ನಾಳೆಯಿಂದ ಕೊಪ್ಪಳ ಹೋಮ್ ಎಕ್ಸಪೋ
ಕೊಪ್ಪಳ ಕನ್ಸಲಟಿಂಗ್ ಸಿವಿಲ್ ಇಂಜಿನೀಯರ್ಸ್ ಮತ್ತು ಅರ್ಕೀಟೆಕ್ಟ್ ಅಸೋಸಿಯೇಷನ್ ವತಿಯಿಂದ
ಕೊಪ್ಪಳ: ಕೊಪ್ಪಳದಲ್ಲಿ ಪ್ರ ಪ್ರಥಮ ಬಾರಿಗೆ
ಕೊಪ್ಪಳ ಕನ್ಸಲಟಿಂಗ್ ಸಿವಿಲ್ ಇಂಜಿನೀಯರ್ಸ್ ಮತ್ತು ಅರ್ಕೀಟೆಕ್ಟ್ ಅಸೋಸಿಯೇಷನ್ ವತಿಯಿಂದ ನಗರದ ಮಧುಶ್ರೀ ಗಾರ್ಡನ್ಸ್ ಜಿಲ್ಲಾಧಿಕಾರಿಗಳ ಕಚೇರಿ ಹತ್ತಿರ ನಾಳೆ ದಿನಾಂಕ 13, 14 ಹಾಗೂ 15 ಮೂರು ದಿನಗಳ ಕಾಲ “ಕೊಪ್ಪಳ ಹೋಮ್ ಎಕ್ಸಪೋ-2025″ ಎಂಬ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕೊಪ್ಪಳ ಕನ್ಸಲಟಿಂಗ್ ಸಿವಿಲ್ ಇಂಜಿನೀಯರ್ಸ್, ಅರ್ಕೀಟೆಕ್ಟ್ ಅಸೋಸಿಯೇಷನ್ ಅಧ್ಯಕ್ಷ ಹಾಗೂ ಇಂಜಿನಿಯರ್ ಚೆನ್ನಕೇಶವ ಹೇಳಿದರು.
ಅವರು ಬುಧವಾರದಂದು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ಕಾರ್ಯಕ್ರಮದ ಉದ್ಘಾಟನೆಯನ್ನು ಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ನೆರವೇರಿಸುವರು, ಮುಖ್ಯ ಅತಿಥಿಗಳಾಗಿ ಕೆಪಿಸಿಇಎ ಅಧ್ಯಕ್ಷ ಶ್ರೀಕಾಂತ್ ಚೆನ್ನಾಳ ಪಾಲ್ಗೊಳ್ಳುವರು.
ಪ್ರವೇಶ ಉಚಿತವಿದ್ದು ಪ್ರತಿದಿನ 10-30 ರಿಂದ ರಾತ್ರಿ 8 ಗಂಟೆವರೆಗೆ ಇದ್ದು,ಈಗಿನ ತಾಂತ್ರಿಕ ಉಪಕರಣಗಳನ್ನು ಬಳಸಿ ಕಟ್ಟಡ ಉಪಕರಣಗಳನ್ನು ಉಪಯೋಗಿಸುವ ಬಗ್ಗೆ ಪ್ರತಿ ಮಾಹಿತಿ ನೀಡಲಾಗುವುದು ಹಾಗೂ ಸುಮಾರು ಐವತ್ತು ಮಳಿಗೆಗಳನ್ನು ತೆರೆಯಲಾಗುತ್ತದೆ, ಕಾರ್ಯಕ್ರಮದಲ್ಲಿ ಕಟ್ಟಡ ಸಾಮಗ್ರಿಗಳು, ಇಂಟೀರಿಯರ್, ಹೋಂಲೋನ್ಸ್, ಫರ್ನಿಚರ್ಸ್ ಗಳ ವಸ್ತು ಪ್ರದರ್ಶನವಿರುತ್ತದೆ, ಇಂತಹ ವಿಶೇಷ ಕಾರ್ಯಕ್ರಮವನ್ನು ಕೊಪ್ಪಳದಲ್ಲಿ ನಾವುಗಳು ಹಮ್ಮಿಕೊಂಡಿದ್ದು ಹಾಗೂ ಸಾರ್ವಜನಿಕರಿಗೆ ಇದರ ಮಾಹಿತಿ ನೀಡಲು ತುಂಬಾ ಸಂತೋಷ ಅನಿಸುತ್ತದೆ ಈ ಒಂದು ಕಾರ್ಯಕ್ರಮಕ್ಕೆ ತಾವುಗಳು ಆಗಮಿಸಿ ಸಹಕಾರದೊಂದಿಗೆ ನಮಗೆಲ್ಲ ಪ್ರೋತ್ಸಾಹಿಸಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಕೊಪ್ಪಳ ಕನ್ಸಲಟಿಂಗ್ ಸಿವಿಲ್ ಇಂಜಿನೀಯರ್ಸ್, ಅರ್ಕೀಟೆಕ್ಟ್ ಅಸೋಸಿಯೇಷನ್ ಸಲಹೆಗಾರ ಪಂಪಾಪತಿ ಹುಬ್ಬಳ್ಳಿ, ಪ್ರಮೋದ್, ಕಾರ್ಯದರ್ಶಿ ಕಲೀಮ್ ಖಾನ್, ಆನಂದ್ ಖಾಲಿದ್ ಸಿದ್ದೀಕಿ ಮಾಸ್ಟರ್ ಕನ್ಸಲ್ಟಂಟ್ ಉಪಸ್ಥಿತರಿದ್ದರು.
Comments are closed.