ಹಿರಿಯ ಪತ್ರಕರ್ತ ಪ್ರಕಾಶ್ ಜಿ ಅವರ ನನ್ಸಿರಿ ಕಾದಂಬರಿ ಬಿಡುಗಡೆ
ಬೆಂಗಳೂರು:
ವಿಜಯಕರ್ನಾಟಕ ವರದಿಗಾರ ಜಿ.ಪ್ರಕಾಶ್ ಅವರ ಚೊಚ್ಚಲ ನನ್ಸಿರಿ ಕಾದಂಬರಿ ಬಿಡುಗಡೆ ಸಮಾರಂಭ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಆವರಣದ ನಯನಾ ಸಭಾಂಗಣದಲ್ಲಿ ಜೂ.28ರಂದು ಬೆಳಗ್ಗೆ 10.30ಕ್ಕೆ ಆಯೋಜಿಸಲಾಗಿದೆ.
ಹಾಡ್ನಹಳ್ಳಿ ಪಬ್ಲಿಕೇಷನ್ ಹೊರತರುತ್ತಿರುವ ಕಾದಂಬರಿಯನ್ನು ವಿಜಯ ಕರ್ನಾಟಕ ಪ್ರಧಾನ ಸಂಪಾದಕ ಸುದರ್ಶನ್ ಚನ್ನಂಗಿಹಳ್ಳಿ ಬಿಡುಗಡೆ ಮಾಡುವರು.
ಹಿರಿಯ ಸಾಹಿತಿ ಜೋಗಿ ಅಧ್ಯಕ್ಷತೆ ವಹಿಸುವರು.
ಸಾಹಿತಿ ವಿದ್ಯಾರಶ್ಮಿ ಪೆಲತ್ತಡ್ಕ ಕೃತಿ ಪರಿಚಯಿಸುವರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು, ಹಿರಿಯ ಪತ್ರಕರ್ತರಾದ ಎಚ್.ಬಿ.ಮದನ್‌ಗೌಡ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಕಾರ್ಯಕ್ರಮದಲ್ಲಿ ಸರ್ವರೂ ಭಾಗವಹಿಸುವಂತೆ ಹಾಡ್ಲಹಳ್ಳಿ ಪ್ರಕಾಶನದ ಪ್ರಸನ್ನಕುಮಾರ್ ಪ್ರಕಟಣೆಯಲ್ಲಿ ಕೋರಿದ್ದಾರೆ.
Comments are closed.