ಶರಣು ಸಂಕುಲ ರತ್ನ ರಾಷ್ಟ್ರೀಯ ಪ್ರಶಸ್ತಿಗೆ ಅನಸೂಯ ಜಹಗೀರದಾರ ಆಯ್ಕೆ

Get real time updates directly on you device, subscribe now.


ಯಲಬುರ್ಗಾ— ತಾಲೂಕಿನ ಬೇವೂರ ಗ್ರಾಮದ ಸರಕಾರಿ ಪ್ರೌಢ ಶಾಲೆಯ ಶಿಕ್ಷಕಿ ಹಾಗೂ ಸಾಹಿತಿಗಳಾದ ಅನುಸೂಯ ಜಹಾಗೀರದಾರವರು ” ಶರಣು ಸಂಕುಲ ರತ್ನ ರಾಷ್ಟ್ರೀಯ ಪ್ರಶಸ್ತಿ”ಗೆ ಭಾಜನರಾಗಿದ್ದಾರೆ.
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ರಾಜ್ಯಾಧ್ಯಕ್ಷರಾದ ಕೊಟ್ರೇಶ್ ಉಪ್ಪಾರ ರವರು ಹೇಳಿಕೆ ನೀಡಿ ಇದೇ ಫೆ. 23 ರಂದು ಯಲ್ಲಾಪೂರದಲ್ಲಿ ಜರುಗಲಿರುವ ರಾಜ್ಯಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಲಾಗುವುದು ಎಂದು ತಿಳಿಸಿದ್ದಾರೆ.
ಸಾಹಿತ್ಯ ಕ್ಷೇತ್ರದಲ್ಲಿ ರಾಜ್ಯದಲ್ಲಿಯೆ ಗುರುತಿಸಿಕೊಂಡಿರುವ ಸಾಹಿತಿಗಳಾದ ಅನುಸೂಯಾ ಜಹಾಗೀರದಾರ ರವರು ವ್ರತ್ತಿಯಲ್ಲಿ ಶಿಕ್ಷಕರಾದರೂ ಪ್ರವ್ರತ್ತಿಯಲ್ಲಿ ಸಾಹಿತಿಗಳಾಗಿ ಹಲವಾರು ಬಗೆಯ ಸಾಹಿತ್ಯವನ್ನು ಕ್ರಷಿ ಮಾಡಿದ್ದಾರೆ

ಹಿಂದುಸ್ತಾನಿ ಸಂಗೀತ ಕಲಾವಿದೆ. ಮತ್ತು ಕವಯತ್ರಿ,ಕಥೆಗಾರ್ತಿ, ಬರಹಗಾರರು.ಸ. ಪ್ರೌಢ ಶಾಲಾ ಶಿಕ್ಷಕರು, ಕನ್ನಡ ಪರ ವಿವಿಧ ಸಂಘಟನೆಗಳಲಿ ಪದಾಧಿಕಾರಿ, ಕಾರ್ಯಕಾರಿ ಸಮಿತಿ ಸದಸ್ಯರು. ಕರ್ನಾಟಕ ಲೇಖಕಿಯರ ಸಂಘ ಕೊಪ್ಪಳ ಜಿಲ್ಲಾ ಘಟಕದ ಉಪಾಧ್ಯಕ್ಷರು. ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ)ಯ ಜಿಲ್ಲಾ ಘಟಕದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ

ಕಾವ್ಯ ಕೃತಿಗಳು – ಒಡಲಬೆಂಕಿ – ೨೦೧೪ *ಆತ್ಮಾನುಸಂಧಾನ(ಗಜಲ್-೨೦೨೧)
ನೀಹಾರಿಕೆ (ಹನಿಗವಿತೆಗಳು- ೨೦೨೧))
ಅಸ್ಥಿಮಜ್ಜೆ(ಕವನ ಸಂಕಲನ-೨೦೨೩)
ಪರಿವರ್ತನೆ(ಕಥಾಸಂಕಲನ-೨೦೨೩)
ನಿನ್ನೊಲುಮೆ ಇರದಿರೆ (ಗಜಲ್ ಸಂಕಲನ-೨೦೨೫) ಕ್ರತಿಗಳು ಪ್ರಕಟವಾಗಿವೆˌ

