ಬಿಜೆಪಿಯ ತಪ್ಪು ನಿರ್ಧಾರಗಳೇ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಕಾರಣ-ಸಿವಿಸಿ

Get real time updates directly on you device, subscribe now.

ಪಕ್ಷ ಟಿಕೇಟ್ ನೀಡಿದರೆ ಲೋಕಸಭೆಗೆ ಸ್ಪರ್ಧಿಸುವೆ  

ರಾಜಕೀಯದಲ್ಲಿ ಯಾರೂ ಮಿತ್ರರಲ್ಲ- ಯಾರೂ ಶತ್ರುಗಳಲ್ಲ-ಸಿವಿಸಿ

ಕೊಪ್ಪಳ :  ಚುನಾವಣಾ ಸಂದರ್ಭದಲ್ಲಿ ಬಿಜೆಪಿ ತೆಗೆದುಕೊಂಡ ತಪ್ಪು ನಿರ್ಣಯಗಳಿಂದ ಕಾಂಗ್ರೆಸ್ ಪಕ್ಷ ಇಷ್ಟೊಂದು ದೊಡ್ಡ ಬಹುಮತ ಪಡೆಯಲು ಸಾಧ್ಯವಾಯಿತು.  ಜೆಡಿಎಸ್ ಪಕ್ಷ ಕನಿಷ್ಠ ೬೦ ಸ್ಥಾನಗಳಲ್ಲಿ ಗೆಲ್ಲುವ ಸಾಧ್ಯತೆ ಇತ್ತು ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿ ಮಾತನಾಡಿದ ಅವರು

ಜೆಡಿಎಸ್ ಪಕ್ಷವು ಸೂಚನೆ ನೀಡಿದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದಿಂದ ಸ್ಪರ್ಧೆ ಮಾಡುಲು ನಾನು ಸದಾ ಸಿದ್ಧನಾಗಿದ್ದೇನೆ ಎಂದು ಜೆಡಿಎಸ್ ಮುಖಂಡ ಸಿ.ವಿ.ಚಂದ್ರಶೇಖರ್ ಹೇಳಿದರು.

೩ ದಿನಗಳ ಹಿಂದೆ ಕೋರ್ ಕಮಿಟಿಯ ಸಭೆ ನಡೆದಿದೆ. ಹಲವಾರು ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ವಿಭಾಗವಾರು ಪ್ರವಾಸ, ಸಭೆ ಮತ್ತು ಜಿಲ್ಲಾ ಗ್ರಾಮೀಣ ಮಟ್ಟದಲ್ಲಿ ಸದೃಡಗೊಳಿಸುವ ನಿಟ್ಟಿನಲ್ಲಿ ಕಾರ್ಯಸೂಚಿ ಹಾಕಿಕೊಳ್ಳಲಾಗಿದೆ. ಎಲ್ಲ ವಿಭಾಗಗಳನ್ನು ಪದಾಧಿಕಾರಿ ಬದಲಾವಣೆ ಮಾಡಿ ಜವಾಬ್ದಾರಿ ಹಂಚುವ ಕೆಲಸ ಮಾಡಲಾಗುತ್ತಿದೆ‌  ಕಾಂಗ್ರೆಸ್ ಸರಕಾರ ಆಂತರೀಕ ಸಮಸ್ಯೆಗಳಲ್ಲಿ ತೊಡಗಿಕೊಂಡಿದೆ. ಮಳೆ ಕೊರತೆಯಿಂದ ಬರಗಾಲ ಛಾಯೆ ಆವರಿಸಿದೆ. ಸರಕಾರ ವರ್ಗಾವಣೆಯಲ್ಲಿ ಮುಳುಗಿ ಸಾಕಷ್ಟು ಭ್ರಷ್ಟಾಚಾರ ದಲ್ಲಿ ತೊಡಗಿಕೊಂಡಿದೆ. ಅದರ ವಿರುದ್ದ ಹೋರಾಟ ಮಾಡಿ ಮುಂಬರುವ ತಾಲೂಕು ಹಾಗೂ ಜಿಲ್ಲಾ ಪಂಚಾಯತ ಚುನಾವಣೆ ಹಾಗೂ ಲೋಕಸಭಾ ಚುನಾವಣೆಗೆ ಸಿದ್ದರಾಗಬೇಕಿದೆ. ಕಾಂಗ್ರೆಸ್ ಸರಕಾರ ಜನರ ಪರವಾಗಿ ಕೆಲಾ ಮಾಡುತ್ತಿಲ್ಲ. ಉಚಿತ ವಿದ್ಯುತ್ ಒಂದೆಡೆಯಾದರೆ ವಿದ್ಯುತ್ ದರ ಏರಿಕೆಯಾಗಿದೆ. ಎಸ್ಸಿಪಿ ಟಿಎಸ್ಪಿ ಯೋಜನೆಯ ಅನುಧಾನ ಬಳಸುವುದಲ್ಲಿ ಜನವಿರೋಧಿ ಕೆಲಸಗಳಲ್ಲಿ ತೊಡಗಿಕೊಂಡಿದೆ.

