ಭಾಗ್ಯನಗರ: ಏಪ್ರಿಲ್ ಮಾಹೆಯೊಳಗೆ ಆಸ್ತಿ ತೆರಿಗೆ ಪಾವತಿಸಿದರೆ ಶೇ.5ರ ವಿನಾಯಿತಿ
: ಭಾಗ್ಯನಗರ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿನ ಆಸ್ತಿ ಮಾಲೀಕರು 2025-26ನೇ ಸಾಲಿನ ಆಸ್ತಿ ತೆರಿಗೆಯನ್ನು ಏಪ್ರಿಲ್ ಮಾಹೆಯೊಳಗೆ ಪಾವತಿಸಿದರೆ ಶೇ.5 ರಷ್ಟು ವಿನಾಯಿತಿ ನೀಡಲಾಗುವುದು ಎಂದು ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ತಿಳಿಸಿದ್ದಾರೆ.
ಮೇ ಹಾಗೂ ಜೂನ್ ತಿಂಗಳಲ್ಲಿ ಆಸ್ತಿ ತೆರಿಗೆಯನ್ನು ಪಾವತಿಸಿದಲ್ಲಿ, ಯಾವುದೇ ರಿಯಾಯಿತಿ ಹಾಗೂ ದಂಡ ಇರುವುದಿಲ್ಲ. ಜುಲೈ ತಿಂಗಳಿನಿಂದ ಶೇ. 2 ರಷ್ಟು ದಂಡದೊಂದಿಗೆ ತೆರಿಗೆ ಪಾವತಿಸಬೇಕಾಗುತ್ತದೆ. ಆದ್ದರಿಂದ ಆಸ್ತಿ ಮಾಲೀಕರು ಏಪ್ರಿಲ್ ಮಾಹೆಯೊಳಗೆ ತೆರಿಗೆ ಪಾವತಿಸಿ, ರಿಯಾಯಿತಿ ಲಾಭವನ್ನು ಪಡೆದುಕೊಳ್ಳಬೇಕೆಂದು ಭಾಗ್ಯನಗರ ಪಟ್ಟಣ ಪಂಚಾಯತಿ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.
Comments are closed.