ರಡ್ಡಿ ಯಾವ ಪ್ರವರ್ಗದಲ್ಲಿ ಬರೆಯಿಸುವ ಕುರಿತು ಶೀಘ್ರ ತೀರ್ಮಾನ – ವೇಮಾನಂದ ಶ್ರೀಗಳು

ಕೊಪ್ಪಳ
ರಡ್ಡಿ, ರೆಡ್ಡಿ ಸೇರಿದಂತೆ ಎಲ್ಲ ಒಳಪಂಗಡಗಳನ್ನು ಒಂದೆ ಪ್ರಗರ್ಗದಲ್ಲಿ ಬರೆಯಿಸುವ ಕುರಿತು ಹಾಗೂ ಕೇಂದ್ರದಲ್ಲಿ ಓಬಿಸಿ ಪಟ್ಟಿಯಲ್ಲಿ ರಡ್ಡಿ ಸಮಾಜ ಸೇರಿಸುವ ಕುರಿತು ಶೀಘ್ರದಲ್ಲಿಯೇ ಒಮ್ಮತದ ನಿರ್ಧಾರ ಮಾಡಲಾಗುವುದು ಎಂದು ಹರಿಹರ ತಾಲೂಕು ಯರೆಹೊಸಳ್ಳಿ ಹೇಮ-ವೇಮ ಸದ್ಭಾವನ ಗುರುಪೀಠ ಶ್ರೀವೇಮಾನಂದ ಹೇಳಿದ್ದಾರೆ.
ಕೊಪ್ಪಳ ನಗರದ ಕಿನ್ನಾಳ ರಸ್ತೆಯಲ್ಲಿರುವ ಶ್ರೀ ಶಿವಶರಣೇ ಹೇಮರಡ್ಡಿಮಲ್ಲಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಶ್ರೀಗಳು, ಸಮಾಜದವರೊಂದಿಗೆ ಈ ಕುರಿತು ಸುಮಾರು ಹೊತ್ತು ಚರ್ಚೆ ನಡೆಸಿದರು.
ರಡ್ಡಿ ಸಮಾಜದಲ್ಲಿ ಸಾಕಷ್ಟು ಒಳಪಂಗಡುಗಳು ಇವೆ. ಅಷ್ಟೇ ಅಲ್ಲಾ, ರಾಜಕೀಯವಾಗಿಯೂ ಸಾಕಷ್ಟ ವ್ಯತ್ಯಾಸಗಳು ಇವೆ. ಹೀಗಾಗಿ, ಈ ಕುರಿತು ಶೀಘ್ರದಲ್ಲಿಯೇ ರಾಜ್ಯಮಟ್ಟದಲ್ಲಿ ಸಭೆ ಕರೆದು ತೀರ್ಮಾನ ಮಾಡಲಾಗುವುದು.
ಕೇಂದ್ರ ಸರ್ಕಾರ ಜನಗಣತಿ ಮತ್ತು ಜಾತಿ ಗಣತಿಯನ್ನು ಮಾಡಲು ಮುಂದಾಗಿರುವುದರಿಂದ ಅಷ್ಟರೊಳಗಾಗಿ ಈ ಕುರಿತು ಸ್ಪಷ್ಟ ನಿರ್ಧಾರಕ್ಕೆ ಬರಬೇಕಾಗಿದೆ.
ಹಿಂದು ರಡ್ಡಿ, ಲಿಂಗಾಯತ ರಡ್ಡಿ ಹಾಗೂ ವೀರಶೈವ ಲಿಂಗಾಯತ ರಡ್ಡಿ ಎನ್ನುವುದರಲ್ಲಿ ಯಾವುದನ್ನು ಬರೆಯಿಸಬೇಕು ಎನ್ನುವುದೇ ಈಗ ಇರುವ ಸವಾಲು. ಈ ಕುರಿತು ಬೇರೆ ಬೇರೆ ಅಭಿಪ್ರಾಯಗಳು ಸಹ ಇವೆ. ಹೀಗಾಗಿ, ಸ್ಪಷ್ಟ ನಿರ್ಧಾರಕ್ಕೆ ಬರಲು ರಾಜ್ಯಮಟ್ಟದಲ್ಲಿ ಸಭೆ ಕರೆದು, ಚರ್ಚಿಸಿ, ಸೂಕ್ತವಾಗಿರುವುದನ್ನು ಮತ್ತು ರಾಜಕೀಯವಾಗಿ ಹಾಗೂ ಸರ್ಕಾರದಿಂದಲೂ ಉತ್ತಮ ಯಾವುದು ಎನ್ನುವುದನ್ನು ಆಧರಿಸಿ ತೀರ್ಮಾನ ಮಾಡಬೇಕಾಗುತ್ತದೆ . ಹೀಗಾಗಿ, ಶೀಘ್ರದಲ್ಲಿಯೇ ಈ ಕುರಿತು ಜಿಲ್ಲಾಮಟ್ಟದಲ್ಲಿ, ತಾಲೂಕು ಮಟ್ಟದಲ್ಲಿ ಸಭೆ ನಡೆಸಿ, ನಂತರ ರಾಜ್ಯಮಟ್ಟದ ಸಭೆ ನಡೆಸಬೇಕಾಗಿದೆ ಎಂದರು.
