ಮಣಿಪುರ: ಕ್ರೈಸ್ತರ ಮಾರಣ ಹೋಮ. ಚರ್ಚಗಳನ್ನು ಧ್ವಂಸ ಖಂಡಿಸಿ ಬೃಹತ್ ಪ್ರತಿಭಟನಾ ಮೆರವಣಿಗೆ

Get real time updates directly on you device, subscribe now.

ಕೊಪ್ಪಳ: .ಮಣಿಪುರ ರಾಜ್ಯದಲ್ಲಿ ನಡೆಯುತ್ತಿರುವ ಕ್ರೈಸ್ತರ ಮೇಲೆ ಹಿಂಸಾಚಾರ ಹಾಗೂ ಮಾರಣ ಹೋಮ ಮತ್ತು ಚರ್ಚಗಳನ್ನು ಧ್ವಂಸ ಮಾಡಿದ್ದು ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ಉಪ ವಿಭಾಗಾಧಿಕಾರಿಗಳ ಕಚೇರಿಯ ತಹಶೀಲ್ದಾರ್ ರಜನಿಕಾಂತ್ ಕೆಂಗೇರಿ ಅವರ ಮೂಲಕ ಅಖಿಲ ಭಾರತ ಕ್ರೈಸ್ತ ಮಹಾಸಭಾ (ರಿ) ಜಿಲ್ಲಾ ಹಾಗೂ ತಾಲೂಕಾ ಘಟಕದಿಂದ ರಾಷ್ಟ್ರಪತಿಗಳಿಗೆ ಮನವಿ ಅರ್ಪಿಸಿದರು.
      ಮನವಿಯಲ್ಲಿ ಸುಮಾರು ಮುನ್ನೂರಕ್ಕಿಂತ ಹೆಚ್ಚು ಜನ ಕ್ರೈಸ್ತರನ್ನು ಹತ್ಯೆ ಮಾಡಿ. ಸುಮಾರು 250 ಕ್ಕೂ ಹೆಚ್ಚು ಚರ್ಚುಗಳನ್ನು ಧ್ವಂಸ ಮಾಡಲಾಗಿದೆ. ಅಲ್ಲದೆ ಮಹಿಳೆಯರ ಮೇಲೆ ಹೀನಾಯ ಕೃತ್ಯ ಎಸಗಿದ್ದಲ್ಲದೇ ದೌರ್ಜನ್ಯ ಮಾಡಲಾಗಿದೆ. ಸಾವಿರಾರು ಜನರು ತೀವ್ರ ಸ್ವರೂಪದ ಗಾಯಗೊಂಡಿರುತ್ತಾರೆ. ಸಾವಿರಾರು ಜನ ಆಸ್ತಿಪಾಸ್ತಿಗಳನ್ನು ಕಳೆದುಕೊಂಡಿರುತ್ತಾರೆ. ಇದರಿಂದ ಕ್ರೈಸ್ತ ಸಮುದಾಯದವರಾದ ನಮಗೆ  ತುಂಬಾ ನೋವು ಉಂಟಾಗಿರುತ್ತದೆ. ಮಣಿಪುರ ರಾಜ್ಯದಲ್ಲಿ ಈ ರೀತಿಯಾದ ಹಿಂಸಾಚಾರಕ್ಕೆ ಕಾರಣವಾದವರ ಮೇಲೆ ಸೂಕ್ತ ಕ್ರಮ ಜರುಗಿಸಿ. ಶಾಂತಿ ಸೌಹಾರ್ದತೆಯನ್ನು ಕಾಪಾಡಬೇಂದು ಈಗಿರುವ ಆಡಳಿತಾರೂಢ ಸರ್ಕಾರ ಈ ವಿಷಯದಲ್ಲಿ ಪ್ರಮುಖ ಪಾತ್ರವಹಿಸಿ ಜನರ ಮಾರಣ ಹೋಮವನ್ನು ತಡೆದು. ಸಂತ್ರಸ್ತರಿಗೆ ಸೂಕ್ತವಾದ ಪರಿಹಾರವನ್ನು ಶೀಘ್ರವಾಗಿ ನೀಡಬೇಕು. ಸರ್ಕಾರ
ಶಾಂತಿ.ಸೌಹಾರ್ದತೆ ಮತ್ತು ಸಹಜತೆಯನ್ನು ತಕ್ಷಣವೇ ಮರುಸ್ಥಾಪನೆಗಾಗಿ ರಾಜ್ಯದ ಪ್ರತಿಯೊಂದು ಭಾಗದಲ್ಲೂ ಹಿಂಸಾಚಾರವನ್ನು ನಿಯಂತ್ರಿಸಲು ದೃಢವಾದ ಮತ್ತು ನಿರಂತರ ಪ್ರಯತ್ನಗಳನ್ನು ಮಾಡಬೇಕು.
