ದಿನಪತ್ರಿಕೆಗಳ ಸಂಪಾದಕರ ಸಂಘದಿಂದ ಡಿಸಿ, ಸಿಇಒಗೆ ಮನವಿ ಸಲ್ಲಿಕೆ
ವಾರ್ತಾ ಇಲಾಖೆಯ ಮೂಲಕವೇ ಜಾಹೀರಾತು ಬಿಡುಗಡೆಗೆ ಸಂಘ ಮನವಿಕೊಪ್ಪಳ: ಜಿಲ್ಲೆಯ ವಿವಿಧ ಇಲಾಖೆ ಮತ್ತು ಸ್ಥಳೀಯ ಕೆಲ ಗ್ರಾಮ ಪಂಚಾಯಿತಿಗಳ ಪಿಡಿಒಗಳು ಸರ್ಕಾರದ ನಿಯಮ ಉಲ್ಲಂಘಿಸಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಟೆಂಡರ್ ಮತ್ತು ಜಾಹೀರಾತು ಪ್ರಕಟಣೆಗಳನ್ನು ನೇರವಾಗಿ ಜಾಹೀರಾತು ಬಿಡುಗಡೆ ಮಾಡುತ್ತಿವೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮೂಲಕವೇ ಸ್ಥಳೀಯ ದಿನಪತ್ರಿಕೆಗಳಿಗೆ ಜಾಹಿರಾತು ಪ್ರಕಟಣೆ ಹೊರಡಿಸಲು ಆದೇಶ ಮಾಡುವಂತೆ ಒತ್ತಾಯಿಸಿ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಡಿ ಖಲೀಲ್ ಉಡೇವು ಮತ್ತು ಅಧ್ಯಕ್ಷ ಎಂ.ಜೆ. ಶ್ರೀನಿವಾಸ ಅವರ ನೇತೃತ್ವದ ಕೊಪ್ಪಳ ಜಿಲ್ಲಾ ಘಟಕವು ಜಿಲ್ಲಾಧಿಕಾರಿ ಸುರೇಶ ಬಿ. ಇಟ್ನಾಳ್ ಅವರನ್ನು ಒತ್ತಾಯಿಸಿತು.
ಸಂಘದ ರಾಜ್ಯ ಸಮಿತಿ ಉಪಾಧ್ಯಕ್ಷ ಎಚ್.ಎಸ್. ಹರೀಶ್, ರಾಜ್ಯ ಸಮಿತಿ ಸದಸ್ಯ ವಿಶ್ವನಾಥ ಬೆಳಗಲ್‌ಮಠ ಜಿಲ್ಲಾಧ್ಯಕ್ಷ ಶ್ರೀನಿವಾಸ ಎಂ,ಜೆ ಹಾಗೂ ಕಾರ್ಯದರ್ಶಿ ಖಲೀಲ್ ಹುಡೇವ್ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು, ಗುರುವಾರ ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ಅಲ್ಲದೇ ಜಿಲ್ಲಾ ಹಂತದಲ್ಲಿ ಮಾಧ್ಯಮ ಸಮಿತಿ ಅಧ್ಯಕ್ಷರೂ ನೀವೇ ಇರುವ ಕಾರಣ, ಪ್ರತಿ ೨-೩ ತಿಂಗಳಿಗೊಮ್ಮೆ ಸಮಿತಿಯ ಸದಸ್ಯ ಅಧಿಕಾರಿಗಳಾದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ, ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ಮತ್ತು ಸ್ಥಳೀಯ ದಿನಪತ್ರಿಕೆಗಳ ಸಂಪಾದಕರ ಸಂಘದ ಪದಾಧಿಕಾರಿಗಳ ಸಭೆ ಕರೆದು ಕುಂದುಕೊರತೆ ಆಲಿಸಬೇಕು.
