ಅಭಿವೃದ್ಧಿ ವಿಷಯದಲ್ಲಿ ರಾಜಕಾರಣ ಬಿಟ್ಟು ಒಗ್ಗೂಡಬೇಕು -ಶಾಸಕ ಹಿಟ್ನಾಳ
ಕೊಪ್ಪಳ : ಇಂದು ಕೊಪ್ಪಳದ ಶಾಸಕ ಕೆ ರಾಘವೇಂದ್ರ ಹಿಟ್ನಾಳ ಅವರು ಲೇಬಗೇರಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಮಾದನೂರು,ನರೇಗಲ್, ಹುಚ್ಚೇಶ್ವರ ಕ್ಯಾಂಪ್,ಯತ್ನಟ್ಟಿ, ಓಜನಹಳ್ಳಿ, ಚಿಲವಾಡಗಿ,ದೇವಲಾಪುರ, ಕಲಿಕೇರಿ, ಹಟ್ಟಿ, ಟನಕಣಕಲ್ ಹಾಗೂ ಹನುಮನಹಳ್ಳಿ ಗ್ರಾಮಗಳಲ್ಲಿ ಜನಸಂಪರ್ಕ ಹಾಗೂ ಅಭಿನಂದನ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ನಂತರ ಮಾತನಾಡಿದ ಶಾಸಕ ಕೆ ರಾಘವೇಂದ್ರ ಹಿಟ್ನಾಳ ಅಭಿವೃದ್ಧಿ ವಿಷಯದಲ್ಲಿ ಯಾರು ಕೂಡ ರಾಜಕಾರಣ ಮಾಡಬಾರದು ಎಲ್ಲಾರೂ ಒಗ್ಗುಡಿದಾಗ ಮಾತ್ರ ಸಮಗ್ರ ಅಭಿವೃದ್ಧಿ ಸಾಧ್ಯ.
ಅಭಿವೃದ್ಧಿ ವಿಷಯದಲ್ಲಿ ರಾಜಕಾರಣ ಮಾಡದೇ ಸಂಬಂಧಿಸಿದ ಅಧಿಕಾರಿಗಳು,ಗುತ್ತಿಗೆದಾರರಿಂದ ಸಮರ್ಪಕ ಕೆಲಸ ಪಡೆಯುವ ನಿಟ್ಟಿನಲ್ಲಿ ಗ್ರಾಮಸ್ಥರು,ಗ್ರಾಮದ ಜನಪ್ರತಿನಿಧಿಗಳು ಒಗ್ಗೂಡಬೇಕು ಎಂದರು.
ಕ್ಷೇತ್ರದ ಪ್ರತಿ ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಿ ಗ್ರಾಮಗಳಲ್ಲಿ ಇನ್ನೂ ಆಗಬೇಕಿರುವ ಅಭಿವೃದ್ಧಿ ಕೆಲಸಗಳಿಗೆ ಹಂತ ಹಂತವಾಗಿ ಅನುಧಾನವನ್ನು ಮಂಜೂರು ಮಾಡಿ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಎಲ್ಲಾರು ಕಂಕಣಬದ್ಧರಾಗಿ ಕೆಲಸ ಮಾಡೋಣ ಎಂದು ತಿಳಿಸಿದರು.
1000 ಬೆಡ್ಡಿನ ಆಸ್ಪತ್ರೆಯಾಗಿ ಮೇಲ್ದರ್ಜೆ :
* ಅಭಿವೃದ್ಧಿ ವಿಷಯದಲ್ಲಿ ರಾಜಕಾರಣ ಬಿಟ್ಟು ಒಗ್ಗೂಡಬೇಕು
—–ಶಾಸಕ ಕೆ ರಾಘವೇಂದ್ರ ಹಿಟ್ನಾಳ
ಕೊಪ್ಪಳ : ಇಂದು ಕೊಪ್ಪಳದ ಶಾಸಕರಾದ ಕೆ ರಾಘವೇಂದ್ರ ಹಿಟ್ನಾಳ ಅವರು ಲೇಬಗೇರಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಮಾದನೂರು,ನರೇಗಲ್, ಹುಚ್ಚೇಶ್ವರ ಕ್ಯಾಂಪ್,ಯತ್ನಟ್ಟಿ, ಓಜನಹಳ್ಳಿ, ಚಿಲವಾಡಗಿ,ದೇವಲಾಪುರ ಗ್ರಾಮಗಳಲ್ಲಿ ಜನಸಂಪರ್ಕ ಹಾಗೂ ಅಭಿನಂದನ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ನಂತರ ಮಾತನಾಡಿದ ಶಾಸಕ ಕೆ ರಾಘವೇಂದ್ರ ಹಿಟ್ನಾಳ ಅಭಿವೃದ್ಧಿ ವಿಷಯದಲ್ಲಿ ಯಾರು ಕೂಡ ರಾಜಕಾರಣ ಮಾಡಬಾರದು ಎಲ್ಲಾರೂ ಒಗ್ಗುಡಿದಾಗ ಮಾತ್ರ ಸಮಗ್ರ ಅಭಿವೃದ್ಧಿ ಸಾಧ್ಯ.
ಅಭಿವೃದ್ಧಿ ವಿಷಯದಲ್ಲಿ ರಾಜಕಾರಣ ಮಾಡದೇ ಸಂಬಂಧಿಸಿದ ಅಧಿಕಾರಿಗಳು,ಗುತ್ತಿಗೆದಾರರಿಂದ ಸಮರ್ಪಕ ಕೆಲಸ ಪಡೆಯುವ ನಿಟ್ಟಿನಲ್ಲಿ ಗ್ರಾಮಸ್ಥರು,ಗ್ರಾಮದ ಜನಪ್ರತಿನಿಧಿಗಳು ಒಗ್ಗೂಡಬೇಕು.ಕ್ಷೇತ್ರದ ಪ್ರತಿ ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಿ ಗ್ರಾಮಗಳಲ್ಲಿ ಇನ್ನೂ ಆಗಬೇಕಿರುವ ಅಭಿವೃದ್ಧಿ ಕೆಲಸಗಳಿಗೆ ಹಂತ ಹಂತವಾಗಿ ಅನುಧಾನವನ್ನು ಮಂಜೂರು ಮಾಡಿ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಎಲ್ಲಾರು ಕಂಕಣಬದ್ಧರಾಗಿ ಕೆಲಸ ಮಾಡೋಣ ಎಂದು ತಿಳಿಸಿದರು.
1000 ಬೆಡ್ಡಿನ ಆಸ್ಪತ್ರೆಯಾಗಿ ಮೇಲ್ದರ್ಜೆ :
ಕೊಪ್ಪಳ ನಗರದ ಮೆಡಿಕಲ್ ಕಾಲೇಜ್ ಪಕ್ಕದಲ್ಲಿ ನಿರ್ಮಾಣ ಆಗುತ್ತಿರುವ 450 ಬೆಡ್ಡಿನ ಆಸ್ಪತ್ರೆಯನ್ನ ಮುಂದೆ 1000 ಬೆಡ್ಡಿನ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವ ಗುರಿಯನ್ನ ಹೊಂದಿ ಯೋಜನೆಯನ್ನು ರೂಪಿಸಲಾಗಿದೆ. ಈ ಕುರಿತು ಮುಖ್ಯಮಂತ್ರಿಗಳನ್ನು ಬಜೆಟ್ ಮಂಡೆನೆಗೂ ಮುನ್ನ ಸಿದ್ದರಾಮಯ್ಯ ಅವರನ್ನು ಭೇಟಿ ಆಗಿ ಕಿಮ್ಸ್ ಆಸ್ಪತ್ರೆಗೆ ಅನುಧಾನ ನೀಡುವಂತೆ ಮನವಿ ಮಾಡಿದ್ದೆ ನನ್ನ ಮನವಿಗೆ ಸಕರಾತ್ಮಕವಾಗಿ ಸ್ಪಂದಿಸಿದ್ದ ಮುಖ್ಯಮಂತ್ರಿಗಳು 67 ಕೋಟಿ ಅನುಧಾನವನ್ನು ಬಜೆಟ್ ನಲ್ಲಿ ಘೋಷಣೆ ಮಾಡಿದ್ದರು.ಮಾನ್ಯ ಮುಖ್ಯಮಂತ್ರಿಗಳು ಸಹ ಈ ಯೋಜನೆಗೆ ತುಂಬಾ ಆಸಕ್ತಿ ತೋರಿಸಿದ್ದು ಬಾಕಿ ಉಳಿದಿರುವ ಕಾಮಗಾರಿಯನ್ನು ಮುಗಿಸಿ ಶ್ರೀ ಸಿದ್ದರಾಮಯ್ಯ ಅವರ ಕೈಯಲ್ಲಿಯೇ ಲೋಕಾರ್ಪಣೆ ಮಾಡಿಸುವ ಗುರಿಯನ್ನ ಹೊಂದಿದ್ದೇವೆ ಎಂದು ಭರವಸೆ ವ್ಯಕ್ತಪಡಿಸಿದರು.
ದೆಹಲಿಯ ಏಮ್ಸ್ ಆಸ್ಪತ್ರೆಯ ಮಾದರಿಯಲ್ಲಿ ಈ ಆಸ್ಪತ್ರೆಯನ್ನ ನಿರ್ಮಾಣ ಮಾಡಲಾಗುತ್ತಿದೆ.ಈ ಆಸ್ಪತ್ರೆಯಿಂದ ಸುತ್ತು-ಮುತ್ತ ನಾಲ್ಕೈದು ಜಿಲ್ಲೆಗಳ ಜನರಿಗೆ ನೆರವಾಗಲಿದೆ. Kidney transolant (ಮೂತ್ರಪಿಂಡ ಕಸಿ ), Heart transplant (ಹೃದಯ ಕಸಿ ), eyes hospital (ಕಣ್ಣಿನ ಆಸ್ಪತ್ರೆ, ಮೊಣಕಾಲು ಚಿಪ್ ಬದಲಾವಣೆ ಮಾಡುವುದು ಸೇರಿದಂತೆ ಇನ್ನಿತರ ಎಲ್ಲಾ ಚಿಕಿತ್ಸೆಗಳು ಈ ಆಸ್ಪತ್ರೆಯಲ್ಲಿ ಸಿಗಲಿವೆ.
ಈ ಸಂಧರ್ಭದಲ್ಲಿ ಜಿ. ಪಂ ಮಾಜಿ ಸದಸ್ಯರಾದ ಪ್ರಸನ್ನ ಗಡಾದ,ರಾಮಣ್ಣ ಚೌಡ್ಕಿ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೃಷ್ಣರೆಡ್ಡಿ, ತಹಸೀಲ್ದಾರ್ ವಿಠ್ಠಲ್ ಚೌಗಲೇ, ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದುಂಡೇಶ್ ತುರಾದಿ, ಕಾಂಗ್ರೆಸ್ ಮುಖಂಡರಾದ ದೇವಪ್ಪ ಓಜನಳ್ಳಿ,ಮುಕ್ಕಣ್ಣ ಚಿಲವಾಡಗಿ,ವರಪುತ್ರಪ್ಪ ರಮೇಶ ಓಜನಹಳ್ಳಿ,ರಮೇಶ ಚಿಲವಾಡಗಿ ಹನಮಂತ ಅವನ್ನಿ,ಪ್ರಶಾಂತ ಮಾದನೂರು, ಬಸಣ್ಣ ಮೇಟಿ, ಉಡಚಪ್ಪ ಟಣಕನಕಲ್ ನಗರಸಭೆಯ ಸದಸ್ಯ ಜಿಲ್ಲಾ ವಕ್ತಾರ ಅಕ್ಬರ್ ಪಲ್ಟಾನ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Comments are closed.