ದೇವನಹಳ್ಳಿ ಚಳುವಳಿನಿರತ ರೈತರ ಬಂಧನ ಖಂಡಿಸಿ ಪ್ರತಿಭಟನೆ

Get real time updates directly on you device, subscribe now.

.

ಕೊಪ್ಪಳ : ದೇವನಹಳ್ಳಿ ಚಳುವಳಿ ನಿರತ ರೈತರ ಬಂಧನ ಖಂಡಿಸಿ ಸಂಯುಕ್ತ ಹೋರಾಟ – ಕರ್ನಾಟಕ ಜಿಲ್ಲಾ ಮಂಡಳಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳಿಂದ ಅಶೋಕ ವೃತ್ತದಲ್ಲಿ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ದ ಘೋಷಣೆ ಕೂಗಿ
ಎಚ್ಚರಿಕೆ ನೀಡಿ ಬಂಧಿತ ರೈತರನ್ನು ಬಿಡುಗಡೆಗೆ ಆಗ್ರಹಿಸಿದರು.

ಕೊಪ್ಪಳ ಜಿಲ್ಲೆಯ ರೈತ ಪರ ಚಳವಳಿಗಾರರು ಮಾತನಾಡಿ ದೇವನಹಳ್ಳಿ ಸೇರಿದಂತೆ 13 ಗ್ರಾಮಗಳಲ್ಲಿನ ರೈತರು ಸರ್ಕಾರದ ಬಲವಂತದ ಭೂ ಸ್ವಾಧೀನ ರೈತ ವಿರೋಧಿ ನೀತಿಗಳನ್ನು ಪ್ರತಿಭಟಿಸಿ, ಸುಮಾರು 1180 ದಿನಗಳಿಂದ, ದೇವನಹಳ್ಳಿಯ ಸಂತೆ ಮೈದಾನದಲ್ಲಿ ಶಾಂತಿಯುತ ಚಳುವಳಿಯನ್ನು ನಡೆಸುತ್ತಿದ್ದರು. ಇಂಥದೊಂದು ದೀರ್ಘಾವಧಿಯ ರೈತ ಚಳುವಳಿ ನಡೆಯುತ್ತಿದ್ದರೂ, ಸರ್ಕಾರ ಮಾತ್ರ ಎನೂ ನಡೆಯುತ್ತಿಲ್ಲವೆಂಬಂತೆ ಜಾಣ ಕುರುಡುತನ ಪ್ರದರ್ಶಿಸಿತು. ಇದು ರೈತರ ತಾಳ್ಮೆಗೆಡಲು ಕಾರಣವಾಯಿತು. ಇದರಿಂದಾಗಿ ರೈತರ ಚಳುವಳಿಯು ತೀವ್ರತೆ ಪಡೆಯಿತು.

ಕೊಪ್ಪಳ ನಗರದಲ್ಲಿ 25. 06. 2025ರಂದು ದೇವನಹಳ್ಳಿಯ ರೈತ ಚಳುವಳಿಗೆ ಬೆಂಬಲಿಸಿದ ವಿವಿಧ ಸಂಘಟನೆಗಳ ಮುಖಂಡರು ಮಾತನಾಡಿ ರಾಜ್ಯದ ವಿವಿಧ ಜಿಲ್ಲೆಗಳ ರೈತರು, ಕಾರ್ಮಿಕರು, ಜನಪರ ಸಂಘಟನೆಗಳ ಕಾರ್ಯಕರ್ತರು ದೇವನಹಳ್ಳಿ ಚಲೋ ಚಳುವಳಿಯ ಭಾಗವಾಗಿ ಅಲ್ಲಿ ಸಾವಿರ ಸಾವಿರ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಪ್ರಾಣ ಬಿಟ್ಟೆವು, ಭೂಮಿ ಬಿಡೆವು ಘೋಷವಾಕ್ಯದಡಿ ಪ್ರತಿಭಟನೆ ನಡೆಸುತ್ತಿದ್ದ ಹೋರಾಟಗಾರರನ್ನು ವಿಸ್ವಾಸಕ್ಕೆ ತೆಗೆದುಕೊಂಡು ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕಬೇಕಾದ ಸರ್ಕಾರ, ರೈತರ ಜೊತೆ ಅಸಭ್ಯವಾಗಿ ವರ್ತಿಸಿದ್ದಲ್ಲದೆ, ಅನಗತ್ಯವಾಗಿ ಬಂಧಿಸಿ ದರ್ಪವನ್ನು ತೋರಿಸಿದೆ. ಸರ್ಕಾರದ ಈ ನಡೆಯನ್ನು ಖಂಡಿಸಿ, ರಾಜ್ಯ ಮಟ್ಟದ ಹೋರಾಟಕ್ಕೆ ಬೆಂಬಲಿಸಿ ಗುರುವಾರ ಕೊಪ್ಪಳದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿದ್ದೇವೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಖಾಸಿಮ್ ಸರ್ದಾರ್. ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಬಸವರಾಜ್ ಶೀಲವಂತರ್. ಜನಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಸ್.ಎ.ಗಫಾರ್.ಮಖಬೂಲ್ ರಾಯಚೂರು.ಶಿವಪ್ಪ ಹಡಪದ್.ಸಿ.ಪಿ.ಐ.ಎಮ್. ತಾಲೂಕಾ ಮುಖಂಡ ಫಕೀರಮ್ಮ ಮಿರಗನತಂಡಿ. ಕಟ್ಟಡ ಕಾರ್ಮಿಕರ ಮುಖಂಡ ಶಕ್ಷಾವಲಿ.ಮಂಜಪ್ಪ.ಟಿ.ಯು.
ಸಿ.ಐ.ರಾಜ್ಯ ಕಾರ್ಯದರ್ಶಿ ಕೆ.ಬಿ.ಗೋನಾಳ. ಕರ್ನಾಟಕ ಮಾದಿಗ ರಕ್ಷಣಾ ವೇದಿಕೆ ಮುಖಂಡ ನಾಗರಾಜ್ ಕಡೆಮನಿ.ಭೀಮಪ್ಪ ಯಲಬುರ್ಗಿ ಮುಂತಾದವರು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!