ಕೇಂದ್ರ ಸರ್ಕಾರವು ಎಲ್ಲಾ ದುಷ್ಕರ್ಮಿಗಳ ಗುಂಪುಗಳನ್ನು ಕಾನೂನಿನ ಅಡಿಯಲ್ಲಿ ನಿಯಂತ್ರಿಸಲು ಮತ್ತು ಸೀಮಿತಗೊಳಿಸಲು ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕು.
ಶಸ್ತ್ರಸಜ್ಜಿತವಾದ ದುಷ್ಕರ್ಮಿಗಳ ಗುಂಪುಗಳು ಒಳನುಗ್ಗಿ ಶಾಂತಿ ಕದಡದಂತೆ ಎರಡೂ ಸಮುದಾಯಗಳ ತಪ್ಪಲಿನಲ್ಲಿರುವ ಗ್ರಾಮಗಳಿಗೆ ಸೂಕ್ತ ಭದ್ರತೆ ಒದಗಿಸಬೇಕು.
ಕೇಂದ್ರ ಸರ್ಕಾರವು ಎಲ್ಲಾ ಸ್ಥಳಾಂತರಗೊಂಡ ವ್ಯಕ್ತಿಗಳಿಗೆ ಅವರ ಮೂಲ ಸ್ಥಳದಲ್ಲಿ ಅಥವಾ ಸೂಕ್ತ ಭದ್ರತಾ ವ್ಯವಸ್ಥೆಗಳೊಂದಿಗೆ ಸುರಕ್ಷಿತ ಪ್ರದೇಶಗಳಲ್ಲಿ ಪುನರ್ವಸತಿಗಾಗಿ ಕ್ರಮಗಳನ್ನು ತೆಗೆದುಕೊಳ್ಳಬೇಕು. ಎಲ್ಲಾ ಬಲಿಪಶುವಾದ ಮತ್ತು ಬಾಧಿತರಿಗೆ ಸೂಕ್ತ ನ್ಯಾಯ ದೊರಕಿಸಿಕೊಡಬೇಕು. ಹಲವು ಸಂಖ್ಯೆಯಲ್ಲಿ ನಾಪತ್ತೆಯಾದವರ ಪತ್ತೆಗೆ ವಿಶೇಷ ಅಭಿಯಾನ ಕೈಗೊಳ್ಳಬೇಕು.ಹೆಚ್ಚಿನ ಸಂಖ್ಯೆಯ ಮಕ್ಕಳು ಪರಿಹಾರ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ ಮತ್ತು ಸ್ಥಳಾಂತರಗೊಂಡ ಕುಟುಂಬಗಳ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ವಿಶೇಷ ವ್ಯವಸ್ಥೆ ಮಾಡಬೇಕು. ರಾಷ್ಟ್ರೀಯ ಹೆದ್ದಾರಿಗಳು ಮತ್ತು ಜಿಲ್ಲಾ ಕೇಂದ್ರಗಳ ಮೂಲಕ ಸರಕು ಮತ್ತು ಅಗತ್ಯ ವಸ್ತುಗಳ ಸಾಗಾಣೆಗೆ ಅಡ್ಡಿಯಾಗುವುದನ್ನು ನಿಲ್ಲಿಸಬೇಕು. ರಾಜ್ಯ ಸರ್ಕಾರವು ಎಲ್ಲಾ ಪರಿಹಾರ ಶಿಬಿರಗಳ ನಿರ್ವಹಣೆಯನ್ನು ತಕ್ಷಣವೇ ವಹಿಸಿಕೊಳ್ಳಬೇಕು ಮತ್ತು ಎಲ್ಲರಿಗೂ ಸರಿಯಾದ ಆರೋಗ್ಯ ಮತ್ತು ನೈರ್ಮಲ್ಯ ಸೌಲಭ್ಯಗಳನ್ನು ಒದಗಿಸಬೇಕು. ಮಣಿಪುರ ರಾಜ್ಯಕ್ಕೆ ಸಂಬಂಧಿಸಿದ ಅಸ್ತಿತ್ವದಲ್ಲಿರುವ ಸಾಂವಿಧಾನಿಕ ನಿಬಂಧನೆಗಳ ಅಕ್ಷರ ಮತ್ತು ಆತ್ಮವನ್ನು ರಕ್ಷಿಸಬೇಕು ಮತ್ತು ಸಮನ್ವಯ ಮತ್ತು ಸಂವಾದದ ಮೂಲಕ ಸಮುದಾಯಗಳ ನಡುವಿನ ನಂಬಿಕೆಯನ್ನು ಪುನಃ ಸ್ಥಾಪಿಸಬೇಕು.