MSPL ಕಾರ್ಖಾನೆ ವಿಸ್ತರಣೆ ವಿರುದ್ಧ ಪ್ರಚಾರಂದೋಲನಕ್ಕೆ ಚಾಲನೆ
ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿಯಿಂದ ಗಿಣಿಗೇರಿಯಲ್ಲಿ ಎಮ್,ಎಸ್,ಪಿ,ಎಲ್, ಕಾರ್ಖಾನೆ ವಿಸ್ತರಣೆ ವಿರುದ್ಧ ಪ್ರಚಾರಂದೋಲನಕ್ಕೆ ಇಂದು ಚಾಲನೆ,
ಕೊಪ್ಪಳ : ತಾಲೂಕಿನ ಗಿಣಿಗೇರಿಯಲ್ಲಿ ಅಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ಮತ್ತು ಎಮ್,ಎಸ್,ಪಿ,ಎಲ್, ಕಾರ್ಖಾನೆ ವಿಸ್ತರಣೆ ವಿರುದ್ಧ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿಯಿಂದ ಇಂದು ಪ್ರಚಾರಂದೋಲನಕ್ಕೆ ಚಾಲನೆ ನೀಡಲಿದ್ದಾರೆ.
ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿಯಿಂದ ಅಣುಸ್ಥಾವರ ಮತ್ತು ಎಮ್,ಎಸ್,ಪಿ,ಎಲ್. ಮತ್ತು ಬಿ,ಎಸ್,ಪಿ,ಎಲ್, ಕಾರ್ಖಾನೆಯ ದೊಡ್ಡ ಪ್ರಮಾಣದಲ್ಲಿ ವಿಸ್ತರಣೆ ಮಾಡುವದನ್ನು ವಿರೋಧಿಸುತ್ತಾ ಸಾರ್ವಜನಿಕರಿಗೆ ಆರೋಗ್ಯ ಉಳಿವಿಗಾಗಿ ಪ್ರಚಾರಂದೋಲನ ಹಮ್ಮಿಕೊಳ್ಳಲಾಗಿದೆ.
ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ನೇತೃತ್ವದಲ್ಲಿ ಫೆಬ್ರುವರಿ 17 ರಿಂದ 20ರವರೆಗೆ ಕೊಪ್ಪಳ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಜನ ಜಾಗೃತಿ ಅಭಿಯಾನ ನಡೆಸಲಾಗುತ್ತಿದೆ.
ದಿ,17ರಂದು ಸೋಮವಾರ ಬೆಳಿಗ್ಗೆ 11 ಗಂಟೆಗೆ ಗಿಣಿಗೇರಿಯ ಗಂಗಾವತಿ ತಿರುವಿನಲ್ಲಿ ಜನ ಜಾಗೃತಿ ಪ್ರಚಾರಂದೋಲನಕ್ಕೆ ಚಾಲನೆ ಗೊಳ್ಳುತ್ತದೆ. ನಂತರ ಅಲ್ಲಾ ನಗರ, ಹಿರೇ ಬಗನಾಳ, ಚಿಕ್ಕಬಗನಾಳ, ಕಾಸನಕಂಡಿ,ಕುಣಿಕೇರಿ,ಹಾಲವರ್ತಿ ಮುಂತಾದ ಹಳ್ಳಿಗಳು ಕೈಗಾರಿಕೆಗಳಿಂದ ಹಾನಿಗೊಳಗಾದ ಪ್ರದೇಶದಲ್ಲಿ ಭೇಟಿ ನೀಡಿ ಜನರನ್ನು ಜಾಗೃತಿಗೊಳಿಸುವ ಮೂಲಕ ಸಂಘಟಿಸಲಾಗುವುದು, ಕಾರ್ಖಾನೆಗಳಿಂದ ವಾಯು ಮಾಲಿನ್ಯದಿಂದ ತತ್ತರಿಸಿರುವ ಜನರೆಲ್ಲರೂ ಒಗ್ಗೂಡಬೇಕೆಂದು ಕರೆ ನೀಡುತ್ತಿರುವ ಈ ಆಂದೋಲನದಲ್ಲಿ ತಾವೆಲ್ಲರೂ
ಹೆಚ್ಚಿನ ರೀತಿಯಲ್ಲಿ ಪ್ರಚಾರ ಮಾಡುವ ಮೂಲಕ ಮುಂದಿನ ಹೋರಾಟಕ್ಕೆ ಭಾಗವಹಿಸಿಬೇಕಾಗಿ ಕೋರುತ್ತೇವೆ ಎಂದು ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿಯ ಪ್ರಧಾನ ಸಂಚಾಲಕ ಹಿರಿಯ ಬಂಡಾಯ ಸಾಹಿತಿ ಅಲ್ಲಮ ಪ್ರಭು ಬೆಟ್ಟದೂರು ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಬಸವರಾಜ ಶೀಲವಂತರ್, ರೈತ ಸಂಘಟನೆಯ ರಾಜ್ಯ ನಾಯಕ ಡಿ,ಹೆಚ್,ಪೂಜಾರ್, ಕೆ,ಬಿ,ಗೋನಾಳ, ಶರಣು ಗಡ್ಡಿ,ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್,ಎ,ಗಫಾರ್, ಮಂಜುನಾಥ್ ಗೊಂಡಬಾಳ ಇನ್ನೂ ಅನೇಕ ಮುಖಂಡರು ಕೋರಿದ್ದಾರೆ.
Comments are closed.