ಮಾ. ೨೩ ರಂದು ಕೊಪ್ಪಳ ತಾಲೂಕಾ ೧೦ನೇ ಸಾಹಿತ್ಯ ಸಮ್ಮೇಳನ – ಸಮ್ಮೇಳನಕ್ಕಾಗಿ ಸಿದ್ದವಾದ ಹಲಗೇರಿ

Get real time updates directly on you device, subscribe now.

ಕೊಪ್ಪಳ ಮಾ 23: ಕೊಪ್ಪಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು, ಹಲಗೇರಿ ಗ್ರಾಮಸ್ಥರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಿವಿಧ ಇಲಾಖೆಗಳು ಹಾಗೂ ಕನ್ನಡ ಪರ ಸಂಘಟನೆಗಳ ಸಹಕಾರದೊಂದಿಗೆ ಮಾ 23 ರಂದು ಕೊಪ್ಪಳ ತಾಲೂಕು 10 ನೆಯ ಕನ್ನಡ ಸಾಹಿತ್ಯ ಸಮ್ಮೇಳನವು ನಡೆಯಲಿದೆ.
ಹಿರಿಯ ಬರಹಗಾರ್ತಿ ಶ್ರೀಮತಿ ಮಾಲಾ ಬಡಿಗೇರ ಸರ್ವಾಧ್ಯಕ್ಷತೆಯಲ್ಲಿ ನಡೆಯುವ ಸಮ್ಮೇಳನವನ್ನು ಯಶಸ್ವಿಗೊಳಿಸಲು ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಸ್ವಾಗತ ಸಮಿತಿ ಅಧ್ಯಕ್ಷರೂ ಆಗಿರುವ ಶಾಸಕ ಕೆ ರಾಘವೇಂದ್ರ ಹಿಟ್ನಾಳ ಹಾಗೂ ಕಸಾಪ ತಾಲೂಕಾ ಘಟಕದ ಅಧ್ಯಕ್ಷ ರಾಮಚಂದ್ರಗೌಡ .ಬಿ. ಗೊಂಡಬಾಳ ಮಾಧ್ಯಮಗಳಿಗೆ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ಮಾ 23 ರ ಬೆಳಗ್ಗೆ 7.30 ಕ್ಕೆ ರಾಷ್ಟ್ರಧ್ವಜಾರೋಹವನ್ನು ಶಾಸಕ ಕೆ. ರಾಘವೇಂದ್ರ ಹಿಟ್ನಾಳ, ಪರಿಷತ್ತು ಧ್ವಜವನ್ನು ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ, ಕನ್ನಡ ಧ್ವಜವನ್ನು ಕಸಾಪ ತಾಲೂಕಾ ಅಧ್ಯಕ್ಷ ರಾಮಚಂದ್ರಗೌಡ ಗೊಂಡಬಾಳ ಆರೋಹಣವನ್ನು ಮಾಡಲಿದ್ದಾರೆ.  ಧ್ವಜಾರೋಹಣದ ನಂತರ 8 ಗಂಟೆಗೆ ಭುವನೇಶ್ವರಿ ಹಾಗೂ ಸಮ್ಮೇಳನಾಧ್ಯಕ್ಷರ ಭವ್ಯ ಮೆರವಣಿಗೆಯು ಹಮ್ಮಿಗೇಶ್ವರ ದೇವಸ್ಥಾನದಿಂದ ಶಾಂಭವಿ ದೇವಸ್ಥಾನದವರೆಗೂ ನಡೆಯಲಿದೆ. ಮೆರವಣಿಗೆಗೆ ಹಿರಿಯ ಸಾಹಿತಿ ಈಶ್ವರ ಹತ್ತಿ ಚಾಲನೆ ನೀಡಲಿದ್ದಾರೆ.
