-ಕೊಪ್ಪಳ:- ಜಿಲ್ಲೆ ಕುಷ್ಟಗಿ ತಾಲೂಕು ಬಾದಿಮನಾಳ 25ನೇ ವರ್ಷದ ಜಾತ್ರ ಮಹೋತ್ಸವ ಜರುಗಲಿದೆ. ಶ್ರೀ ಕಾಗಿನೆಲೆ ಮಹಾ ಸಂಸ್ಥಾನದ ಕನಕಗುರು ಪೀಠ ಕಲಬುರಗಿ ವಿಭಾಗದ ಶಾಖಾ ಮಠವಾಗಿರುವ ಬಾದಿಮನಾಳ ಗ್ರಾಮದಲ್ಲಿ ಕನಕದಾಸರ ಮಂದಿರವಿದ್ದು ಪ್ರತಿ ವರ್ಷ ಧಾರ್ಮಿಕ ಕಾರ್ಯಕ್ರಮ ಮತ್ತು ಸಾಮೂಹಿಕ ವಿವಾಹ ಮದುವೆ ಪ್ರತಿ ವರ್ಷ ಅದ್ದೂರಿಯಾಗಿ ನಡೆದುಕೊಂಡು ಬಂದಿದೆ. ಪ್ರತಿ ವರ್ಷದಂತೆ ಈ ವರ್ಷವೂ ಕನಕ ಜಾತ್ರೆ ಪ್ರಾರಂಭಗೊಂಡಿದೆ.
ಶುಕ್ರವಾರ ದಿನ ಪೀಠದ ಪೂಜ್ಯರ ಸಾನಿಧ್ಯದಲ್ಲಿ ಆಧ್ಯಾತ್ಮಿಕ ಪ್ರವಚನ ಜರುಗಿತು.
ದಿನಾಂಕ 15- 4 -2025 ರಂದು ಮಂಗಳವಾರ ಗ್ರಾಮದ ವಿವಿಧ ಬೀದಿಗಳಲ್ಲಿ ಡೊಳ್ಳು ಹಾಗೂ ವಿವಿಧ ಕಲಾತಂಡಗಳೊಂದಿಗೆ ಮುತ್ತೈದ್ದೆಯವರಿಂದ ಕುಂಭಮೇಳ ಜರುಗಲಿದೆ.
ದಿನಾಂಕ 16-04-2025 ಬುಧವಾರ ರಂದು ಸರ್ವಧರ್ಮದ ಉಚಿತ ಸಾಮೂಹಿಕ ವಿವಾಹ ಜರುಗಲಿದ್ದು ಸಾಯಂಕಾಲ ಕನಕನ ಮಹಾ ರಥೋತ್ಸವ ಅತಿ ವಿಜ್ರಂಭಣೆಯಿಂದ ಜರಗುವುದು.
ಈ ಕಾರ್ಯಕ್ರಮನ್ನು ಮಾನ್ಯ ನಗರಾಭಿವೃದ್ಧಿ ಸಚಿವರಾದ ಭೈರತಿ ಸುರೇಶ ಉದ್ಘಾಟನೆ ಮಾಡಲಿದ್ದಾರೆ. ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ್ ತಂಗಡಗಿ ಅವರು ಕನಕ ಸಮುದಾಯ ಭವನ ಅಡಿಗಲ್ಲು ಪೂಜೆ ಮಾಡುವರು, ಸಂಸದರಾದ ಕೆ ರಾಜಶೇಖರ್ ಹಿಟ್ನಾಳ್ ಅವರು ಸಭಾ ಭವನ ಉದ್ಘಾಟನೆ ಮಾಡಲಿದ್ದಾರೆ. ಕಾರ್ಯಕ್ರಮ ಅಧ್ಯಕ್ಷತೆಯನ್ನು ಮಾನ್ಯ ವಿರೋಧ ಪಕ್ಷದ ಮುಖ್ಯ ಸಚೇತಕ, ಶಾಸಕ ದೊಡ್ಡನಗೌಡ ಪಾಟೀಲ್ ವಹಿಸಲಿದ್ದಾರೆ.
ಶ್ರೀ ಕಾಗಿನೆಲೆ ಮಹಾ ಸಂಸ್ಥಾನದ ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು, ಕನಕಗುರು ಪೀಠದ ಕಲಬುರಗಿ ವಿಭಾಗದ ಶ್ರೀ ಶ್ರೀ ಶ್ರೀ ಸಿದ್ದರಾಮನಂದ ಮಹಾಸ್ವಾಮಿಗಳು, ಶ್ರೀ ಶಿವಾನಂದ ಪುರಿ ಮಹಾಸ್ವಾಮಿಗಳು ಮೈಸೂರು ವಿಭಾಗ, ಈಶ್ವರನಂದ ಪುರಿ ಮಹಾಸ್ವಾಮಿಗಳು ಹೊಸದುರ್ಗ, ಬಸವರಾಜ್ ದೇವರು ಮಹಾಸ್ವಾಮಿಗಳು ಮಣಸೂರು-ಧಾರವಾಡ, ಶ್ರೀ ಶಿವಸಿದ್ದೇಶ್ವರ ಮಹಾಸ್ವಾಮಿಗಳು ಬಾದಿಮನಾಳ- ಹಾಲವರ್ತಿ ಶ್ರೀ ಗಳು ಸಾನಿಧ್ಯ ವಹಿಸಲಿದ್ದಾರೆ.
ಕಾರ್ಯಕ್ರಮಕ್ಕೆ ಹಿಂದುಳಿದ ವರ್ಗದ ಒಕ್ಕೂಟ ರಾಜ್ಯ ಅಧ್ಯಕ್ಷ ಕೆ.ಎಂ. ರಾಮಚಂದ್ರಪ್ಪ, ಶಾಸಕರುಗಳಾದ ರಾಘವೇಂದ್ರ ಹಿಟ್ನಾಳ್, ಬಸವರಾಜ್ ರಾಯರೆಡ್ಡಿ, ಜಿ ಎಸ್ ಪಾಟೀಲ್, ಜನಾರ್ಧನ್ ರೆಡ್ಡಿ, ಎಚ್. ವೈ. ಮೇಟಿ, ಕುರುಬ ಸಂಘದ ರಾಜ್ಯ ಅಧ್ಯಕ್ಷ ಎಂ. ವೀರಣ್ಣ, ಗಣ್ಯರಾದ ಕೆ. ವಿರೂಪಾಕ್ಷಪ್ಪ, ಸಂಗಣ್ಣ ಕರಡಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಹೀಗಾಗಿ ಜಿಲ್ಲೆಯ ಸರ್ವ ಸಮಾಜದ ಬಂಧುಗಳು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಶ್ರೀ ಮಠ ಪರವಾಗಿ ತಮ್ಮಲ್ಲಿ ಕೋರುತ್ತದೆ ಎಂದು ಕನಕಗುರು ಪೀಠದ ಕೊಪ್ಪಳ ಜಿಲ್ಲಾ ಅಧ್ಯಕ್ಷ ವೀರನ ಗೌಡ ಪಾಟೀಲ್, ಕೊಪ್ಪಳ ತಾಲೂಕು ಅಧ್ಯಕ್ಷ ಮುದ್ದಪ್ಪ ಬೇವಿನಹಳ್ಳಿ, ವಿರೂಪಾಕ್ಷಪ್ಪ ಮೊರಾನಾಳ, ಯಲಬುರ್ಗಾದ ಶಿವು ರಾಜೂರು ಪತ್ರಿಕೆ ಪ್ರಕಟಣೆ ನೀಡಿದ್ದಾರೆ.