ಎಂಎಸ್ ಪಿಎಲ್ ಉಕ್ಕು ಕಾರ್ಖಾನೆ ವಿಸ್ತರಣೆಗೆ ಸಂಪೂರ್ಣ ವಿರೋಧ : ಸಂತೋಷ್ ಕುರಿ

Get real time updates directly on you device, subscribe now.


ಕೊಪ್ಪಳ: ಜಿಲ್ಲಾ ಕೇಂದ್ರಕ್ಕೆ ಹೊಂದಿಕೊಂಡಿರುವ ಎಂಎಸ್ ಪಿಎಲ್ (ಬಿಎಸ್ಸಿಎಲ್) ಕಾರ್ಖಾನೆ ವಿಸ್ತರಣೆಗೆ ಸಂಪೂರ್ಣ ವಿರೋಧಿಸುವುದಾಗಿ ನವಕರ್ನಾಟಕ ಯುವಶಕ್ತಿ, ಜಿಲ್ಲಾ ಘಟಕದ ಅಧ್ಯಕ್ಷ ಸಂತೋಷ್ ಕುರಿ ಹೇಳಿದರು.
ಅವರು ಗುರುವಾರದಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ಜಿಲ್ಲಾ ಕೇಂದ್ರದ ಕೂಗಳತೆ ದೂರದಲ್ಲಿ ನೂರಾರು ಕಾರ್ಖಾನೆಗಳು ಸ್ಥಾಪಿತಗೊಂಡು ದಶಕಗಳು ಕಳೆದಿವೆ. ಕಾರ್ಖಾನೆ ಬಿಡುವ ತ್ಯಾಜ್ಯದಿಂದ ಸುತ್ತಮುತ್ತಲಿನ ಗ್ರಾಮಗಳ ಜನಜೀವನ, ಜಾನುವಾರು ಹಾಗೂ ಪ್ರಾಣಿ ಪಕ್ಷಿಗಳಿಗೆ ಮಾರಕವಾಗಿ ಪರಿಣಮಿಸಿದೆ. ವಿಶೇಷವಾಗಿ ಜನರ ಆರೋಗ್ಯದ ಮೇಲೆ ಗಂಭೀರವಾಗಿ ಪರಿಣಾಮ ಬೀರಿದ್ದು, ರೈತರ ಬೆಳೆಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಹಾನಿ ಉಂಟಾಗಿ ಸಾಲದ ಸುಳಿಯಲ್ಲಿ ಸಿಲುಕುವಂತಾಗಿದೆ,ಇಷ್ಟಾದರೂ ಜಿಲ್ಲಾ ಕೇಂದ್ರಕ್ಕೆ ಹೊಂದಿಕೊಂಡಿರುವ ಎಂಎಸ್‌ಪಿಎಲ್ (ಬಿಎಸ್‌ಪಿಎಲ್) ಮತ್ತೊಂದು ಬೃಹತ್ ಉಕ್ಕು ಕಾರ್ಖಾನೆಯನ್ನು ಸ್ಥಾಪಿಸಲು ಹೊರಟಿರುವುದು ಖಂಡ ನಾರ್ಹ. ಇದರಿಂದ ಮುಂದಿನ ದಿನಗಳಲ್ಲಿ ಜಿಲ್ಲಾ ಕೇಂದ್ರವನ್ನೇ ಸ್ಥಳಾಂತರ ಮಾಡುವ ಪರಿಸ್ಥಿತಿ ಎದರಾಗಬಹುದು. ಕಾರ್ಖಾನೆ ವಿಸ್ತರಣೆಗೆ ಅನುಮತಿ ಬೇಡ,ಕೇವಲ ಸಾಫ್ಟ್ ವೇರ್ ಇಂಡಸ್ಟ್ರಿಗಳನ್ನು ಬೆಂಗಳೂರು ಮೈಸೂರುಗಳಲ್ಲಿ ಸ್ಥಾಪಿಸುತ್ತಾರೆ ನಮ್ಮಲ್ಲಿ ಸಾಫ್ಟ್ವೇರ್ ಹಾರ್ಡೋರ್ ಕಂಪನಿಗಳನ್ನು ಸ್ಥಾಪಿಸುತ್ತಿಲ್ಲ ಇದು ಉತ್ತರ ಕರ್ನಾಟಕಕ್ಕೆ ಆಗುತ್ತಿರುವ ಮಲತಾಯಿ ಧೋರಣೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮನೋಜಕುಮಾರ ಮಡ್ಡಿ, ತಾಲೂಕು ಅಧ್ಯಕ್ಷ ರಮೇಶ್, ತಾಲೂಕು ಉಪಾಧ್ಯಕ್ಷ ಬಸವರಾಜ ಬೂದಗುಂಪಿ, ಸಾಮಾಜಿಕ ಹೋರಾಟಗಾರರಾದ ವಿನೋದಕುಮಾರ
ಬೇವಿನಹಳ್ಳಿ ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!