10. 30ಕ್ಕೆ ಸಮ್ಮೇಳನದ ಉದ್ಘಾಟನೆ ನಡೆಯಲಿದ್ದು ಪದ್ಮಶ್ರೀಪುರಸ್ಕೃತೆ ಭೀಮವ್ವ ಶಿಳ್ಳೆಕ್ಯಾತರ ಉದ್ಘಾಟಿಸಲಿದ್ದಾರೆ. ದಿಕ್ಸೂಚಿ ಭಾಷಣವನ್ನು ಶಾಸಕ ಕೆ ರಾಘವೇಂದ್ರ ಹಿಟ್ನಾಳ ಮಾಡಲಿದ್ದು, ಆಶಯ ನುಡಿಯನ್ನು ಸಂಸದ ರಾಜಶೇಖರ ಹಿಟ್ನಾಳ, ಸಮ್ಮೇಳನಾಧ್ಯಕ್ಷರ ನುಡಿಯನ್ನು ಸಚಿವ ಶಿವರಾಜ ತಂಗಡಗಿ, ಸ್ಮರಣ ಸಂಚಿಕೆಯನ್ನು ಮಾಜಿ ಸಂಸದ ಸಂಗಣ್ಣ ಕರಡಿ ಹಾಗೂ ವಿವಿಧ ಲೇಖಕರ ಕೃತಿಗಳನ್ನು ಕೊಪ್ಪಳ ವಿ.ವಿ. ಕುಲಪತಿ ಪ್ರೋ ಬಿ. ಕೆ.ರವಿ ಬಿಡುಗಡೆ ಮಾಡಲಿದ್ದಾರೆ. ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ, ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತಾ ಸೇರಿ ಹಲವರು ಭಾಗಿಯಾಗಲಿದ್ದಾರೆ.
12.30 ಕ್ಕೆ ನುಡಿಸೇವಕ ದಿ.ರಾಜಶೇಖರ ಅಂಗಡಿ ಸ್ಮರಣೆ ಗೋಷ್ಠಿ ನಡೆಯಲಿದ್ದು ಕಸಾಪ ಜಿಲ್ಲಾ ಮಾಜಿ ಅಧ್ಯಕ್ಷ ಶೇಖರಗೌಡ ಮಾಲಿಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ. ಪತ್ರಕರ್ತ ಬಸವರಾಜ ಕರುಗಲ್ ಆಶಯ ನುಡಿಗಳನ್ನಾಡಿದರೆ ವಾರ್ತಾ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಡೊಳ್ಳಿನ ಉಪನ್ಯಾಸ ನೀಡಲಿದ್ದಾರೆ.
2 ಗಂಟೆಗೆ ಸಂಕಿರಣ ಗೋಷ್ಠಿ ನಡೆಯಲಿದ್ದು ಹೈಕೋರ್ಟಿನ ಸರಕಾರಿ ಅಭಿಯೋಜಕರಾದ ಬಿ.ಎಸ್.ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ. ಕೊಪ್ಪಳ ತಾಲೂಕಿನ ನೆಲ-ಜಲಗಳ ಸ್ಥಿತಿಗತಿಗಳ ಹೋರಾಟ ಕುರಿತು ಆನಂದತೀರ್ಥಪ್ಯಾಟಿ,ಕೊಪ್ಪಳ ತಾಲೂಕಿನ ಸಾಹಿತ್ಯ ಮತ್ತು ಸಾಂಸ್ಕೃತಿಕ ಕೊಡುಗೆ ಕುರಿತು ರಮೇಶ ಬನ್ನಿಕೊಪ್ಪ ಉಪನ್ಯಾಸ ನೀಡಲಿದ್ದಾರೆ.
3 ಗಂಟೆಗೆ ಅನಸೂಯಾ ಜಹಗೀರದಾರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದೆ. ಮಹೇಶ ಬಳ್ಳಾರಿ ಆಶಯ ನುಡಿಗಳನ್ನಾಡುವರು. ಸುಮಾರು 42 ಜನ ಕವಿಗಳು ತಮ್ಮ ಕವನ ವಾಚನ ಮಾಡಲಿದ್ದಾರೆ. 4.30ಕ್ಕೆ ಸಮ್ಮೇಳನಾಧ್ಯಕ್ಷರೊಂದಿಗೆ ಸುರೇಶ ಸಂಗರಡ್ಡಿ, ಶೇಖರಗೌಡ ಪೊಲೀಸ್ ಪಾಟೀ,. ಖಾಸಿಂಸಾಬ ನದಾಫ್, ಅನಿಲ್ ಬಾಚನಳ್ಳಿ ಸಂವಾದ ಮಾಡಲಿದ್ದಾರೆ.
