ಸಾಹಿತ್ಯವು ಸಮಾಜಕ್ಕೆ ಮಾನವೀಯ ಮೌಲ್ಯಗಳನ್ನು ತಿಳಿಸಬೇಕು : ಡಾ. ಮಾಧವ ಪೆರಾಜೆ 

Get real time updates directly on you device, subscribe now.

ಕೊಪ್ಪಳ : ಮಾರ್ಚ್ 21: ಸಾಹಿತ್ಯವು ಸಮಾಜಕ್ಕೆ ಮಾನವೀಯ ಮೌಲ್ಯಗಳನ್ನು ತಿಳಿಸಬೇಕು ಎಂದು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಮತ್ತು ಪ್ರಸಾರಂಗ ನಿರ್ದೇಶಕ ಡಾ. ಮಾಧವ ಪೆರಾಜೆ ತಿಳಿಸಿದರು.
 ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಶುಕ್ರವಾರದಂದು ಕಾಲೇಜಿನ ಐಕ್ಯೂಎ ಸಿ ಮತ್ತು ಕನ್ನಡ ವಿಭಾಗವು ಹಮ್ಮಿಕೊಂಡಿದ್ದ ಹಳೆಗನ್ನಡ ಕಾವ್ಯಗಳಲ್ಲಿ ಮಾನವೀಯ ಮೌಲ್ಯಗಳ ಕುರಿತು ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಅವರು ಮಾತನಾಡುತ್ತ ಹಳೆಗನ್ನಡ ಕಾವ್ಯಗಳಲ್ಲಿ ಮಾನವೀಯ ಮೌಲ್ಯಗಳು ಇವೆ. ನಿಜಕ್ಕೂ ಕನ್ನಡ ಸಾಹಿತ್ಯ ಚರಿತ್ರೆಯು ಜೈನ ದಿಗಂಬರರ ಮುನಿಗಳಿಂದ ಪ್ರಾರಂಭಗೊಂಡಿದೆ. ಇವರು ಕನ್ನಡ ಭಾಷೆಯನ್ನು ಸದೃಢಗೊಳಿಸಿದರು. ಇವರಿಂದ ಮುಂದುವರೆದ ಕನ್ನಡ ಸಾಹಿತ್ಯ ಚರಿತ್ರೆ ನಂತರದಲ್ಲಿ ವಡ್ಡಾರಾಧನೆ ಕವಿರಾಜಮಾರ್ಗ ಆದಿಪುರಾಣ ವಿಕ್ರಮಾರ್ಜುನ ವಿಜಯ ಸಹಸಭೀಮ ವಿಜಯ ಮುಂತಾದ ಕೃತಿಗಳು ರಚನೆಗೊಂಡವು. ಇಂತಹ ಕಾವ್ಯಗಳಲ್ಲಿ ಮನುಷ್ಯನ ಮಾನವೀಯ ಮೌಲ್ಯಗಳು ಅಪೂರ್ವ ಕವಿಗಳು ತಮ್ಮ ಕಾವ್ಯಗಳಲ್ಲಿ ವಿವರಿಸಿದ್ದಾರೆ. ಕ್ರಿ.ಶ.850ರ ಕಾಲಕ್ಕೆ ಕನ್ನಡ ಸಾಹಿತ್ಯ ಹಳೆಗನ್ನಡವಾಗಿ ಪಂಪನ ಕಾಲಕ್ಕೆ ಅದೇ ಸಾಹಿತ್ಯ ಹೊಸ ಕನ್ನಡವಾಗಿ ಪ್ರಸ್ತುತ ದಿನಗಳಲ್ಲಿ ಆಧುನಿಕ ಸಾಹಿತ್ಯ ಎಂದು ಗುರುತಿಸಬಹುದು.  ಕೊಪ್ಪಳ ಪರಿಸರವು ಹಳೆಗನ್ನಡ ಭಾಷಾ ಅಸ್ತಿತ್ವವನ್ನು ಇನ್ನೂ ಹಾಗೆ ಉಳಿಸಿಕೊಂಡಿದೆ. ಕಾವ್ಯ ಎಂದರೆ ನಮಗೆ ಅರಿವು ಮೂಡಿಸುವಂತಿರಬೇಕು. ಅಂತಹ ಆದರ್ಶ ಬರಹಗಳನ್ನು  ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇಂದಿನ ಬರಹಗಾರರು ಹಿಂದಿನ ಕವಿಗಳ ಗುಣಗಳನ್ನು ತಮ್ಮ ಜೀವನದಲ್ಲಿ ಮತ್ತು ಬರಹದಲ್ಲಿ ಮೂಡಿಸಬೇಕು ಎಂದರು.