ಪ್ರಶಸ್ತಿ ಪುರಸ್ಕಾರ:- ಡಾ.ಡಿ. ಎಸ್. ಕರ್ಕಿ ಕಾವ್ಯ
ಪ್ರಶಸ್ತಿ ( ಡಾ. ಡಿ. ಎಸ್. ಕರ್ಕಿ ಪ್ರತಿಷ್ಠಾನ. ಬೆಳಗಾವಿ-ಒಡಲಬೆಂಕಿ ಕೃತಿಗೆ ೨೦೧೫ ರಲ್ಲಿ(ಒಡಲ ಬೆಂಕಿ ಕವನ ಸಂಕಲನ)
*ಉಮಾಶಂಕರ ಪ್ರತಿಷ್ಠಾನ ಪ್ರೋತ್ಸಾಹಕ ಕಾವ್ಯ ಪ್ರಶಸ್ತಿ.
ಉಮಾ ಶಂಕರ ಪ್ರತಿಷ್ಠಾನ ಹುಬ್ಬಳ್ಳಿ
(ಆತ್ಮಾನುಸಂಧಾನ ಗಜಲ್ ಸಂಕಲನ -೨೦೨೧)
ಪದ್ಮಾವತಿ ವೆಂಕಟೇಶ ದತ್ತಿ ಕಥಾ ಮಾಣಿಕ್ಯ ಪ್ರಶಸ್ತಿ.ಹಾಸನ.(ಪರಿವರ್ತನೆ ಕಥಾಸಂಕಲ-೨೦೨೩)
ಅಭಿರುಚಿ ಕಥಾಪ್ರಶಸ್ತಿ – ಮೈಸೂರು.(ಪರಿವರ್ತನೆ ಕಥಾಸಂಕಲನ”೨೦೨೩)

ಗಜಲ್ ಕ್ಷೇತ್ರದಲ್ಲಿನ ಸಾಧನೆಗಾಗಿ ಪುರಸ್ಕಾರ( ನಿಂಗೋಜಿ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಟ್ರಸ್ಟ(ರಿ) ಕೊಪ್ಪಳ.)
*ಕಾವ್ಯಶ್ರೀ ಪ್ರಶಸ್ತಿ -ಕಸ್ತೂರಿ ಸಿರಿಗನ್ನಡ ಬಳಗ ಮಂಡ್ಯ
(ಸಂಘಟನೆ ಮತ್ತು ಸಾಹಿತ್ತಿಕ ಚಟುವಟಿಕೆ)
*ಕುವೆಂಪು ರಾಜ್ಯ ಕಾವ್ಯ ಪುರಸ್ಕಾರ -ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಬೆಂಗಳೂರು. ಜಿಲ್ಲಾ ಘಟಕ
ಶಿವಮೊಗ್ಗ (ಸಾಹಿತ್ಯ ಮತ್ತು ಸಂಘಟನೆ)
“ಕೊಪ್ಪಳ ಜಿಲ್ಲಾ ರಾಜ್ಯೋತ್ಸವ ಪುರಸ್ಕಾರ-
ಕೊಪ್ಪಳ ಜಿಲ್ಲಾಡಳಿತ- ೨೦೧೫ ರಲ್ಲಿ (ಸಾಹಿತ್ಯ ಮತ್ತು ಸಂಘಟನೆ)
*ಕೊಪ್ಪಳ ಜಿಲ್ಲಾ ಮಹಿಳಾ ಒಕ್ಕೂಟ ಪುರಸ್ಕಾರ
(ಮಹಿಳಾ ಸಾಹಿತ್ಯ ಮತ್ತು ಸಂಘಟನೆ)
*ಕೊಪ್ಪಳ ಜಿಲ್ಲಾ ಹೋರಾಟ ರಜತ ಮಹೋತ್ಸವ ಪುರಸ್ಕಾರ ‌(ಕೊಪ್ಪಳ ಜಿಲ್ಲಾ ಹೋರಾಟ ಮತ್ತು ಸಂಘಟನೆ)
*ಸಂಯುಕ್ತ ಕರ್ನಾಟಕ ಯುಗಾದಿ ಕಾವ್ಯ ಸ್ಪರ್ದೆ
ಮೆಚ್ಚುಗೆ ಬಹುಮಾನ.
(೧೯೯೫ ರಲ್ಲಿ ಚೈತ್ರಳ ಸ್ವಗತ ಕವಿತೆಗೆ)
*ಉತ್ತಮ ವಿಶೇಷ ಶಿಕ್ಷಕಿ ರಾಜ್ಯ ಪ್ರಶಸ್ತಿ
– ಕರ್ನಾಟಕ ಸರ್ಕಾರ ೨೦೦೭
(ಶಿಕ್ಷಕ ವೃತ್ತಿಯಲ್ಲಿನ ಸಾಧನೆ)
ಒಂದು ಕವಿತೆ ವಿಜಯನಗರ ವಿಶ್ವವಿದ್ಯಾಲಯ
ಬಳ್ಳಾರಿಯ ಬಿಎಸ್ ಸಿ,ಬಿಸಿಎ,ಜಿಎಂಟಿ,ಪದವಿ ವಿದ್ಯಾರ್ಥಿಗಳಿಗೆ ನಾಲ್ಕನೆಯ ಸೆಮಿಷ್ಟರ್ ಬೇಸಿಕ್ ಕನ್ನಡ ಪಠ್ಯವಾಗಿದೆ.(ಇಲ್ಲಿ ಮಕ್ಕಳು ಅಳುವುದಿಲ್ಲ ಕವಿತೆ)
ಕವಿತೆಗಳು ತೆಲುಗು ಭಾಷೆಗೆ ಅನುವಾದಗೊಂಡು ತೆಲುಗು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಕನ್ನಡ ನಾಡಿನ ವಿವಿಧ ಪತ್ರಿಕೆಗಳಲ್ಲಿ,ಜಾಲತಾಣಪತ್ರಿಕೆಗಳಲ್ಲಿ ಕವನ,ಕಥೆ,ಸಾಹಿತ್ತಿಕ ಬರಹಗಳು ಪ್ರಕಟವಾಗಿವೆ.ಆಕಾಶವಾಣಿ ರಾಯಚೂರು, ಕಲಬುರ್ಗಿ,ಹೊಸಪೇಟೆ, ಕೊಪ್ಪಳದ ಗಂಗಾವತಿ ಕೇಂದ್ರಗಳಿಂದ ವಾಚನಗೊಂಡು ಪ್ರಸಾರವಾಗಿವೆ.
1993 ರಲ್ಲಿ ಆಕಾಶವಾಣಿ ಕಲಬುರ್ಗಿನಡೆಸಿದ ರಾಜ್ಯಮಟ್ಟದ ಕವನ ಸ್ಪರ್ದೆಯಲ್ಲಿ ವಿಜೇತಗೊಂಡ ನನ್ನ ಕವನಗಳು ಕವಿತೆ ಅಲ್ಲಿಯ ಜಿಲ್ಲಾ ವಿಜ್ಞಾನ ಕೇಂದ್ರ ಸ್ಥಳದಲ್ಲಿ ನಡೆದ ಕಾವ್ಯ ಸಮ್ಮೇಳನದಲ್ಲಿ ರಾಯಚೂರು ಜಿಲ್ಲಾಭಾಗದಿಂದ ಇದೊಂದೇ ಆಯ್ಕೆಗೊಂಡಿತ್ತು.ಮತ್ತು ಆ ಕವಿತೆಯನ್ನು ಅಲ್ಲಿ ವಾಚನ ಮಾಡಲಾಯಿತು. ಅಖಂಡ ರಾಯಚೂರು ಜಿಲ್ಲೆಯಿಂದ ಆಯ್ಕೆಯಾದ ಒರ್ವ ಕವಯತ್ರಿ ಇವರಾಗಿದ್ದರು.
