ಮುಕ್ತ ವಿಶ್ವವಿದ್ಯಾಲಯ: ವಿವಿಧ ಸ್ನಾತಕ, ಸ್ನಾತಕೋತ್ತರ ಪದವಿಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ

ಪ್ರಥಮ ಬಿ.ಎ., ಬಿ.ಕಾಂ., ಬಿ.ಎಸ್ಸಿ., ಬಿ.ಲಿಬ್ & ಐ.ಎಸ್ಸಿ., ಬಿ.ಸಿ.ಎ., ಬಿ.ಬಿ.ಎ ಮತ್ತು ಬಿ.ಎಸ್.ಡಬ್ಲೂ ಹಾಗೂ ವಿವಿಧ ಎಂ.ಎ (ಕನ್ನಡ, ಇಂಗ್ಲೀಷ್, ಹಿಂದಿ, ಸಂಸ್ಕೃತ, ತೆಲುಗು, ಉರ್ದು, ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಾರ್ವಜನಿಕ ಆಡಳಿತ, ಸಮಾಜಶಾಸ್ತ್ರ, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ಹಾಗೂ ಶಿಕ್ಷಣಶಾಸ್ತ್ರ) ಎಂ.ಎ-ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಎಂ.ಕಾಂ., ವಿವಿಧ ಎಂ.ಎಸ್ಸಿ (ರಸಾಯನಶಾಸ್ತ್ರ, ಜೀವಶಾಸ್ತ್ರ, ಮಾನವಶಾಸ್ತ್ರ, ಸಸ್ಯಶಾಸ್ತ್ರ, ಜೈವಿಕ ತಂತ್ರಜ್ಞಾನ, ಪರಿಸರ ವಿಜ್ಞಾನ, ವೈದ್ಯಕೀಯ ಪೋಷಣೆ ಮತ್ತು ಆಹಾರ ಪದ್ಧತಿ, ಆಹಾರ ಮತ್ತು ಪೋಷಣೆ, ಜೀವ ರಸಾಯನಶಾಸ್ತ್ರ, ಭೂಗೋಳಶಾಸ್ತ್ರ, ಮಾಹಿತಿ ತಂತ್ರಜ್ಞಾನ, ಸೂಕ್ಷ್ಮ ಜೀವವಿಜ್ಞಾನ, ಗಣಿತಶಾಸ್ತ್ರ, ಭೌತಶಾಸ್ತ್ರ, ಪದವಿ ಶಿಕ್ಷಣ ಕ್ರಮಗಳಿಗೆ ವಿಶ್ವವಿದ್ಯಾನಿಲಯದ ನಿಯಮಗಳಿಗನೂಗುಣವಾಗಿ ಸ್ಥಳದಲ್ಲಿಯೇ (Spot admission) ದಾಖಲಾತಿಗಳನ್ನು ಪಡೆದು ಪ್ರವೇಶಾತಿ ನೀಡುವ ಕುರಿತು ಶಿಕ್ಷಣವನ್ನು ಪಡೆಯಲು ಅವಕಾಶವಿರುತ್ತದೆ.
ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಯನ್ನು ಹಾಕಿಕೊಂಡು ಕೊಪ್ಪಳ ಪ್ರಾದೇಶಿಕ ಕೇಂದ್ರ ಕಛೇರಿಗೆ ಭೇಟಿನೀಡಿ, ನಿಗದಿತ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಿ, ಅಗತ್ಯ ದಾಖಲಾತಿಗಳ ನಕಲು ಪ್ರತಿಗಳನ್ನು ಪ್ರಾದೇಶಿಕ ಕೇಂದ್ರ ಕಛೇರಿಯಲ್ಲಿ ಸಲ್ಲಿಸಿ ಪ್ರವೇಶಾತಿಯನ್ನು ಪಡೆದುಕೊಳ್ಳಲು ಅವಕಾಶವನ್ನು ಕಲ್ಪಿಸಲಾಗಿರುತ್ತದೆ.
ಪ್ರವೇಶಾತಿಯನ್ನು ಹೊಂದಲು ಮಾರ್ಚ್ 31 ಕೊನೆಯ ದಿನಾಂಕವಾಗಿರುತ್ತದೆ. ವಿದ್ಯಾರ್ಥಿಗಳು ಹಾಗೂ ಪೋಷಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 9008588675 ಅಥವಾ 9743582257, 9071179986, 7483607715 ಗೆ ಹಾಗೂ ವಿವಿಯ ಅಂರ್ತಜಾಲ ವಿಳಾಸ: www.ksoumysuru.ac.in ಕ್ಕೆ ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಪ್ರಾದೇಶಿಕ ಕೇಂದ್ರ, ಕೊಪ್ಪಳ ಪ್ರಾದೇಶಿಕ ನಿರ್ದೆಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments are closed.