ಬಿಜೆಪಿ ಸರಕಾರದ ತಪ್ಪು ನಿರ್ದಾರಗಳು ಹಾಗೂ ನಿರ್ಣಯಗಳ ಆದಾರದ ಮೇಲೆ ಕಾಂಗ್ರೆಸ್ ೧೩೬ ಸ್ಥಾನ ಬಂದಿವೆ. ಆದರೆ ಅವರಲ್ಲಿ ಆಂತರಿಕ ಬೇಗುದಿ ಗೊತ್ತಾಗುತ್ತಿದೆ. ಆ ಪಕ್ಷದಲಗಲಿ ಆಂತರಿಕ ಸಮಸ್ಯೆ ಇದೆ. ಇಬ್ಬರ ಜಗಳದಲ್ಲಿ ರಾಜ್ಯ ಸೊರಗುತ್ತಿದೆ. ರಾಜ್ಯಕ್ಕೆ ಬೇಕಾಗಿರುವುದು ವಿದ್ಯುತ್ ಉತ್ಪಾದನೆ ಕೆಡಿಮೆಯಾಗುತ್ತಿದೆ. ಸರಕಾರ ವಿಫಲವಾಗಿದೆ.
: ಕೊಪ್ಪಳದ ಶಾಸಕ ಮೂರುಬಾರಿ ಶಾಸಕರಾಗಿದ್ದಾರೆ ಅವರು ಆಗಿದ್ದು ಅದೃಷ್ಟದಿಂದ. ನಿನ್ನೆ ಹಿರಿಯ ನಾಯಕರೊಬ್ಬರು ರಕ್ತದಲ್ಲಿ ಬರೆದುಕೊಡುತ್ತೇನೆ. ಪಕ್ಷ ಬಿಟ್ಟು ಹೋಗುವುದಿಲ್ಲ ಎನ್ನುವವರಿಂದ ಗೆದ್ದುಬಂದಿದ್ದಾರೆ. ಸನ್ಮಾನ್ಯರು ಲೋಕಸಭಾ ಸದಸ್ಯರಾಗಿದ್ದು ಕೇವಲ ೩೫ ಸಾವಿರ ಮತಗಳಿಂದ. ಸೋತರೂ ಪರವಾಗಿಲ್ಲ ಬ್ಲಾಕಮೇಲ್ ಮಾಡಿ ಸಮಾಜವನ್ನು ಬಲಿಕೊಟ್ಟು ಸ್ವಾರ್ಥಕ್ಕೊಸ್ಕರ ರಾಜಕಾರಣ ಮಾಡಿ ಆ ರಾಜಕೀಯ ವ್ಯವಸ್ಥೆ ಯಿಂದ ಕಾಂಗ್ರೆಸ್ ೩ನೇ ಬಾರಿ ಶಾಸಕರಾಗಿದ್ದಾರೆ.  ಗ್ರಾಮೀಣ ಭಾಗದಲ್ಲಿ ಸರಿಯಾದ ರಸ್ತೆಗಳಿಲ್ಲ‌ ಮಕ್ಕಳು ವಿದ್ಯಾಭ್ಯಾಸ ಕುಂಠಿತವಾಗುತ್ತಿದೆ.
ಯಾವ ಕಾರ್ಯಕರ್ತರೂ ಎದೆಗುಂದಬೇಕಿಲ್ಲ. ನಾನು ಸದಾ ನಿಮ್ಮೊಂದಿಗಿರುತ್ತೇನೆ. ನಮ್ಮ ಪಕ್ಷದ ಕಾರ್ಯಕರ್ತರು ಪಕ್ಷಕ್ಕೆ ಹಗಲಿರಳು ದುಡಿಯುತ್ತಿದ್ದಾರೆ. ಕುಮಾರಸ್ವಾಮಿ ಅವರು ಯಾವಾಗಲೂ ರೈತಪರವಾದ ಧ್ವನಿಯನ್ನೇ ಶಾಸನ ಸಭೆಯಲ್ಲೆತ್ತಾರೆ. ಈ ಹಿಂದೆ ರೈತರ ಸಾಲ ಮನ್ನಾ ಮಾಡಿದ್ದು ಕುಮಾರಸ್ವಾಮಿಯವರು.  2018 ಹಾಗೂ 2023ರ ವಿಧಾನಸಭಾ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರಕ್ಕೆ ಸನ್ಮಾನ್ಯರು ಬ್ಲ್ಯಾಕ್‌ ಮೇಲ್ ಮಾಡಿಕೊಂಡು ತಮ್ಮ ಕುಟುಂಬ ಸದಸ್ಯರಿಗೆ ಟಿಕೆಟ್‌ ಪಡೆದುಕೊಂಡರು. ಮುಂದಿನ ಚುನಾವಣೆಯಲ್ಲಿಯೂ ಹಳೆಯ ತಂತ್ರ ಪ್ರಯೋಗಿಸುತ್ತಾರೆ. ಚುನಾವಣೆಗಳು ಇನ್ನೇನು ಆಗಮಿಸುವವು ಎನ್ನುವ ಸಮಯದಲ್ಲಿ ಟಿಕೆಟ್ ಸಲುವಾಗಿ ಬ್ಲಾಕ್‌ ಮೇಲ್ ತಂತ್ರಗಾರಿಕೆ ರೂಪಿಸುವವರಿಗೇ ಹೆಚ್ಚು ಬಿಜೆಪಿ ಟಿಕೇಟ್ ನೀಡುತ್ತದೆ, ಹೀಗಾಗಿ ಈ ಬಾರಿ ಸಹ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ನೀಡಬಹುದೇನೋ ಎಂದರು. ಸನ್ಮಾನ್ಯರು ಸೋಮವಾರ ಬಿಜೆಪಿ ಬಿಟ್ಟು ಎಲ್ಲಿಗೂ ಹೋಗುವುದಿಲ್ಲ. ಬೇಕಾದರೆ ರಕ್ತದಲ್ಲಿ ಬರೆದು ಕೊಡುವೆ ಎಂದು ಹೇಳುವುದು ಒಂದು ಮಾಡುವುದೇ ಬೇರೆ , ಸನ್ಮಾನ್ಯರು ಟಿಕೆಟ್ ಸಲುವಾಗಿ ಬ್ಲ್ಯಾಕ್‌ ಮೇಲ್ ಮಾಡಿದಾಗ ಬಿಜೆಪಿ ರಾಜ್ಯದಲ್ಲಿ ಪ್ರಬಲವಾಗಿತ್ತು. ಆಗಲೇ  ಬ್ಲಾಕ್‌ ಮೇಲ್ ತಂತ್ರಕ್ಕೆ ಪಕ್ಷ ಮಣಿದಿದೆ. ಚುನಾವಣೆ ಬಳಿಕ ಬಿಜೆಪಿ ದುರ್ಬಲವಾಗಿದ್ದು, ಈಗಲೂ ಅವರ ಮಾತಿಗೆ ಮಣೆ ಹಾಕಿದರೆ ಅಚ್ಚರಿಯೇನಿಲ್ಲ. ಕೊಪ್ಪಳ ಕ್ಷೇತ್ರದಲ್ಲಿ ಸಂಸದರ  ತಂತ್ರದಿಂದಾಗಿ ಕಾಂಗ್ರೆಸ್‌ ಪಕ್ಷದ ರಾಘವೇಂದ್ರ ಹಿಟ್ನಾಳ ಸತತ ಮೂರನೇ ಬಾರಿಗೆ ಶಾಸಕರಾದರು ಎಂದು ಹೇಳಿದರು. ಬಿಜೆಪಿ ಸ್ವಯಂಕೃತ ತಪ್ಪಿನಿಂದಾಗಿ ಚುನಾವಣೆಯಲ್ಲಿ ಮುಖಭಂಗ ಅನುಭವಿಸುವಂತೆ ಆಯಿತು. ಇದು ಕಾಂಗ್ರೆಸ್ ಪಕ್ಷಕ್ಕೆ ವರದಾನವಾಯಿತು.  ನಮ್ಮ ಜೆಡಿಎಸ್ ಪಕ್ಷದ ಕಾರ್ಯಕರ್ತರು ಎದೆಗುಂದಬಾರದು ನಾವು ಯಾವತ್ತೂ ಜೊತೆಗಿದ್ದೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ವೀರೇಶ್ ಮಹಾಂತಯ್ಯನಮಠ, ಮುಖಂಡರಾದ ಮೂರ್ತೆಪ್ಪ ಗಿಣಿಗೇರಿ ಹಿಟ್ನಾಳ, ಸಾಧಿಕ್ ಅತ್ತಾರ, ಮೆಹಮೂದ್ ಹುಸೇನಿ, ಡಾ.ಗೋವಿನಕೊಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಕೋರ್ ಕಮಿಟಿಗೆ ನೇಮಕ  :

ಸದ್ಯ ರಾಜ್ಯದಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡುತ್ತಿದ್ದು, ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಚಂದ್ರಶೇಖರ್ ಬಿಜೆಪಿ ತೊರೆದು ಜೆಡಿಎಸ್ ನಿಂದ ಕೊಪ್ಪಳ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು. ಸಿವಿಸಿ ಅವರನ್ನು ಜೆಡಿಎಸ್ ಕೋ‌ರ್ ಕಮಿಟಿ ಸದಸ್ಯರನ್ನಾಗಿ ನೇಮಿಸಲಾಗಿದ್ದು, ಪಕ್ಷದ ಅನೇಕ ಮುಖಂಡರು, ಕಾರ್ಯಕರ್ತರು ಸೇರಿದಂತೆ ಇತರೆ ಅಭಿಮಾನಿಗಳು ಅಭಿನಂದಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!