5 ಗಂಟೆಗೆ ರಾಮಚಂದ್ರಗೌಡ ಗೊಂಡಬಾಳ ಅಧ್ಯಕ್ಷತೆಯಲ್ಲಿ ಬಹಿರಂಗ ಅಧಿವೇಶನ. 5.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಸಮಾರೋಪ ನುಡಿಯನ್ನು ನಾಟಕಕಾರರಾದ ವೈ.ಎಚ್. ಹಳ್ಳಿಕೇರಿ ಆಡಲಿದ್ದಾರೆ. ಇದೇ ವೇಳೆ ಪದ್ಮಶ್ರೀ ಪುರಸ್ಕೃತೆ ಭೀಮವ್ವ ಶಿಳ್ಳೆಕ್ಯಾತರ, ರಾಜ್ಯೋತ್ಸವ ಪುರಸ್ಕೃತರಾದ ಹುಚ್ಚಮ್ಮ ಚೌದ್ರಿ, ಪ್ರೋ ಅಲ್ಲಮಪ್ರಭು ಬೆಟ್ಟದೂರು, ಸಾಹಿತ್ಯ ಆಕಾಡೆಮಿಯ ಸಾಹಿತ್ಯಶ್ರೀ ಪ್ರಶಸ್ತಿ ಪುರಸ್ಕೃತ ಎ. ಎಂ. ಮದರಿ, ನಾಟಕ ಆಕಾಡೆಮಿ ಪ್ರಶಸ್ತಿ ಪಡೆದಿರುವ ತೋಟಪ್ಪ ಕಾಮನೂರು, ಜನಪದ ಆಕಾಡೆಮಿ ಸದಸ್ಯರಾದ ಮಹಿಬೂಬ ಕಿಲ್ಲೇದಾರ, ನಾಟಕ ಆಕಾಡೆಮಿ ಸದಸ್ಯರಾದ ಚಾಂದ್ ಪಾಷಾ ಕಿಲ್ಲೇದಾರ, ಚಲನಚಿತ್ರ ಅಕಾಡೆಮಿ ಸದಸ್ಯರಾದ ಸಾವಿತ್ರಿ ಮುಜಮದಾರ, ಮಾಧ್ಯಮ ಆಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಸಿರಾಜ್ ಬಿಸರಳ್ಳಿ, ಹರೀಶ ಹೆಚ್.ಎಸ್. , ಅಖಿಲ್ ಉಡೇವು,  ಕೆಯುಡಬ್ಲಯೂಜೆ ಪ್ರಶಸ್ತಿ ಪುರಸ್ಕೃತರಾದ ಎನ್. ಎಂ.ದೊಡ್ಡಮನಿ, ಶಿವರಾಜ ನುಗಡೋಣಿ, ಸದ್ಭಾವನಾ ಪ್ರಶಸ್ತಿ ಪುರಸ್ಕೃತರಾದ ಪ್ರಮೋದ ಕುಲಕರ್ಣಿ, ಗ್ರಾಮಸ್ಥರಾದ ಶಿವಾನಂದಪ್ಪ ಚಂಡೂರು, ವೀರಣ್ಣ ಅಂಗಡಿ, ಮುದಕಪ್ಪ ಅಬ್ಬಿಗೇರಿ, ದೇವಪ್ಪ ಹಳ್ಳಿಕೇರಿ ಹಾಗೂ ರಂಗಕರ್ಮಿ ಹಾಲಯ್ಯ ಹುಡೇಜಾಲಿಯವರನ್ನು ಗೌರವಿಸಿ ಸನ್ಮಾನಿಸಲಾಗುವುದು.
ಸಂಜೆ 7 ಗಂಟೆಯಿಂದ ಜೀವನಸಾಬ ಬಿನ್ನಾಳ, ಮಹಿಬೂಬ ಕಿಲ್ಲೇದಾರ. ವಿಶಾಲಾಕ್ಷಿ ಪಲ್ಲೇದ, ನೀಲಪ್ಪ ಹಕ್ಕಂಡಿ ಸೇರಿದಂತೆ ವಿವಿಧ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಸಮ್ಮೇಳನದ ಸ್ವಾಗತ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!