ಶ್ರೀ ಗವಿಮಠದಲ್ಲಿ ಅಕ್ಷರಾಭ್ಯಾಸ ಕಾರ್ಯಕ್ರಮ



ಕೊಪ್ಪಳ: ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಸಂಸ್ಥಾನ ಶ್ರೀ ಗವಿಮಠದಲ್ಲಿ ದಿನಾಂಕ: ೨೩ ಶುಕ್ರವಾರದಂದು ಬೆಳಿಗ್ಗೆ ೦೯:೦೦ ರಿಂದ ೧:೩೦ರವರೆಗೆ ಪೂಜ್ಯ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ “ಅಕ್ಷರಾಭ್ಯಾಸ” ಕಾರ್ಯಕ್ರಮ ಜರುಗಿತು. ತಮ್ಮ ಮಕ್ಕಳಿಗೆ ಹೊಸದಾಗಿ ಶಾಲೆಯ ಪ್ರವೇಶ ಪಡೆಯಲಿಚ್ಚಿಸುವ ಸಾವಿರಾರು ಭಕ್ತಾಧಿಗಳು ಆಗಮಿಸಿ ಶ್ರೀ ಗವಿಸಿದ್ಧೇಶ್ವರನ ಸಾನಿಧ್ಯದಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಪ್ರಾರಂಭ ಮಾಡಿಸುವುದರ ಮೂಲಕ ಅವರ ಉಜ್ವಲ ಹಾಗೂ ಸಂಸ್ಕಾರಯುತ ಜೀವನಕ್ಕಾಗಿ ಶ್ರೀ ಗವಿಸಿದ್ಧೇಶ್ವರನಲ್ಲಿ ಪ್ರಾರ್ಥಿಸಿದರು.
ಪಾಲಕರು ಬರುವಾಗ ಭಕ್ತಿ ಮತ್ತು ಆನಂದದಿAದ ತಮ್ಮ ಮಕ್ಕಳೊಂದಿಗೆ ಹೊಸ ನೋಟ್ಬುಕ್, ಪೆನ್ ಅಥವಾ ಹೊಸ ಪಾಟಿ, ಪೆನ್ಸಿಲ್ ತಂದು, ಶಾಂತಿಯುತವಾಗಿ ಸಾಲಾಗಿ ನಿಂತು ಪರಮಪೂಜ್ಯರ ಸಾನಿಧ್ಯದಲ್ಲಿ ಮಕ್ಕಳ ಅಕ್ಷರ ಅಭ್ಯಾಸ ಮಾಡಿಸಿದರು. ನಂತರ ಪ್ರಸಾದ ಸ್ವೀಕರಿಸಿ ಶ್ರೀ ಗವಿಸಿದ್ಧೇಶ್ವರರ ಕೃಪೆಗೆ ಪಾತ್ರರಾದರು ಎಂದು ಶ್ರೀ ಗವಿಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Comments are closed.