ಸೇವೆಯಲ್ಲಿರುವ ಅಥವಾ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತ್ರತ್ವದಲ್ಲಿ ಉನ್ನತ ಮಟ್ಟದ ತನಿಖಾ ಆಯೋಗವನ್ನು ರಚಿಸಬೇಕು. ಕೇಂದ್ರ ಸರ್ಕಾರವು ನಮ್ಮ ಮನವಿಯನ್ನು ಆಲಿಸಿ ತಕ್ಷಣ ಕ್ರೈಸ್ತ ಸಮುದಾಯದವರ ಭಾವನೆಗಳನ್ನು ಅರ್ಥಮಾಡಿಕೊಂಡು ಕ್ರೈಸ್ತ ಸಮುದಾಯವನ್ನು ಹಿಂಸಿಸುವಂತಹ ದುಷ್ಕರ್ಮಿಗಳಿಗೆ ಶೀಘ್ರವಾಗಿ ಕಾನೂನು ಮೂಲಕ ತಕ್ಕ ಶೀಕ್ಷೆ ನೀಡಬೇಕೆಂದು ಒತ್ತಾಯಿಸಿದರು.
      ಹೋರಾಟಕ್ಕೆ ಬೆಂಬಲಿಸಿ ಭಾಗವಹಿಸಿದ್ದ ಬಂಡಾಯ ಸಾಹಿತಿ ಹಾಗೂ ಹಿರಿಯ ಹೋರಾಟಗಾರ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ ಕುಕ್ಕಿ ಮತ್ತು ಮೆತೇಯಿ ಎನ್ನುವಂತಹ ಎರಡು ಜನಾಂಗಗಳ ಮಧ್ಯದಲ್ಲಿ ಕಲಹ ಹಚ್ಚಿ ತಮ್ಮ ಬೆಳೆಯನ್ನು ಬೆಳೆಸಿಕೊಳ್ಳತಕ್ಕಂತಹ ಕೆಲಸವನ್ನು ಬಿಜೆಪಿ ಮಾಡುತ್ತಾ ಇದೆ ಅಂತ ನಾವು ಧೈರ್ಯದಿಂದ ಹೇಳಬೇಕು. ಧೈರ್ಯದಿಂದ ಹೇಳದೆ ಹೋದರೆ ಅವರು ತಿದ್ದಿಕೊಳ್ಳಲು ಸಾಧ್ಯವಿಲ್ಲ. ಈ ದೇಶದಲ್ಲಿ ಶಿಕ್ಷಕರಿಗೆ. ಮಹಿಳೆಯರಿಗೆ. ರೈತರಿಗೆ. ದುಡಿಯುವ ಜನರಿಗೆ ಬಹಳ ಗೌರವವಿದೆ ಅಂತ ಹೇಳ್ತಾ ಇದ್ದಾರೆ ಹೊರತು ನಿಜವಾದಂತಹ ಗೌರವ ಇಲ್ಲ. ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡತಕ್ಕಂತಹ ದೇಶದಲ್ಲಿ ನಾವಿದ್ದೇವಲ್ಲ ಅಂತ ನಮಗೆ ನಾಚಿಕೆಯಾಗುತ್ತದೆ. ಇದು ಸಂಸ್ಕೃತಿನಾ ? ಇದು ಸಭ್ಯತೆಯಾ ? ಈ ಪ್ರಶ್ನೆಗಳನ್ನು ಆಳುವ ಪಕ್ಷ. ಸರ್ಕಾರ ಗಳಿಗಲ್ಲದೆ ಮತ್ತ್ಯಾರಿಗೆ ಕೇಳಬೇಕು ? ಎಂದು ಪ್ರಶ್ನಿಸಿದರು.