ವಿವಿಧ ಇಲಾಖೆಗೆ ಸಂಬಂಧಿಸಿದಂತೆ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಸ್ಥಳಿಯ ದಿನಪತ್ರಿಕೆಗಳಲ್ಲಿ ಬಂದ ವರದಿಗಳನ್ನು ಸಂಬಂಧಿತ ಇಲಾಖೆಗೆ ಕಟಿಂಗ್ ಕಳಿಸಲು ವಾರ್ತಾಧಿಕಾರಿಗೆ ಸೂಚನೆ ನೀಡಬೇಕು ಎಂದು ಸಂಪಾದಕರು ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ ಸುರೇಶ ಇಟ್ನಾಳ್, ಸ್ಥಳೀಯ ದಿನಪತ್ರಿಕೆಗಳ ಸಂಪಾದಕರ ಸಂಘ ಸಲ್ಲಿಸಿದ ಬೇಡಿಕೆಗಳ ಬಗ್ಗೆ ಪರಿಶೀಲಿಸಿ ಸೂಕ್ತಕ್ರಮ ವಹಿಸಲಾಗುವುದು. ಸಂಘದ ಬೇಡಿಕೆಯಂತೆ ಸಂಪಾದಕರ ಸಂಘದ ಪದಾಧಿಕಾರಿಗಳೊಂದಿಗೆ ಶೀಘ್ರ ಸಭೆ ನಡೆಸುವುದಾಗಿ ಭರವಸೆ ನೀಡಿದರು.
ಸರ್ಕಾರದ ವಿವಿಧ ಯೋಜನೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತದೊಂದಿಗೆ ಸ್ಥಳೀಯ ದಿನಪತ್ರಿಕೆಗಳು ಸಂಪರ್ಕ ಸೇತುವೆಯಾಗಿ ಸಹಕಾರ ನೀಡುವಂತೆ ಜಿಲ್ಲಾಧಿಕಾರಿ ಇದೇ ಸಂದರ್ಭದಲ್ಲಿ ಸಂಪಾದಕರಲ್ಲಿ ಮನವಿ ಮಾಡಿದರು.
ಆದೇಶ ಹೊರಡಿಸಲು ಮನವಿ:
ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ವರ್ಣೀತ್ ನೇಗಿ ಅವರನ್ನು ಭೇಟಿಯಾದ ಸಂಪಾದಕರ ಸಂಘದ ಪದಾಧಿಕಾರಿಗಳು, ಕಾಮಗಾರಿಗಳಿಗೆ ಸಂಬಂಧಿಸಿದಂತೆ ಪ್ರಕಟಣೆ, ಟೆಂಡರ್‌ಗಳನ್ನು ಆಯಾ ಇಲಾಖೆಯ ಅಧಿಕಾರಿಗಳು ನೇರವಾಗಿ ಬಿಡುಗಡೆ ಮಾಡದೇ ವಾರ್ತಾ ಇಲಾಖೆಯಿಂದ ಬಿಡುಗಡೆಗೆ ಕ್ರಮ ವಹಿಸಬೇಕು.
ಈ ಸಂಬಂಧ ಜಿಲ್ಲಾ ಪಂಚಾಯಿತಿಯಿಂದ ಸಂಬಂಧಿತ ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ಅಧಿಕೃತ ಆದೇಶ ಹೊರಡಿಸಬೇಕು ಎಂದು ಸಂಪಾದಕರು ಮನವಿ ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ಸಿಇಒ, ಸರ್ಕಾರದ ಆದೇಶ ಉಲ್ಲಂಘಿಸದಂತೆ ಸೂಕ್ತ ಆದೇಶದ ಪ್ರತಿ ಲಗತ್ತಿಸಿ ಆದೇಶಿಸುವುದಾಗಿ ಭರವಸೆ ನೀಡಿದರು.
ಇದಕ್ಕೂ ಮುನ್ನ ಕೊಪ್ಪಳ ಜಿಲ್ಲೆಗೆ ಆಗಮಿಸಿದ ನೂತನ ಜಿಲ್ಲಾಧಿಕಾರಿ ಸುರೇಶ ಇಟ್ನಾಳ್ ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ವರ್ಣಿತ್ ನೇಗಿ ಅವರನ್ನು ಸಂಪಾದಕರ ಸಂಘದ ಪದಾಧಿಕಾರಿಗಳು ಹೂಗುಚ್ಛ ನೀಡಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ದಿನಪತ್ರಿಕೆಗಳ ಸಂಪಾದಕರ ಸಂಘದ ಪದಾಧಿಕಾರಿಗಳಾದ ಬಸವರಾಜ ಗುಡ್ಲಾನೂರು, ಎಸ್.ಎಂ. ಪಟೇಲ್, ಸಂತೋಷ್ ದೇಶಪಾಂಡೆ, ಹನುಮಂತ ಹಳ್ಳಿಕೇರಿ, ವೈ. ನಾಗರಾಜ್, ಹರೀಶ್ ಕುಲಕರ್ಣಿ, ರವಿ ಇತರರಿದ್ದರು.
Comments are closed.