ಇದಲ್ಲದೆ ಕೇಂದ್ರ ಸರ್ಕಾರದಿಂದಲೂ ನಮಗೆ ಅನ್ಯಾಯವಾಗುತ್ತಿದೆ. ರಡ್ಡಿ ಸಮಾಜ ಕೇಂದ್ರದ ಓಬಿಸಿ ಪಟ್ಟಿಯಲ್ಲಿಯೂ ಇಲ್ಲ. ಇದನ್ನು ಮಾಡುವ ದಿಸೆಯಲ್ಲಿಯೂ ಪ್ರಯತ್ನ ಪ್ರಾರಂಭ ಮಾಡಿ, ರಾಜ್ಯ ಸರ್ಕಾರಕ್ಕೆ ಪ್ರಸ್ಥಾವನೆ ಕಳುಹಿಸಿ, ರಾಜ್ಯ ಸರ್ಕಾರದ ಮೂಲಕ ಕೇಂದ್ರಕ್ಕೆ ಪ್ರಸ್ಥಾವನೆಯನ್ನು ಕಳುಹಿಸುವ ಅಗತ್ಯವಿದೆ ಎಂದು ನೆರೆದಿದ್ದವರು ಸಲಹೆ ನೀಡಿದರು.
ರಡ್ಡಿ ಸಮಾಜದ ಜಿಲ್ಲಾಧ್ಯಕ್ಷ ಜಗದೀಶಪ್ಪ ಸಿಂಗನಾಳ, ತಾಲೂಕು ಅಧ್ಯಕ್ಷ ಪ್ರಭು ಹೆಬ್ಬಾಳ, ಸಮಾಜದ ಹಿರಿಯರಾದ ಹನುಮರಡ್ಡಿ ಹಂಗನಕಟ್ಟಿ, ಸುರೇಶ ಭೂಮರಡ್ಡಿ, ಶಂಕರಗೌಡ್ರ ಹಿರೇಗೌಡ್ರ, ಅಮರೇಶ ಪಾಟೀಲ್, ಆರ್. ಪಿ. ರಡ್ಡಿ, ಮಹಾಲಿಂಗಪ್ಪ ಅರಿಕೇರಿ, ದೇವಪ್ಪ ಅರಿಕೇರಿ, ಎಸ್. ಕೆ. ಒಕ್ಕಳದ, ಎಂ.ಎಸ್. ದಾದಮಿ, ಕಾಶಿನಾಥರಡ್ಡಿ, ಹೇಮರಡ್ಡಿ ಕೆಂಚರಡ್ಡಿ, ಸಂಗಮೇಶ ಡಂಬಳ, ಚಂದ್ರು ಪಾಟೀಲ್, ಲಿಂಗಾರಡ್ಡಿ ಕರಮುಡಿ ಪ್ರಭು ಬಬ್ಲಿ ಸೇರಿದಂತೆ ಮೊದಲಾದವರು ಇದ್ದರು.
ಸುಭಾಶರಡ್ಡಿ ಕಿನ್ನಾಳ ಅವರು ಕಾರ್ಯಕ್ರಮ ನಿರೂಪಿಸಿದರು.
ಕೊಪ್ಪಳ ತಾಲೂಕು ಮಟ್ಟದಲ್ಲಿ ಧೀರಜ್ ದ್ವಾರಕೀಶ ಮುಂಡರಗಿ ಎಸ್ ಎಸ್ ಎಲ್ಸಿಯಲ್ಲಿ ಶೇ. 98.81 ಅಂಕ ಹಾಗೂ
ಅಪೂರ್ವ ಶ್ರೀಪತಿ ಹಳ್ಳಿಕೇರಿ ಪಿಯುಸಿಯಲ್ಲಿ ಶೇ 98.83 ಅಂಕ ಪಡೆದಿರುವುದಕ್ಕೆ ಸುರೇಶ ಭೂಮರಡ್ಡಿ ಅವರು ತಲಾ ಹತ್ತು ಸಾವಿರ ರುಪಾಯಿ ನೀಡಿ, ಶ್ರೀಗಳಿಂದ ಗೌರವಿಸಲಾಯಿತು.
26ಕೆಪಿಎಲ್23 ಕೊಪ್ಪಳ ನಗರದ ಶ್ರೀ ಶಿವಶರಣೇಹೇಮರಡ್ಡಿ ಮಲ್ಲಮ್ಮ ದೇವಸ್ಥಾನಕ್ಕೆ ಶ್ರೀ ವೇಮಾನಂದ ಸ್ವಾಮೀಜಿಗಳು ಭೇಟಿ ನೀಡಿ, ಸಮಾಜ ಬಾಂಧವರ ಜೊತೆಯಲ್ಲಿ ಚರ್ಚೆ ನಡೆಸಿದರು.
Comments are closed.