ಮುಂಬಯಿ ಸಾಹಿತ್ಯ ಸಮ್ಮೇಳನದಲ್ಲಿಸಾಹಿತಿ ಮಕಾನದಾರ ಅವರ ಬದುಕು ಬರಹ ಕೃತಿ ಜನಾರ್ಪಣೆ

Get real time updates directly on you device, subscribe now.

ಗದಗ :26. ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಬೆಂಗಳೂರು ಕೇಂದ್ರ ಸಮಿತಿ ಹಾಸನ.
ರಾಜ್ಯ ಘಟಕ ಮುಂಬಾಯಿ ಇವರ ಸಂಯುಕ್ತ ಆಶ್ರಯದಲ್ಲಿ ಅಖಿಲ ಭಾರತ ಪ್ರಥಮ ಕೇಂದ್ರ ಕನ್ನಡ ಸಾಹಿತ್ಯ ಸಮ್ಮೇಳನ ದಿ 27ರ ಬೆಳಿಗ್ಗೆ ಮುಂಬಯಿ ಯಲ್ಲಿ ಜರುಗಲಿದೆ

ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಹಲವು ಮಹತ್ವದ ಕೃತಿಗಳು ಜನಾರ್ಪಣೆಗೊಳ್ಳಲಿದ್ದು, ಕುವೆಂಪು ವಿ ವಿ ಇತಿಹಾಸ ವಿಭಾಗದ ಡಾ.ಹಸೀನಾ ಎಚ್. ಕೆ
ಮತ್ತು ಕೊಪ್ಪಳದ ಹಿರಿಯ ಸಾಹಿತಿ ವಿಮರ್ಶಕ, ಶಿಕ್ಷಕರಾದ ರಾಮಣ್ಣ ಅಲ್ಮರ್ಸಿಕೇರಿಯವರ ಸಂಪಾದನೆಯಲ್ಲಿ ಪ್ರಕಟಗೊಂಡ ಹಿರಿಯ ಸಾಹಿತಿ ಎ.ಎಸ್. ಮಕಾನದಾರ ಅವರ ಬದುಕು ಬರಹ ಕುರಿತ “‘ಬೊಗಸೆಯೊಳಗಿನ ದರ್ದ್ “ಮತ್ತು ಈಗಾಗಲೇ
ಮಕಾನದಾರ ಅವರ ಮಹತ್ವದ
ದ್ವಿ ಪದಿ, ಫರ್ದಗಳುಳ್ಳ ಜನಪ್ರಿಯತೆ ಪಡೆದ “ಪ್ಯಾರಿ ಪದ್ಯ “ಸಂಕಲನ ಹಲವು ಭಾಷೆಗಳಿಗೆ ಅನುವಾದ ಗೊಂಡಿದ್ದು,ಕೊಂಕಣಿ, ದೇವನಾಗರ ಲಿಪಿ ಮತ್ತು ರೋಮನ್ ಭಾಷೆಗಳ ತ್ರಿಭಾಷಾ ಸಂಕಲನ “ಪ್ಯಾರಿ ಪದಂ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರನ ಶಿಕ್ಷಕಿ, ಅನುವಾದಕಿ, ಕವಯತ್ರಿ ಫ್ಲಾವಿಯಾ ಆಲ್ಬಕರ್ಕ್ಅವರ ಅನುವಾದಿತ ಸಂಕಲನ ಜೊತೆಗೆ ವಿಶ್ವೇಶ್ವರ
ಎನ್.ಮೇಟಿಹಳ್ಳಿ ಯವರ ಹಳ್ಳಿಯ ಎಂಬ ಹಳ್ಳಿ, ತೋಳನೂರು ಒಂದು ಸಂಸ್ಕೃತಿಕ ಅಧ್ಯಯನ, ಕವಯತ್ರಿ ಶಿವಲೀಲಾ ಶಂಕರ್ ಅವರ ಬೇಲಿ ಯಾಚಿನ ಪಿಸುಮಾತು ಕವನ ಸಂಕಲನ ಗಳನ್ನು ಖ್ಯಾತ ಪತ್ರಕರ್ತ, ವಿಮರ್ಶಕ ಶ್ರೀನಿವಾಸ್ ಜೋಕಟ್ಟಿ ಯವರು ಜನಾರ್ಪಣೆಗೊಳಿಸುವರು

ಖ್ಯಾತ ಸಾಹಿತಿ ವೈದ್ಯೆ ಡಾ ಎಚ್ ಎಸ್ ಅನುಪಮಾ ಅವರು ಸಮ್ಮೇಳನ ಉದ್ಘಾಟನೆ ಗೊಳಿಸುವರು

ಡಾ. ಪಿ ನಾರಾಯಣ ದಿವಾಕರ್, ನಾಗರಾಜ್ ದೊಡ್ಡಮನಿ, ವಾಸು ಸಮುದ್ರವಳ್ಳಿ, ದೇಸು ಆಲೂರ್ ಮುಂತಾದವರು ಸಮ್ಮೇಳನದ ಸರ್ವಾಧ್ಯಕ್ಷ ಡಾ. ಜಿ ಎನ್. ಉಪಾಧ್ಯಅವರಿಗೆ ಗೌರವ ಸಮರ್ಪಿಸುವರು
ಇದೇ ಸಂದರ್ಭದಲ್ಲಿ ವಿಚಾರ ಸಂಕಿರಣ ಕವಿಗೋಷ್ಠಿ, ಸಾಧಕರಿಗೆ ಸನ್ಮಾನ ಕೊಡ ಜರುಗಲಿದೆ
ಸಮ್ಮೇಳನದಲ್ಲಿ ಭಾಗ ವಹಿಸಿ ಯಶಸ್ವಿ ಗಾಗಿ ಸಹಕರಿಸಲು ಅಧ್ಯಕ್ಷಕೊಟ್ರೇಶ್ ಉಪ್ಪಾರ ವಿನಂತಿಸಿಕೊಂಡಿದ್ದಾರೆ

Get real time updates directly on you device, subscribe now.

Comments are closed.

error: Content is protected !!