ಸಸ್ಯಸಂತೆ, ತೋಟಗಾರಿಕಾ ಅಭಿಯಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಚಾಲನೆ

Get real time updates directly on you device, subscribe now.


ಕೊಪ್ಪಳ : ಕೊಪ್ಪಳದ ತೋಟಗಾರಿಕೆ ಇಲಾಖೆ ಹಾಗೂ ಕರ್ನಾಟಕ ರಾಜ್ಯ ತೋಟಗಾರಿಕಾ ಅಭಿವೃದ್ಧಿ ಏಜೆನ್ಸಿ ಅವರಿಂದ ಆಗಸ್ಟ್ 15ರಿಂದ ಆರಂಭಗೊಂಡ
ಸಸ್ಯಸಂತೆ ಮತ್ತು ತೋಟಗಾರಿಕಾ ಅಭಿಯಾನಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ಎಸ್ ತಂಗಡಗಿ ಅವರು ರಿಬ್ಬನ್ ಕತ್ತರಿಸುವ ಮೂಲಕ ಆಗಸ್ಟ್ 15ರಂದು
ಚಾಲನೆ ನೀಡಿದರು.
ಸ್ವಾತಂತ್ರ್ಯೊತ್ಸವ ಸಮಾರಂಭದ ಬಳಿಕ ಸಚಿವರು ನೇರವಾಗಿ ತೋಟಗಾರಿಕಾ ಉಪನಿರ್ದೇಶಕರ ಕಚೇರಿ ಆವರಣಕ್ಕೆ ಆಗಮಿಸಿದ‌‌ರು. ಕಾರ್ಯಕ್ರಮದ ಉದ್ಘಾಟನೆ ಬಳಿಕ, ಸಂಸದರಾದ ಕರಡಿ ಸಂಗಣ್ಣ, ಶಾಸಕರಾದ ರಾಘವೇಂದ್ರ ಕೆ.ಹಿಟ್ನಾಳ, ವಿಧಾನ ಪರಿಷತ್ ಶಾಸಕರಾದ ಹೇಮಲತಾ ನಾಯಕ ಹಾಗೂ ಅಧಿಕಾರಿಗಳೊಂದಿಗೆ ಸಚಿವರು
ಸಸಿಗಳ ವೀಕ್ಷಣೆ‌ ನಡೆಸಿದರು.
ಮಣ್ಣು ನೀರು ಮತ್ತು ಎಲೆ‌ ವಿಶ್ಲೇಷಣಾ ಪ್ರಯೋಗಾಲಯ, ರೈತರಿಗೆ ಬ್ಯಾಂಕಿನ ಸೌಲಭ್ಯಗಳು ಸೇರಿದಂತೆ ನಾನಾ ಮಾಹಿತಿಯ ಮಳಿಗೆಗಳಿಗೆ ಸಹ ಸಚಿವರು ಭೇಟಿ ನೀಡಿ ಮಾಹಿತಿ ಪಡೆದು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ತೋಟಗಾರಿಕಾ ಕ್ಷೇತ್ರದಲ್ಲಿ ಉತ್ಪಾದಿಸಿದ ವಿವಿಧ ಗುಣಮಟ್ಟದ ಮಾವು, ಪೇರಲ, ನುಗ್ಗೆ, ಕರಿಬೇವು, ತೆಂಗು ಮತ್ತು ವಿವಿಧ ಹಣ್ಣುಗಳ, ಹೂವಿನ ಮತ್ತು ಅಲಂಕಾರಿಕಾ ಮತ್ತು ತರಕಾರಿ ಸಸಿಗಳ ಪ್ರದರ್ಶನ ಮತ್ತು ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಕೊಪ್ಪಳ ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕರಾದ ಕೃಷ್ಣ ಉಕ್ಕುಂದ ಅವರು ಮಾಹಿತಿ ನೀಡಿದರು.
ತಾಳೆ ಬೆಳೆ ಯೋಜನೆಯ ಕುರಿತು ಮಾಹಿತಿ, ರೈತ ಉತ್ಪಾದಕರ ಕಂಪನಿ ಸಾವಯವ ದೃಢೀಕರಣ ಮಾಹಿತಿ ಕೇಂದ್ರ, ಎರೆಹುಳ ಗೊಬ್ಬರ ಮತ್ತು ಸಮಗ್ರ ಪದ್ಧತಿ ಮಾದರಿ, ಔಷಧೀಯ ಸಸ್ಯಗಳು ಸೇರಿದಂತೆ ಹಲವು ಬಗೆಯ ಹಲವು ಜಾತಿಯ ಸಸಿಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ
ಇಡಲಾಗಿತ್ತು.
ಸಮಾರಂಭದಲ್ಲಿ ನಗರಸಭೆ ಅಧ್ಯಕ್ಷೆ ಶಿವಗಂಗಾ ಶಿವರೆಡ್ಡಿ ಭೂಮಕ್ಕನವರ, ಕೊಪ್ಪಳ ಜಿಲ್ಲಾ ಹಾಪ್ ಕಾಮ್ಸ್ ಅಧ್ಯಕ್ಷರಾದ ಯಂಕಣ್ಣ ಯರಾಶಿ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರಾದ ಶಿವಣ್ಣ ಮೂಲಿಮನಿ, ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶ ಬಾಬು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಯಶೋಧಾ ಸುನೀಲ್ ವಂಟಗೋಡಿ, ಮುನಿರಾಬಾದ್ ನ ತೋಟಗಾರಿಕಾ ಮಹಾವಿದ್ಯಾಲಯದ ಡೀನ್ ಡಾ.ಎನ್ ತಮ್ಮಯ್ಯ,
ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕರಾದ ರಮೇಶ, ಓಬಣ್ಣ ಬಿ.ಕೆ.
ಸೇರಿದಂತೆ ಇಲಾಖೆಯ ಇನ್ನೀತರ ಅಧಿಕಾರಿಗಳು ಮತ್ತು ಸಿಬ್ಬಂದಿ ಇನ್ನೀತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: