ಕಾಂಗ್ರೆಸ್ ಪಕ್ಷದ ಮುಖಂಡ, ಉದ್ಯಮಿ ಕೆ.ಎಂ.ಸೈಯದ್ ಗೆ ಡಾಕ್ಟರೇಟ್ ಪದವಿ ಪ್ರಧಾನ
ಕೊಪ್ಪಳ : ಕೆಪಿಸಿಸಿ ಸಂಯೋಜಕ,ಉದ್ಯಮಿ ಕೆ.ಎಂ.ಸೈಯದ್ ಗೆ ಸಮಾಜ ಸೇವೆಯನ್ನು ಪರಿಗಣಿಸಿ ಏಷ್ಯಾ ಇಂಟರ್ನ್ಯಾಷನಲ್ ಕಲ್ಚರ್ ರಿಸರ್ಚ್ ಯುನಿವರ್ಸಿಟಿ ಅವರು ತಮಿಳುನಾಡಿನ ಹೊಸೂರಿನ ಫಾರ್ಚುನ್ ಹೋಟೆಲ್ ನಲ್ಲಿ ಡಾಕ್ಟರೇಟ್ ಪದವಿಯನ್ನು ಶನಿವಾರದಂದು ಕಾರ್ಯಕ್ರಮದಲ್ಲಿ ಪ್ರಧಾನ ಮಾಡಿದರು.
ಅಮೆರಿಕದ ವಿಜುಡಂ ಪೀಸ್ ಯುನಿವರ್ಸಿಟಿ ಅವಾರ್ಡ್ ಸರಮನಿ ಅಸೋಸಿಯೇಟ್ ಯುತ್ ಏಷ್ಯಾ ಇಂಟರ್ನ್ಯಾಷನಲ್ ಕಲ್ಚರ್ ರಿಸರ್ಚ್ ಯೂನಿವರ್ಸಿಟಿ ವತಿಯಿಂದ ಡಾಕ್ಟರೇಟ್ ಪದವಿಯನ್ನು ನೀಡಲಾಗುತ್ತದೆ.
ಕೆ.ಎಂ.ಸೈಯದ್ ಅವರು ಸೈಯದ್ ಫೌಂಡೇಶನ್ ಮೂಲಕ ರಾಜ್ಯಾದ್ಯಂತ ಅನೇಕ ಸಮಾಜ ಸೇವೆಯನ್ನು ಕೈಗೊಂಡಿದ್ದಾರೆ,ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಅನ್ನದಾತರಿಗೆ ಉಚಿತ ಬೋರ್ ವೆಲ್ ಕೊರಸಿ ರೈತರಿಗೆ, ಬಡವರಿಗೆ, ಹಿಂದುಳಿದವರಿಗೆ ನೀರ್ ಸಾಬ್ ಎಂದೇ ಖ್ಯಾತಿ ಹೊಂದಿದ್ದಾರೆ.
ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾದಾಗ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿ ಸೈಯದ್ ಅವರು ಸೈ ಎನ್ನಿಸಿಕೊಂಡಿದ್ದಾರೆ,
ಪ್ರತಿ ವರ್ಷ ನಡೆಯುವ ಸಾಮೂಹಿಕ ವಿವಾಹದಲ್ಲಿ ಮಾಂಗಲ್ಯ,ಬಟ್ಟೆಯನ್ನು ಕೊಡಿಸುವ ಮೂಲಕ ಜನಮಾನಸದಲ್ಲಿ ಉಳಿದಿದ್ದಾರೆ, ನಾಟಕಗಳು, ಕ್ರಿಕೆಟ್, ಜಾತ್ರೆ, ಉರುಸ್,ಹಬ್ಬ ಹರಿದಿನಗಳಲ್ಲಿ ಬಡವರಿಗೆ ಸಹಾಯ ಮಾಡುವ ಮೂಲಕ ಕೊಡಗೈ ದಾನಿ ಎನಿಸಿಕೊಂಡಿದ್ದಾರೆ.
ಈ ಎಲ್ಲಾ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಲಾಗಿದೆ.
ಡಾಕ್ಟರೇಟ್ ಪದವಿ ಪ್ರಧಾನ ಸಮಾರಂಭದಲ್ಲಿ ತಮಿಳುನಾಡಿನ ಮಾಜಿ ಶಾಸಕ ಮನೋಕರನ್, ನಿವೃತ್ತ ನ್ಯಾಯಾಧೀಶರು, ನಿವೃತ್ತ ಎಸಿಪಿ ಡಾ.ಎಸ್. ಬಿ.ಚಬ್ಬಿ, ನಿವೃತ್ತ ಡಿಸಿಪಿ ಬಿ.ಎಸ್ .ಅಂಗಡಿ, ಡಾ. ಅರುಣ್ ಚಿನ್ನದೊರೈ, ಶ್ರೀ ಸ್ವಾಮಿ ಡಾ.ಎಸ್. ರವಿಚಂದ್ರನ್, ಯುವ ಕಾಂಗ್ರೆಸ್ ಮುಖಂಡ ಡಾ.ದೊಡ್ಡಪ್ಪ ಪೂಜಾರ್,ಡಾ. ಗುಣಶೇಖರನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Comments are closed.