ಕಲಬುರಗಿ ಜಿಲ್ಲಾಧಿಕಾರಿಗಳಿಗೆ ಸನ್ಮಾನ
ಕೊಪ್ಪಳ: ಕಲಬುರಗಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಗಳಾಗಿ ನೇಮಕವಾದ ಪೌಜೀಯಾ ತರನ್ನುಮ ಅವರನ್ನು ವಿಕಲಚೇತನ ನೌಕರರ ಸಂಘ ಹಾಗೂ ಕಲರವ ಶಿಕ್ಷಕರ ಸೇವಾ ಬಳಗದ ವತಿಯಿಂದ ಸನ್ಮಾನಿಸಲಾಯಿತು.
ಪೌಜೀಯಾ ತರನ್ನುಮ ಅವರು ಜಿಲ್ಲಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಸಮಯದಲ್ಲಿ ಕಲರವ ಶಿಕ್ಷಕರ ಸೇವಾ ಬಳಗದ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸುವುದಲ್ಲದೇ ಕಾರ್ಯದಲ್ಲಿ ಭಾಗಿಯಾಗುತ್ತಿದ್ದರು.
ಈ ಸಮಯದಲ್ಲಿ ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ,ಕಲಬುರಗಿ ವಿಭಾಗದ ಕಾರ್ಯದರ್ಶಿ ಕರಿಯಪ್ಪ ಅಜ್ಜಿ,ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಕಾರ್ಯದರ್ಶಿ ಮಲ್ಲಪ್ಪ ಗುಡದನ್ನವರ,ಪ್ರೌಢ ಶಾಲಾ ಶಿಕ್ಷಕರಾದ ಎಸ್.ಬಿ.ಕುರಿ,ಬಹದ್ದೂರಬಂಡಿ ಕ್ಲಸ್ಟರ್ ಸಿ.ಆರ್.ಪಿ.ಹನುಮಂತಪ್ಪ ಕುರಿ,
ವಿಕಲಚೇತನ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ ಕುಮಸಿ,ಕಾರ್ಯದರ್ಶಿ ನಾಗಯ್ಯಾ,ಖಜಾಂಚಿ ಸೋಮಶೇಖರ ಹಂಚಿನಾಳ,ಗೌರವಾಧ್ಯಕ್ಷರಾದ ಬೀರಪ್ಪ, ಸಂಘದ ನಿರ್ದೇಶಕರಾದ ಸೋಮಶೇಖರ, ಬೀಮಶಾ,ಶಿವಕುಮಾರ ತೆಗನೂರು,ಶರಣಬಸಪ್ಪ ಹುಂಡೆಕಾರ,ಕಾವೇರಿ,ನಾಗಮ್ಮ ಮುಂತಾದವರು ಹಾಜರಿದ್ದರು.
Comments are closed.