ಗಾಲಿ ಜನಾರ್ಧನ ರೆಡ್ಡಿ ಅವರಿಂದ ಮಹಿಳೆಯರಿಗೆ ಉಚಿತ ಜೀನ್ಸ್ ಹೊಲಿಗೆ ತರಬೇತಿ ಘಟಕ ಉದ್ಘಾಟನೆ
ಇಂದು ಗಂಗಾವತಿ ನಗರದ ಎ.ಪಿ.ಎಂ.ಸಿ ಮಾರುಕಟ್ಟೆಯ ಮಾರುತೇಶ್ವರ ದೇವಾಲಯದ ಸಮೀಪ, ಶಾಸಕರಾದ ಗಾಲಿ ಜನಾರ್ಧನ ರೆಡ್ಡಿ ಅವರ ವಿಶ್ವಭಾರತಿ ಕಲಾನಿಕೇತನ ಸಂಸ್ಥೆಯ ವತಿಯಿಂದ ಮಹಿಳೆಯರಿಗೆ ಉಚಿತ ಜೀನ್ಸ್ ಹೊಲಿಗೆ ತರಬೇತಿ ಘಟಕವನ್ನು ಉದ್ಘಾಟಿಸಿದರು.
ಶಾಸಕರು ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆಯಂತೆ ಮಹಿಳೆಯರು ಸ್ವಾವಲಂಬಿಯಾಗಿ ತಮ್ಮ ಜೀವನವನ್ನು ರೂಪಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಉಚಿತ ಜೀನ್ಸ್ ಟೈಲರಿಂಗ್ ತರಬೇತಿ ಕೇಂದ್ರವನ್ನು ಸ್ಥಾಪಿಸಿ ಇಂದು ಅದನ್ನು ಸಾಕಾರಗೊಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿ ತರಬೇತಿ ಕೇಂದ್ರದ ಮೂಲಕ ಮಹಿಳೆಯರು ಸ್ವ ಉದ್ಯೋಗ ಹೊಂದಲು ಮತ್ತು ಗಾರ್ಮೆಂಟ್ ಉದ್ಯಮದಲ್ಲಿ ಉದ್ಯೋಗ ಪಡೆಯಲು ಅನುವು ಮಾಡಿಕೊಡುವುದು ನಮ್ಮ ಆಶಯ ಎಂದು ತಿಳಿಸಿದರು. ಕ್ಷೇತ್ರದ ಮಹಿಳೆಯರು ಈ ಉಚಿತ ತರಬೇತಿ ಕೇಂದ್ರವನ್ನು ಸದುಪಯೋಗ ಪಡೆದುಕೊಳ್ಳಬೇಕಾಗಿ ವಿನಂತಿಸಿದರು.
ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷರಾದ ಮೌಲಸಾಬ್, ಉಪಾಧ್ಯಕ್ಷರಾದ ಪಾರ್ವತಿ ದುರ್ಗೇಶ್ ದೊಡ್ಮನಿ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷರಾದ ವಿರುಪಾಕ್ಷಪ್ಪ ಸಿಂಗನಾಳ್, ನಗರಸಭಾ ಸದಸ್ಯರಾದ ಅಜಯ್ ಬಿಚ್ಚಲ್, ನೀಲಕಂಠ ಕಟ್ಟಿಮನಿ, ಸೋಮನಾಥ ಬಂಡಾರಿ, ಆರ್.ಟಿ.ಒ. ಜುಬೇರ್, ಮುಖಂಡರಾದ ಮನೋಹರ ಗೌಡ ಹೇರೂರು, ಡಿ.ಕೆ. ಆಗೋಲಿ, ಯಮನೂರ್ ಚೌಡ್ಕಿ, ವೀರೇಶ್ ಬಲಕುಂದಿ, ಚಂದ್ರು ಹಿರೂರು, ಪಂಪಣ್ಣ ನಾಯಕ್, ಬಸವಂತ ಪಾಟೀಲ್, ಹುಸೇನ್ ಬಾಷ, ಸೈಯದ್ ಅಲಿ, ದೀಪಕ್ ಬಾಂಟ್ಯ, ರಾಜಾ ಮೊಹಮ್ಮದ್, ರಮೇಶ್ ಹೊಸಮಲಿ, ವೀರೇಶ್ ಸೂಳೆಕಲ್, ಚನ್ನವೀರನಗೌಡ್ರು, ಹಾಗೂ ಮಹಿಳಾ ಮುಖಂಡರಾದ ರಾಜೇಶ್ವರಿ, ಭಾರತಿ ಆಗಲೂರು, ಲಲಿತಾ, ಮಾಲಬಾಯಿ, ಈರಮ್ಮ, ಟಿ.ಜಿ. ಸುಮಾ, ಲಲಿತಮ್ಮ, ವಿಜಯಲಕ್ಷ್ಮಿ, ಸೌಭಾಗ್ಯ, ದೀಲ್ಕಿಶ್ ಬಾನು, ಶಾಹಿನ್ ಕೌಸಲ್ ಹಾಗೂ ಇನ್ನಿತರ ಉಪಸ್ಥಿತರಿದ್ದರು.
Comments are closed.