 ಕಾರ್ಯಕ್ರಮದಲ್ಲಿ ಕನ್ನಡ ವಿಭಾಗದ ಮುಖ್ಯ ಸ್ಥೆ ಡಾ. ಹುಲಿಗೆಮ್ಮ  ಬಿ ಅವರು ಮಾತನಾಡುತ್ತ ಇಂದು ಕನ್ನಡ ವಿಷಯ ಬಹಳ ಅಗತ್ಯ ವಿದೆ. ಹಳೆಗನ್ನಡ ವೆಂದರೆ ಪಂಡಿತರ ಶೈಲಿ ಯಲ್ಲಿ ಹೇಳುವುದನ್ನು ಹಳೆಗನ್ನಡ ಎಂದು ಕರೆಯುತ್ತಾರೆ. ಕನ್ನಡ ವಿಷಯ ಸ್ಪರ್ಧೆತ್ಮಕ ಪರೀಕ್ಷೆಗಳಿಗೆ ಬಹಳ ಅಗತ್ಯವಿದೆ. ಕನ್ನಡವೇ ನಮ್ಮ ಬದುಕು ಆಗಬೇಕು. ಎಲ್ಲರೂ ಸಾಹಿತ್ಯದ ಜ್ಞಾನವನ್ನು ಪಡೆದುಕೊಳ್ಳಬೇಕು ಎಂದರು.
ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕ ಡಾ. ಮಂಜು ಕುರ್ಕಿ ಅವರು ಮಾತನಾಡಿ ಇಂದು ಎಲ್ಲರು ವೈಚಾರಿಕ ಶಿಕ್ಷಣ ಪಡೆಯಬೇಕು. ಈ ಆಧುನಿಕ ಕಾಲದಲ್ಲಿ  ಎಲ್ಲರೂ ವೆಬ್ ಸೈಟ್ ಗಳನ್ನು ಚೆಕ್ ಮಾಡಬೇಕು. ನಿಮಗೆ ಉತ್ತಮವಾದ ಪುಸ್ತಕಗಳು ಮತ್ತು ಲೇಖನಗಳು ಸಿಗತ್ತವೆ  ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕಿ ಶ್ರೀ ಮತಿ ನಾಗರತ್ನ ತಮ್ಮಿನಾಳ ಅಧ್ಯಕ್ಷೆತೆ ವಹಿಸಿದ್ದರು.  ಕಾರ್ಯಕ್ರಮದಲ್ಲಿ  ಐಕ್ಯೂ ಎ ಸಿ ಸಂಚಾಲಕರಾದ ಡಾ. ಅಶೋಕ ಕುಮಾರ್,  ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕರಾದ ಶ್ರೀ ಶಿವ ಪ್ರಸಾದ್ ಹಾದಿಮನಿ, ಡಾ. ಸೂರಪ್ಪ ವೈ. ಪಿ, ಶುಭ ಹಾಗೂ ಡಾ. ನರಸಿಂಹ ಉಪಸ್ಥಿತರಿದ್ದರು
ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಪೀರಮ್ಮ ನಿರೂಪಿಸಿದರು. ಸುಸ್ಮಿತಾ ಸ್ವಾಗತಿಸಿದರು. ಸುಮಿತ್ರಾ ವಂದಿಸಿದರು.

Get real time updates directly on you device, subscribe now.

Comments are closed.

error: Content is protected !!