ಮಾ.12 ರಂದು‌ ಒಳಮೀಸಲಾತಿ ವರ್ಗಿಕರಣ ಜಾರಿಗೆ ಒತ್ತಾಯಿಸಿ ಪ್ರತಿಭಟನೆ : ಬಿ.ಹುಸೇನಪ್ಪ ಸ್ವಾಮಿ

Get real time updates directly on you device, subscribe now.


ಕೊಪ್ಪಳ : ಒಳ ಮೀಸಲಾತಿ ವರ್ಗಿಕರಣ ಜಾರಿಗೆ ಒತ್ತಾಯಿಸಿ ಹಾಗೂ ಮಾದಿಗರ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಮಾರ್ಚ್ 12ರಂದು ಬೆಳಿಗ್ಗೆ 11:30ಕ್ಕೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಒಂದು ದಿನ ಪ್ರತಿಭಟನೆ ಧರಣಿ ನಡೆಸಲಾಗುವುದು ಎಂದು ರಾಷ್ಟ್ರೀಯ ಅಖಿಲ ಭಾರತ ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಬಿ.ಹುಸೇನಪ್ಪ ಸ್ವಾಮಿ ಮಾದಿಗ ಹೇಳಿದರು.
ಅವರು ಗುರುವಾರದಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯಂತೆ ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಜಾರಿ ಮಾಡಲು 7 ಜನರ ನ್ಯಾಯಮೂರ್ತಿಗಳ ಸಂವಿಧಾನ ಪೀಠವು ಒಳ ಮೀಸಲಾತಿಯನ್ನು ಜಾರಿ ಮಾಡಲು ಆಯಾ ರಾಜ್ಯ ಸರ್ಕಾರಗಳಿಗೆ ಅಧಿಕಾರ ಕೊಟ್ಟಿದೆ, ಹೀಗಿದ್ದು ಕೂಡ ಸಂವಿಧಾನ ಪೀಠ ಆದೇಶವನ್ನು 6-7 ತಿಂಗಳು ಕಳೆದರೂ ಪರಿಶಿಷ್ಟ ಜಾತಿಗಳಲ್ಲಿ‌ ಒಳ ಮೀಸಲಾತಿಯನ್ನು ಮಾದಿಗರಿಗೆ ನಮ್ಮ ರಾಜ್ಯ ಸರ್ಕಾರ ನೀಡುವಲ್ಲಿ ವಿನಾಕಾರಣ ಕಾಲಹರಣ ಮಾಡುತ್ತಾ ಬಂದಿದೆ, ದೇಶದ ಸರ್ವೋಚ್ಚ ನ್ಯಾಯಾಲಯದ ಸಂವಿಧಾನ ಪೀಠದ ಏಳು ಜನ ನ್ಯಾಯಮೂರ್ತಿಗಳು ನೀಡಿರುವ ಆದೇಶದಂತೆ ವಿಳಂಬ ಮಾಡಿ ಮುಚ್ಚಿ ಹಾಕುತ್ತಿರುವ ಷಡ್ಯಂತ್ರವೇ ಸರಿ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಯದುವತ್ತಾಗಿ ಜಾರಿ ಮಾಡಬೇಕು, ಸದನದಲ್ಲಿ ಶಾಸಕರು ಸಚಿವರುಗಳು ಧ್ವನಿಯೆತ್ತಿ ಒಳ ಮೀಸಲಾತಿ ಜಾರಿಗೆ ಒತ್ತಾಯಿಸಬೇಕು ಹಾಗೂ ಶಾಸಕರು, ಸಚಿವರು ಸಚಿವರು ಮಾತನಾಡದೆ ಇರುವುದು ಮಾದಿಗರ ಸಮಾಜದ ಮೇಲೆ ಸರಕಾರ ಗೂಂಡಗಿರಿ ಮತ್ತು ದೌರ್ಜನ್ಯ ಎಂದು ಪರಿಗಣಿಸಬೇಕಾಗುತ್ತದೆ ಅದು ಸರಿಯಲ್ಲ ಕಾರಣ ಪರಿಶಿಷ್ಟ ಜಾತಿ ಮಾದಿಗ ಒಳ ಮೀಸಲಾತಿಯನ್ನು ತುರ್ತಾಗಿ ಜಾರಿ ಮಾಡಬೇಕೆಂದು ಆಗ್ರಹಿಸುತ್ತೇವೆ ಎಂದರು.
ರಾಜ್ಯ ಕಾರ್ಯದರ್ಶಿ ಹೇಮರಾಜ್ ವೀರಾಪುರ ಮಾತನಾಡಿ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಯ ಒಳ ಮೀಸಲಾತಿಯನ್ನು ಕೂಡಲೇ ಜಾರಿ ಮಾಡಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿಯ ಮುಖಂಡರಾದ ಹನುಮಂತಪ್ಪ ಬಳ್ಳಾರಿ, ಮುತ್ತಣ್ಣ ಮೈಲಾರಪ್ಪ, ಕಲ್ಯಾಣ ಕರ್ನಾಟಕದ ವಿಭಾಗೀಯ ಅಧ್ಯಕ್ಷ ಹುಲುಗಪ್ಪ ಹಿರೇಮನಿ, ಯಲಬುರ್ಗಾ ತಾಲೂಕ ಅಧ್ಯಕ್ಷ ಪ್ರಭುರಾಜ್ ಕಡೇಮನಿ ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!