ಮಾ. 25 ರಂದು ಜಿಲ್ಲಾ ಕ್ರೀಡಾ ವಸತಿ ನಿಲಯಕ್ಕೆ ಆಯ್ಕೆ ಪ್ರಕ್ರಿಯೆ
ಕ್ರೀಡಾ ವಸತಿ ನಿಲಯದ ಸೌಲಭ್ಯಗಳು: ಕ್ರೀಡಾ ವಸತಿ ನಿಲಯದಲ್ಲಿ ಉತ್ತಮ ಕೊಠಡಿ ವ್ಯವಸ್ಥೆ ವ್ಯವಸ್ಥೆ ಇರುತ್ತದೆ. ಕ್ರೀಡಾಪಟುಗಳಿಗೆ ದೈನಂದಿನ ಪೌಷ್ಠಿಕಾಂಶಯುಕ್ತ ಊಟೋಪಹಾರ ಹಾಗೂ ಇನ್ನಿತರೆ ಖಾದ್ಯಗಳನ್ನು ನೀಡಲಾಗುತ್ತದೆ. ಕ್ರೀಡಾಪಟುಗಳಿಗೆ ನುರಿತ ತರಬೇತುದಾರರಿಂದ ಉನ್ನತ ತರಬೇತಿ ನೀಡಲಾಗುವುದು. ಕ್ರೀಡಾಪಟುಗಳಿಗೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಕ್ರೀಡಾ ಸಾಧನೆಯನ್ನು ಮಾಡುವ ನಿಟ್ಟಿನಲ್ಲಿ ಉತ್ತಮ ಕ್ರೀಡಾ ತರಬೇತಿಯನ್ನು ನೀಡಲಾಗುತ್ತದೆ. ಕ್ರೀಡಾಪಟುಗಳಿಗೆ ದೈನಂದಿನ ಕ್ರೀಡಾ ತರಬೇತಿಗೆ ಅತ್ಯುನ್ನತ ಕ್ರೀಡಾ ಸಲಕರಣೆಗಳ ವ್ಯವಸ್ಥೆ ಇರುತ್ತದೆ. ಅಥ್ಲೆಟಿಕ್ ಹಾಗೂ ವಾಲಿಬಾಲ್ ಕ್ರೀಡೆಗಳ ಕ್ರೀಡಾಪಟುಗಳಿಗೆ ಉತ್ತಮ ಕ್ರೀಡಾ ಅಂಕಣಗಳ ವ್ಯವಸ್ಥೆ ಇರುತ್ತದೆ. ಆಯ್ಕೆಯಾದ ಕ್ರೀಡಾಪಟುಗಳಿಗೆ ಉತ್ತಮ ಕ್ರೀಡಾ ಸಮವಸ್ತ್ರ, ಶ್ಯೂ ನೀಡಲಾಗುತ್ತದೆ. ಕ್ರೀಡಾಪಟುಗಳಿಗೆ ಈಜು ಹಾಗೂ ಜಿಮ್ ತರಬೇತಿ ಸಹ ನೀಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕ್ರೀಡಾ ವಸತಿ ನಿಲಯದ ತರಬೇತುದಾರರಾದ ಎ.ಎನ್ ಯತಿರಾಜು ಮೊ.ಸಂ: 94486-33146, ರೋಹಿಣಿ ಪರ್ವತೀಕರ ಮೊ.ಸಂ: 82173-24522, ಕಮಲ್ ಸಿಂಗ್ ಬಿಸ್ಟ್ ಮೊ.ಸಂ: 63601-46300, ಸುರೇಶ ಮೊ.ಸಂ: 99015-27333, ವಿಶ್ವನಾಥ ಕರ್ಲಿ ಮೊ.ಸಂ: 86604-55969 ದೀಪಾ, ಹಾಗೂ ಸಣ್ಣ ವಾಲಿಬಾಲ್ ತರಬೇತಿ ಕೇಂದ್ರ ಕೊಪ್ಪಳ ಮೊ.ಸಂ: 80881-43003 ಗೆ ಸಂಪರ್ಕಿಸುವAತೆ ಕೊಪ್ಪಳ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments are closed.