ಕಲಬುರ್ಗಿಯಿಂದ ಹೊರತರುತ್ತಿದ್ದ ಪ್ರಜಾಧ್ವನಿ ಪತ್ರಿಕೆಯಲ್ಲಿ ಗೌರವ ಸಂಪಾದಕರಾಗಿ ಸಂಪಾದಕ ಮಂಡಳಿಯಲ್ಲಿ ಕಾರ್ಯ ನಿರ್ವಹಿಸದ್ದಾರೆ.
ಕೊಪ್ಪಳದಲ್ಲಿ ನಡೆದ ಅ.ಭಾ.ಕ.ಸಾಹಿತ್ಯ ಸಮ್ಮೇಳನದಲ್ಲಿ ಮಹಿಳಾ ಸಮಿತಿ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸಲಾಗಿತ್ತು.
ಶ್ರವಣಬೆಳಗೊಳದಲ್ಲಿ ನಡೆದ ೮೧ನೆಯ ಅಭಾಕಸಾಹಿತ್ಯ ಸಮ್ಮೇಳನಲ್ಲಿ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ (೨೦೧೪ ಡಿಸೆಂಬರ್‌ ನಲ್ಲಿ)
ರಾಯಚೂರು ಆಕಾಶವಾಣಿಯಲ್ಲಿ ಭಾವಗೀತೆ,ಜನಪದಗೀತೆಗಳು ಪ್ರಸಾರವಾಗಿವೆ.
ಮೂರು ಬಾರಿ ಕೊಪ್ಪಳ ತಾಲ್ಲೂಕು ಕಸಾಪ ದ ಮಹಿಳಾ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಿದ್ಧಾರೆ
ಹಾಗು ಕೊಪ್ಪಳದಲ್ಲಿ ೬೨ ನೆಯ ಅಭಾಕಸಾ ಸಮ್ಮೇಳನ ನಡೆದಾಗಲು ಸಕ್ರೀಯವಾಗಿ ಕಾರ್ಯನಿರ್ವಹಿಸಿದ್ಧಾರೆ.
ಇಂತಹ ಸಾಹಿತಿಗಳು ! ಸಂಘಟಿಕರು ! ಸಂಗೀತಗಾರರನ್ನು ಗುರುತಿಸಿದ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಪದಾಧಿಕಾರಿಳನ್ನು ಕೊಪ್ಪಳ ಜಿಲ್ಲಾ ಸಾಹಿತಿಗಳ ಪರವಾಗಿ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷರಾದ ವೀರಣ್ಣ ನಿಂಗೋಜಿ ! ಅಕ್ಬರ ಕಾಲಿಮಿರ್ಚಿ ˌ ವೈಷ್ಣವಿ ಜೋಶಿ ˌ ಸಂತೋಷ ದೇಶಪಾಂಡೆ ˌ ಶಿ.ಕಾ. ಬಡಿಗೇರ . ಡಿ.ಎಂ. ಬಡಿಗೇರ ˌ ಶಿವಮೂರ್ತಿ ಇಟಗಿ ˌ ರುದ್ರಪ್ಪ ಭಂಡಾರಿ ˌ ವೀರಣ್ಣ ವಾಲಿ ˌ ನಿಂಗಪ್ಪ ಕೆಂಚರಡ್ಡಿ ˌ ನಾಗಭೂಷಣ ಅರಳಿˌ ಶರಣಪ್ಪ ತಳ್ಳಿ ! ಫ್ರೊ. ದೇವೆಂದ್ರಪ್ಪ ಜಾಜಿ .ಶೈಲಜಾ ಹಿರೇಮಠ ! ಮಹೇಶ ಕೋಟೆ ˌ ಅಲ್ಲಾವುದ್ಧೀನ ಯಮ್ಮಿ ! ಸಾವಿತ್ರಿ ಮುಜುಮದಾರ ˌ ವಿಜಯಲಕ್ಷ್ಮೀ ಕೊಟಗಿ ˌ ಪುಷ್ಪಲತಾ ಏಳುಭಾವಿ ˌ ನಟರಾಜ ಸೋನಾರ ˌ ರವೀಂದ್ರ ಬಾಕಳೆ ˌ ಚಂದಪ್ಪ ಹಕ್ಕಿ ! ಫ್ರೋ. ಎಸ್.ಎಸ್. ಅರಳಿ ˌ ಮಹಾಂತೇಶ ಚೌಡಾಪುರ ˌ ಮಲ್ಲಯ್ಯ ಕೋಮಾರಿ . ಅಜಮೀರ ನಂದಾಪುರ ˌ ಅಮರೇಶ ಮೈಲಾಪೂರ ಹಾಗೂ ಅನೇಕ ಸಾಹಿತಾಗಳು ಜಹಾಗೀರದಾರರನ್ನು ಅಭಿನಂದಿಸಿ ಅವರಿಂದ ಇನ್ನು ಹಲವು ಬಗೆಯ ಕ್ರತಿಗಳು ಬರುವದರ ಜೊತೆಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಅವರಿಗೆ ಲಭಿಸಲಿ ಎಂದು ಶುಭ ಹಾರೈಸಿದ್ದಾರೆˌ

Get real time updates directly on you device, subscribe now.

Comments are closed.

error: Content is protected !!