ಡಾ.ಕೆ.ಎಂ.ಸೈಯದ್ ಅವರ 44ನೇ ಜನ್ಮದಿನ ಆಚರಣೆ

ಕೊಪ್ಪಳ : ಕೆಎಂಎಸ್ ಸಮೂಹ ಸಂಸ್ಥೆಯ ಅಧ್ಯಕ್ಷ, ರಾಜ್ಯ ಕೆಪಿಸಿಸಿ ಸಂಯೋಜಕ ಡಾ. ಕೆ.ಎಂ ಸೈಯದ್ ಅವರ 44ನೇ ಜನ್ಮ ದಿನಾಚರಣೆಯನ್ನು ಸೈಯದ್ ಅಭಿಮಾನಿ ಬಳಗ ಸಂಭ್ರಮದಿಂದ ಆಚರಿಸಿದರು.
ಜನ್ಮದಿನದ ಅಂಗವಾಗಿ ನಗರದ ಸುರಭಿ ವೃದ್ಧಾಶ್ರಮಕ್ಕೆ ತೆರಳಿ ಹಣ್ಣು ಹಂಪಲುಗಳನ್ನು ವಿತರಿಸಲಾಯಿತು, ನಂತರ ಗವಿಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆಯಲಾಯಿತು ನಂತರ ಪೀರ ಪಾಷ ಖಾದ್ರಿ ದರ್ಗಾಕ್ಕೆ ಭೇಟಿ, ತಾಲೂಕು ಕ್ರೀಡಾಂಗಣದ ಬಳಿ ಆಟೋ ಚಾಲಕರು ಕೇಕ್ ಕತ್ತರಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದರು,ನಂತರ ಕೆಎಂಎಸ್ ಕಚೇರಿಯಲ್ಲಿ ಅಭಿಮಾನಿಗಳೊಂದಿಗೆ ಕೇಕ್ ಕತ್ತರಿಸಿ ಸಿಹಿ ವಿತರಿಸಿದರು,
ನಂತರ ತಾಲೂಕಿನ ಹುಲಿಗಿ ಹೊಸಳ್ಳಿಯಲ್ಲಿ ಡಾ.ಕೆ.ಎಂ.ಸೈಯದ್ ಹುಟ್ಟುಹಬ್ಬದ ನಿಮಿತ್ತ ಹಲವಾರು ಸಮಾಜಮುಖಿ ಸೇವಾ ಚಟುವಟಿಕೆಗಳನ್ನು ಹಮ್ಮಿಕೊಂಡು, ಉಚಿತ ಕಣ್ಣಿನ ತಪಾಸಣೆ ಶಿಬಿರ,ರಕ್ತದಾನ ಶಿಬಿರ, ವೃಕ್ಷಾರೋಪಣಾ ಅಭಿಯಾನ ನಡೆಸಲಾಯಿತು.
ನಂತರ ಡಾ.ಕೆ.ಎಂ.ಸೈಯದ್ ಮಾತನಾಡಿ ನನ್ನ ಹುಟ್ಟುಹಬ್ಬವನ್ನು ಇಷ್ಟು ಸಂಭ್ರಮದಿಂದ ಆಚರಿಸಿದ್ದು ನನಗೆ ಸಂತಸ ಎನಿಸುತ್ತದೆ, ನಿಮ್ಮ ಅಭಿಮಾನಕ್ಕೆ ಪಾರವೇ ಇಲ್ಲ ನಿಮ್ಮ ಆಶೀರ್ವಾದ ಅಭಿಮಾನ ಸದಾ ಇರಲಿ ಎಂದರು.
ಮುಫ್ತಿ ನಜೀರ್ ಅಹ್ಮದ್ ಗುರುಗಳು ಹುಟ್ಟು ಹಬ್ಬದ ನಿಮಿತ್ತ ಶುಭ ಕೋರಿದರು.
ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಗ್ಯಾರೆಂಟಿ ಯೋಜನೆ ಪ್ರಾಧಿಕಾರ ಅನುಷ್ಠಾನದ ಅಧ್ಯಕ್ಷ ರೆಡ್ಡಿ ಶ್ರೀನಿವಾಸ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ಕಾಟನ್ ಪಾಷಾ, ನಗರ ಪ್ರಾಧಿಕಾರ ಸದಸ್ಯ ಖತೀಬ್ ಬಾಷಾ ಸಾಹೇಬ್, ಅಕ್ಬರ್ ಪಾಷಾ ಪಲ್ಟನ್, ಮಹಬೂಬ್ ಅರಗಂಜಿ, ಶಿವಕುಮಾರ ಪಾವಲಿ ಶೆಟ್ಟರ, ಶರಣಪ್ಪ ಸಜ್ಜನ್, ರಾಮು ಪೂಜಾರ, ದಾವಲ್ ಮಲ್ಲಿಕ್ ಸೇರಿದಂತೆ ಅನೇಕ ಮುಖಂಡರು ಹುಟ್ಟುಹಬ್ಬದ ನಿಮಿತ್ತ ಶುಭ ಕೋರಿದರು.
Comments are closed.