ಪ್ರಧಾನಿ ಮೋದಿ ವಿರುದ್ಧ ಸಂಸತ್ ಎದುರು ಬಿಜೆಪಿಗರು ಜನಾಕ್ರೋಶ ಯಾತ್ರೆ ಮಾಡಲಿ : ಕೆಪಿಸಿಸಿ ವಕ್ತಾರ ಪತ್ರೇಶ್ ಹಿರೇಮಠ
ಹಗರಿಬೊಮ್ಮನಹಳ್ಳಿ :- ಬಿಜೆಪಿಗರಿಗೆ ಬಡವರ ಬಗ್ಗೆ ಕಾಳಜಿ ಇದ್ದರೆ ಜನರ ಅಗತ್ಯ ವಸ್ತುಗಳಾದ ಪೆಟ್ರೋಲ್ ಡೀಸೆಲ್ ಗ್ಯಾಸ್ ಸಿಲೆಂಡರ್ ಅಡುಗೆ ಎಣ್ಣೆಯ ಬೆಲೆ ಏರಿಕೆ ಮಾಡಿ ಜನಸಾಮಾನ್ಯರಿಗೆ ಹೊರೆ ಮಾಡಿರುವ ಕೇಂದ್ರದ ಮೋದಿ ಸರ್ಕಾರದ ವಿರುದ್ಧ ಸಂಸತ್ ಎದುರು ಪ್ರತಿಭಟನೆ ಮಾಡಲಿ ಎಂದು ಕೆಪಿಸಿಸಿ ವಕ್ತಾರ ಪತ್ರೇಶ್ ಹಿರೇಮಠ್ ಆಕ್ರೋಶ ವ್ಯಕ್ತಪಡಿಸಿದ್ದಾರೆ
ಕರ್ನಾಟಕದ ಪ್ರತಿ ಮನೆಯ ಜನಸಾಮಾನ್ಯರಿಗೆ ಕನಿಷ್ಠ 3 ಗ್ಯಾರಂಟಿಗಳನ್ನು ನೀಡಿದ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿ ನಾಯಕರು ಕೇಂದ್ರ ಸರ್ಕಾರ ಮಾಡಿರುವ ಬೆಲೆ ಏರಿಕೆಯನ್ನು ಒಮ್ಮೆ ಪರಾಮರ್ಶೆ ನಡೆಸಲಿ ಎಂದಿದ್ದಾರೆ
ರೈತರ ಹಾಲಿಗೆ 4 ರೂ ಹೆಚ್ಚಿಗೆ ಮಾಡಿ ಕೋಟ್ಯಾಂತರ ರೈತರ ಬದುಕಿಗೆ ನೆರವಾಗಿರುವ ಸರ್ಕಾರದ ನಿರ್ಧಾರ ರೈತಪರವಾಗಿದ್ದು ಹಾಲಿನ ದರ ಏರಿಕೆ ವಿರುದ್ಧ ಪ್ರತಿಭಟನೆ ಮಾಡಿ ಕೀಳುಮಟ್ಟದ ರಾಜಕೀಯ ಮಾಡುತ್ತಿರುವ ಬಿಜೆಪಿ ನಾಯಕರ ನಡೆ ರೈತ ವಿರೋಧಿಯಾಗಿದ್ದು ಕರ್ನಾಟಕದ ಜನತೆ ನಿಮ್ಮ ಗೋಸುಂಬೆತನವನ್ನು ಗಮನಿಸುತ್ತಿದ್ದು ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ಪತ್ರೇಶ್ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