ಚಿಕ್ಕವಂಕಲಕುಂಟದಲ್ಲಿ ಒಣ ಗಾಂಜಾ ಜಪ್ತಿ

Get real time updates directly on you device, subscribe now.

ಚಿಕ್ಕವಂಕಲಕುಂಟದಲ್ಲಿ ಒಣ ಗಾಂಜಾ ಜಪ್ತಿ: ಪ್ರಕರಣ ದಾಖಲು

ಕೊಪ್ಪಳ ಮಾರ್ಚ್  :  ಚಿಕ್ಕವಂಕಲಕುಂಟ ಗ್ರಾಮದಲ್ಲಿ ಅಕ್ರಮವಾಗಿ ಮಾರಾಟಕ್ಕಾಗಿ ಸಂಗ್ರಹಿಸಿಟ್ಟಿದ್ದ ಒಣ ಗಾಂಜಾವನ್ನು ಗುರುವಾರ ಅಬಕಾರಿ ಇಲಾಖೆಯ ತಂಡವು ಜಪ್ತಿ ಮಾಡಿ, ಪ್ರಕರಣ ದಾಖಲಿಸಿಕೊಂಡಿದೆ.
ಅಬಕಾರಿ ಇಲಾಖೆಯ ಬೆಳಗಾವಿ ಕೇಂದ್ರಸ್ಥಾನ (ಜಾರಿ ಮತ್ತು ತನಿಖೆ) ಅಬಕಾರಿ ಅಪರ ಆಯುಕ್ತರು, ಹೊಸಪೇಟೆ ವಿಭಾಗದ ಅಬಕಾರಿ ಜಂಟಿ ಆಯುಕ್ತರು ಹಾಗೂ ಕೊಪ್ಪಳ ಜಿಲ್ಲೆ ಅಬಕಾರಿ ಉಪ ಆಯುಕ್ತರ ಮಾರ್ಗದರ್ಶನದಲ್ಲಿ ಹಾಗೂ ಅಬಕಾರಿ ಉಪ ಅಧೀಕ್ಷಕರಾದ ಭಾರತಿ ಅವರ ನೇತೃತ್ವದಲ್ಲಿ ಕುಷ್ಟಗಿ ವಲಯ ವ್ಯಾಪ್ತಿಯ ಯಲಬುರ್ಗಾ ತಾಲೂಕಿನ ಚಿಕ್ಕವಂಕಲಕುಂಟ ಗ್ರಾಮದ ಕುಂಟೆಪ್ಪ ಹಣಮಪ್ಪ ಪೂಜಾರಿ ರವರ ವಾಸದ ಮನೆ/ತಗಡಿನ ಶೆಡ್ಡಿನಲ್ಲಿ  ಅಕ್ರಮವಾಗಿ   ಮಾರಾಟಕ್ಕಾಗಿ ಸಂಗ್ರಹಿಸಿಟ್ಟಿದ್ದ ಒಟ್ಟು 188 ಗ್ರಾಂ ಒಣ ಗಾಂಜಾವನ್ನು ಜಪ್ತಿ ಪಡಿಸಿದ್ದು, ಈ ಆರೋಪಿಯ ವಿರುದ್ಧ ಎನ್.ಡಿ.ಪಿ.ಎಸ್ ಕಾಯ್ದೆಯ  1985 ರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸುತ್ತಿದೆ.
ಈ ದಾಳಿಯಲ್ಲಿ ಅಬಕಾರಿ ಉಪ ಅಧೀಕ್ಷಕರಾದ ಭಾರತಿ, ಅಬಕಾರಿ ನೀರಿಕ್ಷಕ ಶಂಕರ ಗುಡದಾರ್, ಕೊಪ್ಪಳ ಉಪ ವಿಭಾಗದ ಅಬಕಾರಿ ಉಪ ನೀರಿಕ್ಷಕ ತಿಮ್ಮಯ್ಯ, ಹಿರೇವಂಕಲಾಕುಂಟ್ ಗ್ರಾಮ ಆಡಳಿತ ಅಧಿಕಾರಿ ಅಂಜು, ಅಬಕಾರಿ ಮುಖ್ಯ ಪೇದೆಗಳಾದ ಮೋಹನ್ ಕುಮಾರ್ ಹಾಗೂ ಹನಮಂತಪ್ಪ ಕುರಿ, ಗೃಹ ರಕ್ಷಕ ಶರಣಪ್ಪ ಸೇರಿದಂತೆ ಮತ್ತಿತರರು ಭಾಗವಹಿದ್ದರು

Get real time updates directly on you device, subscribe now.

Comments are closed.

error: Content is protected !!