    ಪ್ರತಿಭಟನಾ ಮೆರವಣಿಗೆ ನಗರದ ಹಳೆ ಜಿಲ್ಲಾ ಆಸ್ಪತ್ರೆ ಬಳಿಯ ಚರ್ಚ್ ಹತ್ತಿರದಿಂದ ಪ್ರಾರಂಭಗೊಂಡು ಅಶೋಕ ವೃತ್ತ ಬಳಸಿಕೊಂಡು ಬಸವೇಶ್ವರ ವೃತ್ತ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಮನವಿ ಸಲ್ಲಿಸಿದ ಸಂದರ್ಭದಲ್ಲಿ  ಅಖಿಲ ಭಾರತ ಕ್ರೈಸ್ತ ಮಹಾಸಭಾದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಫಾದರ್ ಸೂಲೋಮನ್ ರಾಜ್. ಫಾದರ್ ಜೆ. ರವಿಕುಮಾರ್. ಫಾದರ್ ಚಾರ್ಲ್ಸ್. ಫಾದರ್ ಬಸವರಾಜ್. ಫಾದರ್ ದೇವೇಂದ್ರ ನಾಯಕ್. ಫಾದರ್ ನತಾನಿಲ್. ಅಧ್ಯಕ್ಷ ಶ್ಯಾಮ್ ಸುಂದರ್ ಹುಣಸಿ ಮರದ. ಜಿಲ್ಲಾ ಉಪಾಧ್ಯಕ್ಷ ಫಾದರ್ ಡಿ.ಆರ್. ಪೀಟರ್. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಫಾದರ್ ಚನ್ನಬಸಪ್ಪ ಜಾಲಿಹಾಳ. ಗಂಗಾವತಿ ತಾಲೂಕ ಅಧ್ಯಕ್ಷ ಡೇವಿಡ್. ಕೊಪ್ಪಳ ತಾಲೂಕ ಅಧ್ಯಕ್ಷ ಪ್ರಕಾಶ್. ತುಕಾರಾಂ ಪಾಟ್ರೋಟಿ. ಸತೀಶ್ ಬಿಸರಳ್ಳಿ. ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ರೋಸ್ ಮೇರಿ. ಆನಂದ್. ಎಲಿಷ್. ತಿಮ್ಮಣ್ಣ. ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡ ಬಸವರಾಜ್ ಶೀಲವಂತರ್. ಮಹಾಂತೇಶ್ ಕೋತಬಾಳ. ಶಿವಪ್ಪ ಹಡಪದ್. ಭ್ರಾತೃತ್ವ ಸಮಿತಿಯ ಜಿಲ್ಲಾ ಸಂಚಾಲಕ ಎಸ್.ಎ.ಗಫಾರ್. ಆನಂದ್ ಭಂಡಾರಿ.ಗೌಸ್ ನೀಲಿ ಮುಂತಾದವರು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: