ಕೊಟ್ಟ ಗಡುವು ಮುಗಿಯಿತು ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರ:ಕೆ.ಪ್ರಭಾಕರ್
ಕೊಪ್ಪಳ : ಪೌರ ನೌಕರರ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರಾಜ್ಯ ಸರ್ಕಾರಕ್ಕೆ ನೀಡಿದ 45 ದಿನಗಳ ಗಡುವು ಈಗ ಮುಗಿದಿದೆ, ರಾಜ್ಯಾದ್ಯಂತ ಮೇ 27 ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು ರಾಜ್ಯ ಪೌರ ನೌಕರರ ಸಂಘದ ಅಧ್ಯಕ್ಷ ಕೆ.ಪ್ರಭಾಕರ್ ತಿಳಿಸಿದರು.
ಅ
ವರುಸೋಮವಾರದಂದು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ಮುಷ್ಕರಕ್ಕೆ ಕನ್ನಡ ಪರ ಸಂಘಟನೆಗಳು, ದಲಿತ ಪರ ಸಂಘಟನೆಗಳು, ಎಸ್ಸಿಎಸ್ಟಿ ನೌಕರರ ಸಂಘ,ವಿವಿಧ ಸಂಘಟನೆಗಳು ಬೆಂಬಲಿಸಲಿದ್ದು ಈ ಮುಷ್ಕರದಲ್ಲಿ ಕುಡಿಯುವ ನೀರು ಸರಬರಾಜು ಐದು ದಿನದವರೆಗೆ ಇದ್ದು, ಎಲ್ಲಾ ಕಾರ್ಯಗಳು ಸ್ಥಗಿತಗೊಳ್ಳುವವು ಎಂದು ತಿಳಿಸಿದ ಅವರು ಈಗ ನಮ್ಮ ತಾಳ್ಮೆ ಕಟ್ಟೆ ಹೊಡೆದಿದೆ, ದಲಿತರಿಗೆ ಅನ್ಯಾಯ ಮಾಡುತ್ತಿದ್ದು, ಇಂದು ಮೇ 27ರಂದು ಬೀದರನಲ್ಲಿ ಪೌರಾಡಳಿತ ಸಚಿವ ರಹೀಮ್ ಖಾನ್ ಅವರಿಗೆ ಘೇರಾವ್ ಹಾಕಲಾಗುವುದು,
ಪೌರ ನೌಕರರನ್ನು ಗುತ್ತಿಗೆ ಪದ್ಧತಿಯಿಂದ ಮುಕ್ತಗೊಳಿಸಿ, ಸರ್ಕಾರಿ ನೌಕರರೆಂದು ಘೋಷಿಸಿ, ಹೊರಗುತ್ತಿಗೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರ ನೌಕರರನ್ನು ಸರ್ಕಾರಿ ನೌಕರರೆಂದು ಘೋಷಿಸಿ ಅವರಿಗೆ ಕೆಜಿಐಡಿ, ಜಿಪಿಎಫ್, ಜ್ಯೋತಿ ಸಂಜೀವಿನಿ ಹಾಗೂ ಸು.25 ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ವಾಟರ್ ಮ್ಯಾನ್, ಕಂಪ್ಯೂಟರ್ ಆಪರೇಟರ್, ವಾಹನ ಚಾಲಕರು, ಬೀದಿ ದೀಪ ನಿರ್ವಹಣೆ ಕಾರ್ಮಿಕರು ಸೇರಿದಂತೆ ಇನ್ನಿತರ ಪೌರ ನೌಕರರನ್ನು ಗುತ್ತಿಗೆ ಪದ್ಧತಿಯಿಂದ ಮುಕ್ತಿಗೊಳಿಸಿ ಕಾಯಂಗೊಳಿಸಬೇಕು, ರಾಜ್ಯದಲ್ಲಿರುವ ಎಲ್ಲ ಮಹಾನಗರ ಪಾಲಿಕೆ, ಪುರಸಭೆ ಹಾಗೂ ನಗರಸಭೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರನ್ನು ಖಾಯಂಗೊಳಿಸಿ ರಾಜ್ಯ ಸರ್ಕಾರಿ ನೌಕರರಿಗೆ ದೊರಕುವ ಎಲ್ಲಾ ಸೌಲಭ್ಯಗಳನ್ನು ಒದಗಿಸುವದು ಸೇರಿದಂತೆ ಕಳೆದ 45 ದಿನಗಳಲ್ಲಿ ಬೇರೆ ಬೇರೆ ಹಂತದ ಹೋರಾಟಗಳು ಮುಗಿದಿದ್ದು ಇಂದಿನಿಂದ ಅನಿರ್ದಿಷ್ಟಾಧಿ ಪ್ರಾರಂಭವಾಗುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕೊಪ್ಪಳ ಜಿಲ್ಲಾ ಪೌರ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ದುರ್ಗಪ್ಪ ಕಂದಾರಿ, ಶಾಖಾ ಅಧ್ಯಕ್ಷ ಮೈಲಪ್ಪ ಕಾರಟಗಿ, ಕಾರ್ಯದರ್ಶಿ ಭೀಮಣ್ಣ, ಸಹ ಕಾರ್ಯದರ್ಶಿ ಯಮನೂರಪ್ಪ ಮಂಗಳಪುರ, ಸದಸ್ಯ ದೇವರಾಜ್ ಕಿನ್ನಾಳ ಉಪಸ್ಥಿತರಿದ್ದರು.
Comments are closed.