ಪ್ರಯತ್ನದಲ್ಲಿರುವ ರವಿಕುಮಾರ್ ಬೇಷರತ್ ಕ್ಷಮೆ ಕೇಳಬೇಕು ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯೆ ಜ್ಯೋತಿ ಎಂ. ಗೊಂಡಬಾಳ ಎಚ್ಚರಿಸಿದ್ದಾರೆ.

Get real time updates directly on you device, subscribe now.

Leave A Reply

Your email address will not be published.

error: Content is protected !!