ದ್ವೇಷ ಭಾಷಣದ ಬಗ್ಗೆ ಸುಪ್ರೀಂಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿದ್ದರೂ, ಯಾಕೆ ಜಿಲ್ಲೆಗಳಲ್ಲಿ ದ್ವೇಷ ಭಾಷಣದ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ?- CM

ಮೇ 30 ಮತ್ತು 31ರ ಎರಡು ದಿನಗಳ ಕಾಲ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ 18 ಗಂಟೆಗಳ DC, CEO ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಸಭೆಯ ಕೊನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ ಸೂಚನೆಗಳು…
• ಜಿಲ್ಲೆಯ ಅಭಿವೃದ್ಧಿ ಕಾರ್ಯ, ಸರ್ಕಾರದ ಯೋಜನೆಗಳ ಸಮರ್ಪಕ ಅನುಷ್ಠಾನ ಡಿಸಿ, ಎಸ್ಪಿ, ಸಿಇಒಗಳ ಜವಾಬ್ದಾರಿ. ಮೂರೂ ಅಧಿಕಾರಿಗಳು ಸಮನ್ವಯದಿಂದ ಯಾವುದೇ ಇಗೋ ಇಲ್ಲದೆ ಕಾರ್ಯನಿರ್ವಹಿಸಬೇಕು. ಜಿಲ್ಲಾ ಉಸ್ತುವಾರಿ ಮಂತ್ರಿ, ಕಾರ್ಯದರ್ಶಿಗಳೊಂದಿಗೆ ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸಿ.
• ನಾವು ಏನು ಬದಲಾವಣೆ ತರುತ್ತೇವೆ ಎಂದು ಹೇಳಿ ಅಧಿಕಾರಕ್ಕೆ ಬಂದಿದ್ದೇವೆಯೋ ಅದನ್ನು ಜಾರಿಗೊಳಿಸುವುದು ನಿಮ್ಮ ಹೊಣೆ. ನಿಮ್ಮ ಹೆಜ್ಜೆ ಗುರುತು ಜಿಲ್ಲೆಯಲ್ಲಿ ಮೂಡುವಂತಹ ಕಾರ್ಯವನ್ನು ನೀವು ಮಾಡಬೇಕು. ಬಾಬಾ ಸಾಹೇಬ್ ಅವರು ಹೇಳಿದ ಹಾಗೆ ಸ್ವಾತಂತ್ರ್ಯ ಬಂದಿರುವುದು ಸಾರ್ಥಕವಾಗುವುದು ಎಲ್ಲರಿಗೂ ಆರ್ಥಿಕ ಮತ್ತು ಸಾಮಾಜಿಕ ಶಕ್ತಿ ಬಂದಾಗ ಮಾತ್ರ, ಇದನ್ನು ಸಾಧ್ಯವಾಗಿಸಬೇಕಾದುದು ನಿಮ್ಮ ಕರ್ತವ್ಯ.
• ಪ್ರಣಾಳಿಕೆಯಲ್ಲಿನ ನಮ್ಮ 533 ಭರವಸೆಗಳ ಪೈಕಿ 242 ಭರವಸೆಗಳನ್ನು ನಾವು ಈಗಾಗಲೇ ಈಡೇರಿಸಿದ್ದೇವೆ. ಇದರ ಸಮರ್ಪಕ ಅನುಷ್ಠಾನ ನಿಮ್ಮೆಲ್ಲರ ಹೊಣೆಗಾರಿಕೆ.
• ಅಸ್ಪಷ್ಯತೆ ಇನ್ನೂ ಹಲವು ಭಾಗಗಳಲ್ಲಿ ಜೀವಂತವಾಗಿದೆ; ಇದೇ ರೀತಿ ಬಾಲ್ಯ ವಿವಾಹದಂತಹ ಪಿಡುಗುಗಳನ್ನು ಸಂಪೂರ್ಣವಾಗಿ ನಿಯಂತ್ರಿಸಬೇಕು.
• ಜಿಲ್ಲಾಧಿಕಾರಿಗಳು ಜನಸಾಮಾನ್ಯರ ಬಗ್ಗೆ ಕೇವಲ ಸಿಂಪಥಿ (sympathy)ಯಲ್ಲ, ಬಗ್ಗೆ ಎಂಪಥಿ(Empathy) ಬೆಳೆಸಿಕೊಳ್ಳಬೇಕು.
• ಪತ್ರಿಕೆಗಳಲ್ಲಿ ಬರುವ ಟೀಕೆಗಳು, ವರದಿಗಳಿಗೆ ತಕ್ಷಣ ಸ್ಪಂದಿಸಬೇಕು. ಇದರಿಂದ ಜನಸಾಮಾನ್ಯರ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ.
• ನೀವು ಸರ್ಕಾರ ಮತ್ತು ಜನಸಾಮಾನ್ಯರಿಗೆ ಸೇತುವೆಯಾಗಿ ಕಾರ್ಯನಿರ್ವಹಿಸಬೇಕು.
• ತಂತ್ರಜ್ಞಾನ ಜನಸಾಮಾನ್ಯರ ಗರಿಷ್ಠ ಹಿತಕ್ಕೆ ಬಳಕೆಯಾಗುವಂತೆ ನೋಡಿಕೊಳ್ಳಬೇಕು.
Comments are closed.